ಮಾದಿಗ ಸಮುದಾಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯುವಲ್ಲಿ ವಿಫಲವಾಗಿದೆ:ಪಿ ಎನ್ ರಾಮಯ್ಯ.

ತುಮಕೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮಾ.೮ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಧರಣಿಯ ಪೂರ್ವಭಾವಿ ಸಭೆಯು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಅಧ್ಯಕ್ಷರಾದ ಪಿ.ಎನ್.ರಾಮಯ್ಯ ಸಮಾಜದಲ್ಲಿ ತುಳಿತಕ್ಕೆ, ದೌರ್ಜನ್ಯಕ್ಕೆ ಒಳಗಾದ ಮೀಸಲಾತಿಯಿಂದ ವಂಚಿತರಾದ ಮಾದಿಗ ಸಮುದಾಯ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಪಡೆಯುವಲ್ಲಿ ವಿಫಲಗೊಂಡಿವೆ. ಈ ಜನಾಂಗ ಸಮಾನತೆಗಾಗಿ ಇಂದಿಗೂ ಹೋರಾಟ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಜನಾಂಗ ಈಗ ವಿದ್ಯಾವಂತರಾಗಿ ಒಳಮೀಸಲಾತಿಗಾಗಿ ಹೋರಾಟವನ್ನು ಮಾಡುತ್ತಾ ಬಂದಿದ್ದು, ಅಸ್ಪೃಶ್ಯ ಮಾದಿಗ ಸಮಾಜದ ಶ್ರೀಗಳು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಮಾದಿಗ ಸಂಘಟನೆ ಮುಖಂಡರು, ರಾಜ್ಯಾದ್ಯಂತ ಒಳ ಮೀಸಲಾತಿ ಬಗ್ಗೆ ವಿರಾಟಯಾತ್ರೆಯನ್ನು ಕೈಗೊಂಡು ಸದಾಶಿವ ಆಯೋಗ ವರದಿ ಜಾರಿಯಾಗಬೇಕು ಇಲ್ಲವಾದಲ್ಲಿ ಮುಂದಿನ ಚುನಾವಣೆಗಳಲ್ಲಿ ಆಳುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ.

ಬೆಂಗಳೂರಿನಲ್ಲಿ ನಡೆಯುವ ಸದಾಶಿವ ಆಯೋಗ ಜಾರಿಗೆ ಒತ್ತಾಯದ ಧರಣಿಯಲ್ಲಿ ಸಮುದಾಯದ ಮುಖಂಡರು, ರಾಜಕಾರಣಿಗಳು, ಸರ್ಕಾರಿ ನೌಕರರು, ಯುವ ಸಮುದಾಯ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಬಂಡೆ ಕುಮಾರ್ ಮಾತನಾಡುತ್ತಾ, ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು ಮಾದಿಗ ಸಮುದಾಯಕ್ಕೆ ಸದಾಶಿವ ಆಯೋಗ ಜಾರಿ ಮಾಡುವುದರ ಮೂಲಕ ಈ ಜನಾಂಗಕ್ಕೆ ಸಾಮಾಜಿಕ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿರುತ್ತಾರೆ. ಅದರಂತೆ ಸರ್ಕಾರ ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಆಟೋ ಶಿವರಾಜ್, ಬೆಳ್ಳಾವಿ ವೆಂಕಟೇಶ್, ಕೋರಾ ರಾಜಣ್ಣ, ಗೂಳೂರು ರಾಜಣ್ಣ, ರಾಮಮೂರ್ತಿ ಹೆಚ್.ಆರ್., ಲಕ್ಷ್ಮೀನಾರಾಯಣ, ನಾಗ್, ರಾಕೇಶ್, ಹನುಮಂತರಾಜ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!