ಎಸ್‌ಎಸ್‌ಎಲ್‌ಸಿ/ಪಿಯುಸಿ ಅಥವಾ ಐಟಿಐ ಪಾಸಾದವರಿಗೆ ಉದ್ಯೋಗಕ್ಕಾಗಿ ನೇರ ಸಂದರ್ಶನ


ತುಮಕೂರು : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ,Bagadia Chaithra Industries Pvt. Ltd. And Nash Industries India Pvt. Ltd  ಸಂಸ್ಥೆಗಳ ಸಹಭಾಗಿತ್ವದಲ್ಲಿ ಉದ್ಯೋಗ ಕಲ್ಪಿಸಲು ನಿರುದ್ಯೋಗಿ ಪುರುಷರಿಗಾಗಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ/ಪಿಯುಸಿ ಅಥವಾ ಐಟಿಐ(ಫಿಟ್ಟರ್, ಟರ್ನರ್, ಟೂಲ್ ಅಂಡ್ ಡೈ ಮೇಕಿಂಗ್) ಪಾಸಾದ ಅಭ್ಯರ್ಥಿಗಳು ಈ ಸಂರ್ದಶನದಲ್ಲಿ ಭಾಗವಹಿಸಬಹುದಾಗಿದೆ.

ತುಮಕೂರು ನಗರದ ಚರ್ಚ್ ಸರ್ಕಲ್ ಹತ್ತಿರ, ಡಿಸಿಸಿ ಬ್ಯಾಂಕ್ ಎದುರು ಇರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್ 26 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸಲಿಚ್ಛಿಸುವ ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಶಾಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬಹುದಾಗಿದೆ. ಆಯ್ಕೆಯಾದವರಿಗೆ 12 ಸಾವಿರ ರೂ.ಗಳ ವೇತನವನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0816-2278488/ ಮೊ.ಸಂ: 6360700086 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಕವಿತ ಎಸ್. ತಿಳಿಸಿದ್ದಾರೆ.

error: Content is protected !!