‘ದಬಂಗ್ 4’ ಚಿತ್ರಕ್ಕೆ ನಿರ್ದೇಶಕ ಫಿಕ್ಸ್

ಮುಂಬೈ, ಡಿಸೆಂಬರ್ 31: ಸಲ್ಮಾನ್ ಖಾನ್ ನಟಿಸಿರುವ ಸಿನಿಮಾಗಳಲ್ಲೆ ಪ್ರೇಕ್ಷಕರನ್ನು ರಂಜಿಸಿದ ಪಾತ್ರಗಳಲ್ಲಿ ಚುಲ್ಬುಲ್ ಪಾಂಡೆ ಕೂಡ ಒಂದು. ದಬಾಂಗ್ ಎಲ್ಲಾ ಮೂರು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿ ಚುಲ್ಬುಲ್ ಪಾಂಡೆಯಾಗಿ ಸಲ್ಮಾನ್ ಅಭಿನಯವು ಪ್ರೇಕ್ಷಕರನ್ನು ರಂಜಿಸಿತ್ತು. ಈಗ ‘ದಬಾಂಗ್4’ತೆರೆಮೇಲೆ ಬರಲು ಸಿದ್ದಗೊಳ್ಳುತ್ತಿರುವುದು ತಿಳಿದ ವಿಚಾರವೇ. ಆದರೇ ನಿರ್ದೇಶಕರ ಆಯ್ಕೆಯಲ್ಲಿ ಇದ್ದ ಗೊಂದಲಕ್ಕೆ ಈಗ ತೆರೆ ಬಿದ್ದಂತೆ ಈ ಚಿತ್ರದ ನಿರ್ದೇಶಕರಾಗಿ ತಿಗ್ಮಾನ್ಶು ದುಲಿಯಾ ಬಹುತೇಕ ಅಂತಿಮವಾಗಿದೆ ಎನ್ನಲಾಗುತ್ತಿದೆ.

ಈ ಚಿತ್ರಕ್ಕಾಗಿ ತಿಗ್ಮಾನ್ಶು ಹೇಳಿದ ಕಥೆ ಸಲ್ಮಾನ್‌ಗೆ ಇಷ್ಟವಾಯಿತು. ತಿಗ್ಮಾನ್ಶು ವರ್ಷಗಳಿಂದ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಂಪೂರ್ಣ ಪೂರ್ತಿಗೊಳಿಸಿ ಸ್ಕ್ರಿಪ್ಟ್ ಸಲ್ಮಾನ್ ಕೇಳಿಸಲಿದ್ದಾರೆಂದು ಹೇಳಲಾಗುತ್ತಿದೆ. ತಿಗ್ಮಾನ್ಶು ನಿರ್ದೇಶನದ ‘ಪಾನ್ ಸಿಂಗ್ ತೋಮರ್’ ಮತ್ತು ‘ಸಾಹೇಬ್ ಬೀವಿ ಗ್ಯಾಂಗ್‌ಸ್ಟರ್’ ಚಿತ್ರಗಳೊಂದಿಗೆ ಪ್ರೇಕ್ಷಕರನ್ನ ರಂಜಿಸಿದ್ದರು. ಸಲ್ಮಾನ್ ಖಾನ್ ಸದ್ಯ ಎಂಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ ಮತ್ತು ದಬಂಗ್ 4 ಹೊಸ ಚಿತ್ರ ಯಾವಾಗ ತೆರೆ ಕಾಣಲಿದೆಯೋ ಕಾದು ನೋಡಬೇಕಾಗಿದೆ.

error: Content is protected !!