ಗುಬ್ಬಿ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯದ ಅಭಿವೃದ್ಧಿಗೆ 5ಲಕ್ಷ ದೇಣಿಗೆ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.

ಗುಬ್ಬಿ: ಪಟ್ಟಣದ ದೇವಾಂಗ ಬೀದಿಯಲ್ಲಿ ರುವ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯದ ಅಭಿವೃದ್ಧಿ ಗಾಗಿ ಸಮುದಾಯ ಮುಖಂಡರ ಮನವಿ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಮಕೂರು ಜಿಲ್ಲಾ ನಿರ್ದೇಶಕ ರಾದ ಶ್ರೀಮತಿ ದಯಾಶೀಲ ಮತ್ತು ಗುಬ್ಬಿ ತಾಲೂಕು ಯೋಜನಾಧಿಕಾರಿ ಹರೀಶ್ ಇವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ವತಿಯಿಂದ 5ಲಕ್ಷ ದ ಚೆಕ್ ವಿತರಣೆ ಮಾಡಲಾಯಿತು.

ಚೆಕ್ ವಿತರಣೆ ನಂತರ ಮಾತನಾಡಿದ ಯೋಜನಾ ನಿರ್ದೇಶಕಿ ಶ್ರೀ ಕ್ಷೇತ್ರದ ವತಿಯಿಂದ ಧಾರ್ಮಿಕ ಕಾರ್ಯಗಳಿಗೆ ಮತ್ತು ದೇವಾಲಯದ ಜೀರ್ಣೋದ್ಧಾರ ಕ್ಕೆ ಪೂಜ್ಯರಾದ ಶ್ರೀ ವೀರೇಂದ್ರ ಹೆಗ್ಗಡೆ ಯವರು ಸಹಾಯ ಮಾಡುತ್ತಿದ್ದಾರೆ. ಜೊತೆಗೆ ಗ್ರಾಮಗಳ ವ್ಯಾಪ್ತಿಯಲ್ಲಿ ಬಲುವ ಕೆರೆಗಳ ಅಭಿವೃದ್ಧಿ ಗಾಗಿ ಕೆರೆಗಳ ಹೂಳು ತೆಗೆಯುವ ಕಾರ್ಯಕ್ರಮ ವನ್ನು ರೂಪಿಸಿದ್ದು ಅದರಂತೆ ಗುಬ್ಬಿ ತಾಲೂಕಿನ ಕೆಲವು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಂತರ್ಜಲ ವೃಧಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ ಗೆ ಶ್ರೀ ಕ್ಷೇತ್ರವು ಶ್ರಮವಹಿಸುತ್ತಿದೆ.

ಇದರ ಜೋತೆಯಲ್ಲಿ ಕೃಷಿ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಹೋಬಳಿ ಕೇಂದ್ರ ದಲ್ಲಿ ಕೃಷಿ ಯಂತ್ರ ಧಾರೆಗಳನ್ನು ತೆರೆದು ರೈತರಿಗೆ ಅನುಕೂಲವಾಗುವ ಸಲಕರಣೆಗಳನ್ನು. ಯಂತ್ರಗಳ ನ್ನು ಬಾಡಿಗೆ ದರದಲ್ಲಿ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ರೈತರು ಪಡೆದು ಸ್ವಾವಲಂಬಿ ಜೀವನ ನೆಡೆಸುತ್ತೀದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದರು.ಕಾರ್ಯಕ್ರಮ ದಲ್ಲಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!