ಗುಬ್ಬಿ. ಮೀಡಿಯಾ ಬ್ಯಾಕ್ ಆಫೀಸ್ ವತಿಯಿಂದ 6ಲಕ್ಷ ವೆಚ್ಚದ ಆರೋಗ್ಯ ಸಲಕರಣೆ ತಾಲೂಕು ಆಡಳಿತಕ್ಕೆ ವಿತರಿಸಿದ ಮುಖ್ಯಸ್ಥ ರಘು.

ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಇಂತಹ ಮಹಾಮಾರಿ ಕೊರೋನಾ ನಿಂದ ಬಳಲುತ್ತಿರುವ ರೋಗಿಗಳಿಗೆ ಮುಕ್ತ ಸಹಾಯ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಗುಬ್ಬಿ ಮೀಡಿಯಾ ಬ್ಯಾಕ್ ಆಫೀಸ್ ಮುಖ್ಯಸ್ಥರಾದ ರಘು ತಿಳಿಸಿದರು‌.

ಅವರು ಪಟ್ಟಣದ ಮೀಡಿಯಾ ಬ್ಯಾಕ್ ಆಫೀಸಿನ ಆವರಣದಲ್ಲಿ ವೈದ್ಯಕೀಯ ಸಲಕರಣೆಗಳನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರ ಮಾಡುವ ಸಮಾರಂಭದಲ್ಲಿ ಮಾತನಾಡಿದ ಅವರು ಸುಮಾರು 6 ಲಕ್ಷ ರೂ ಅಧಿಕ ಆಧುನಿಕ ಸಲಕರಣೆಗಳನ್ನು ತಾಲೂಕು ವೈದ್ಯಾಧಿಕಾರಿಗಳಿಗೆ ನೀಡಿದ್ದು ಇದರಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ರೋಗಿಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಲ್ಲಿ ಉಪಸ್ಥಿತರಿದ್ದ ತಾಲೂಕು ದಂಡಾಧಿಕಾರಿ ಪ್ರದೀಪ್ ಕುಮಾರ್ ಹಿರೇಮಠ್ ಮಾತನಾಡಿ ಸಾರ್ವಜನಿಕರು ಕಟ್ಟುನಿಟ್ಟಿನ ಕ್ರಮ ಮುಂದುವರಿಸಬೇಕು ಈಗಾಗಲೇ ತಾಲೂಕಿನಲ್ಲಿ ಮಹಾಮಾರಿ ಕಾಯಿಲೆಗೆ ಸಾಕಷ್ಟು ಜನ ಬಲಿಯಾಗಿದ್ದು ಇದರಿಂದ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದ ಅವರು ಸಂಘ-ಸಂಸ್ಥೆಗಳು ಉದಾರ ಮನಸ್ಸಿನಿಂದ ಸಹಾಯಹಸ್ತ ಚಾಚಿದ್ದು ಇದರಿಂದ ರೋಗಿಗಳನ್ನು ಕಾಪಾಡುವಲ್ಲಿ ಯಶಸ್ವಿಯಾಗುತ್ತೇವೆ ದಾನಿಗಳ ಉದಾರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಆರೋಗ್ಯ ವೈದ್ಯಾಧಿಕಾರಿ ಬಿಂಧುಮಾಧವ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಮಹಾಮಾರಿ ಕಾಯಿಲೆಗೆ ಬಲಿಯಾಗುತ್ತಿದ್ದು ಇದನ್ನು ತಪ್ಪಿಸಲು ಸಾಕಷ್ಟು ಶ್ರಮಿಸುತ್ತಿದೆವೆ ಅದರಂತೆ ಸಾರ್ವಜನಿಕರು ತಾಲೂಕು ಆಡಳಿತ ಜೊತೆ ಹಾಗೂ ಕರೋನ ವಾರಿಯರ್ಸ್ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡು ಗುಣಮುಖರಾಗಬೇಕೆಂದು ಸಲಹೆ ನೀಡಿದರು ಇಂತಹ ಸಂಕಷ್ಟ ದ ಸಮಯದಲ್ಲಿ ಜನತೆಯ ಆರೋಗ್ಯ ಹಿತದೃಷ್ಟಿಯಿಂದ ಗುಬ್ಬಿ ನಗರದ ಮೀಡಿಯಾ ಬ್ಯಾಕಪ್ ಮುಖ್ಯಸ್ಥರು ನೀಡಿದಂತಹ ಆಕ್ಸಿಜನ್ ಯಂತ್ರಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ ಸಬ್ ಇನ್ಸ್ಪೆಕ್ಟರ್ ಜ್ಞಾನ ಮೂರ್ತಿ ಹಾಗೂ ಕಂದಾಯ ನಿರೀಕ್ಷಕ ರಮೇಶ್ ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು. ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!