ತುರುವೇಕೆರೆ ಕೋವಿಡ್ ಸೆಂಟರ್ ಗೆ ಪೌಷ್ಟಿಕಾಂಶವುಳ್ಳ ತರಕಾರಿಗಳನ್ನು ವಿತರಿಸಿದ-ಸಮಾಜ ಸೇವಕ ಡಿ.ಪಿ.ವೇಣುಗೋಪಾಲ್.

ತುರುವೇಕೆರೆ: ತಾಲೂಕಿನ ಗುಡ್ಡೇನಹಳ್ಳಿ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಸೆಂಟರ್ಗೆ ಸಮಾಜಸೇವಕ ದಬ್ಬೇಘಟ್ಟ ಡಿ.ಪಿ.ವೇಣುಗೋಪಾಲ್ ಹಾಗೂ ಸಹಭಾಗಿತ್ವ ತಂಡದ ವತಿಯಿಂದ ಪೌಷ್ಟಿಕಾಂಶವುಳ್ಳ ತರಕಾರಿಗಳನ್ನು ತಾಲ್ಲೂಕು ಧಂಡಾದಿಕಾರಿಗಳಾದ ನಯೀಂ ಉನ್ನೀಸಾ ಅವರ ಸಮ್ಮುಖದಲ್ಲಿ ನೀಡಲಾಯಿತು.

ಈ ವೇಳೆ ಸಮಾಜ ಸೇವಕ ಡಿ.ಪಿ.ವೇಣುಗೋಪಾಲ್ ಮಾತನಾಡಿ,ಕೋವಿಡ್ ಸೆಂಟರ್ ಗಳಲ್ಲಿನ ಸೋಂಕಿತರ ಆರೋಗ್ಯದ ದೃಷ್ಟಿಗಾಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ರೈತರು ಬೆಳೆದಿರುವ ಪೌಷ್ಟಿಕಾಂಶವುಳ್ಳ ತರಕಾರಿಗಳನ್ನು ನೇರವಾಗಿ ಖರೀದಿಸಿ, ಸೋಂಕಿತರಿಗಾಗಿ ನೀಡಲಾಗಿದೆ. ಕೋವಿಡ್ ಸೆಂಟರ್‌ ನ ಎಲ್ಲಾ ಸೋಂಕಿತರು ಶೀಘ್ರ ಗುಣಮುಖರಾಗಿ ಬಿಡುಗಡೆಗೊಂಡು ಕೊರೋನಾ ಮುಕ್ತರಾಗಲಿ ಎಂದು ಪ್ರಾರ್ಥಿಸಿದರು ಅಲ್ಲದೇ ಹಗಲಿರುಳೆನ್ನದೆ ತಾಲ್ಲೂಕಿನಲ್ಲಿ ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್ ಗಳಾದ ಕೋವಿಡ್ ಸೆಂಟರ್‌ನ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಸಮಸ್ತ ತಾಲೂಕು ಆಡಳಿತಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಈ ವೇಳೆ ತಹಶೀಲ್ದಾರ್ ನಯೀಂ ಉನ್ನೀಸಾ ಮಾತನಾಡಿ, ಸಮಾಜಸೇವಕ ಡಿ.ಪಿ. ವೇಣುಗೋಪಾಲ್ ಹಾಗೂ ಅವರ ತಂಡದವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು. ಅವರ ಸಮಾಜಮುಖಿ ಸೇವೆ ಇನ್ನಷ್ಟು ಉತ್ತಮವಾಗಿ ಸಾಗಲಿ ಎಂದು ಆಶೀಸಿದರು ಮತ್ತು ತಾಲೂಕಿನ ಸಮಸ್ತ ಜನತೆಯು ಕೊರೋನಾ ವಿರುದ್ಧ ಹೋರಾಡಲು ಸಹಕರಿಸಿ. ಕೊರೋನಾ ಮುಕ್ತ ತಾಲೂಕನ್ನಾಗಿ ಮಾರ್ಪಡಿಸುವುದೊಂದೆ ಗುರಿಯಾಗಿದೆ.ಹಾಗಾಗಿ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಂಡದ ಸುದರ್ಶನ್, ಮಂಜುನಾಥ್, ಶಿವಾನಂದ್, ಬಲರಾಮ್, ಪ್ರಸನ್ನ, ಶಾಹಿದ್, ಶಶಾಂಕ್, ಅಕ್ಷಯ್, ಜಯಂತ್, ಮಸೂದ್,ಡಿ.ಪಿ.ಪೃಥ್ವಿರಾಜ್, ಹಾಗೂ ಕಂದಾಯ ತನಿಖಾಧಿಕಾರಿ ಶಿವಕುಮಾರ್, ಗ್ರಾಮಲೆಕ್ಕಾಧಿಕಾರಿ ಅಣ್ಣಪ್ಪ, ಸೇರಿದಂತೆ ಮುಂತಾದವರು.

ವರದಿ-ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!