ಗುಬ್ಬಿ: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಿಟ್ಟೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಭಿವೃದ್ಧಿ.ಸದಸ್ಯೆ ಡಾ.ನವ್ಯ ಬಾಬು.

ನಿಟ್ಟೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶದ ರಸ್ತೆಗಳು 20 ವರ್ಷಗಳಿಂದ ಹಾಳಾಗಿತ್ತು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ವಿಶೇಷ ಅನುದಾನದಡಿಯಲ್ಲಿ 7.5 ಕೋಟಿ ರೂಗಳ ಅನುದಾನವನ್ನು ಬಿಡುಗಡೆಗೊಳಿಸಿದ್ದು ಇದರಿಂದ ನಿಟ್ಟೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶಗಳ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಿಟ್ಟೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಡಾ.ನವ್ಯ ಬಾಬು ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯ ಕಡೆ ಪಾಳ್ಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ ಮಾಧ್ಯಮ ದವರೊಂದಿಗೆ ಮಾತನಾಡಿ ಬಿಜೆಪಿ ಸರ್ಕಾರದಿಂದ ನೀಡಿದಂತಹ ಅನುದಾನವನ್ನು ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗೆ ನಿಯೋಜಿಸಲಾಗಿದ್ದು ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು ಶೇ. 80 ರಷ್ಟು ಕಾಮಗಾರಿ ಮುಗಿದಿದ್ದು ಇದರಿಂದ ನನಗೆ ಮತ ನೀಡಿದಂತಹ ಜನಗಳ ಆಶೋತ್ತರ ವನ್ನು ಈಡೇರಿಸಿದೆ ನೆಂಬ ನೆಮ್ಮದಿ ಇದೆ ಎಂದರು.

ನಿಟ್ಟೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಾದರಿ ಕ್ಷೇತ್ರ ವಾಗಲಿದೆ. ನಮ್ಮ ಮನವಿಗೆ ಸ್ಪಂಧಿಸಿದ ಮಾನ್ಯ ಮುಖ್ಯಮಂತ್ರಿ ಗಳು ಜಿ.ಪಂ.ಕ್ಷೇತ್ರದ ಅಭಿವೃದ್ಧಿ ಗೆ ಅನುದಾನ ನೀಡಿದ್ದು ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದು ನಮ್ಮ ಕ್ಷೇತ್ರ ವನ್ನು ತುಮಕೂರು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರ ವನ್ನಾಗಿ ಮಾಡುವ ವಿಶ್ವಾಸವಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ಸರ್ಕಾರದ ವತಿಯಿಂದ ತಂದು ಗ್ರಾಮಗಳ ಅಭಿವೃದ್ಧಿ ಗೆ ಮುಂದಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನುದಾನವನ್ನು ಬಿಡುಗಡೆಗೆ ಸಹಕರಿಸಿದ ಸಂಸದರು. ಉಸ್ತುವಾರಿ ಸಚಿವರಿಗೆ ನಾವು ಚಿರಖುಣಿಗಳು. ಹಲವು ವರ್ಷಗಳಿಂದ ಅಭಿವೃದ್ಧಿ ಯಾಗದೆ ಇದ್ದ ನಿಟ್ಟೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ರುವ ಗ್ರಾಮದ ಅಭಿವೃದ್ಧಿ ಕಾಮಗಾರಿ ಗೆ ಅಗತ್ಯ ಅನುದಾನವನ್ನು ತುರ್ತಾಗಿ ನೀಡುವಲ್ಲಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಗಳು ತ್ವರಿತವಾಗಿ ನೆಡೆಯಲು ಸಹಕಾರ ನೀಡಿದ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಾಧುಸ್ವಾಮಿ ಸಂಸದ ಬಸವರಾಜು ರವರಿಗೆ ನಾವು ಚಿರಖುಣಿಗಳಾಗಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಮಗಾರಿ ವೀಕ್ಷಣೆಯ ಸಮಾರಂಭದಲ್ಲಿ ಪಿಬಿ ಚಂದ್ರಶೇಖರ್ ಬಾಬು ಮುಖಂಡರಾದ ಬಲರಾಮನ ಗ್ರಾಮ ಪಂಚಾಯತಿ ಸದಸ್ಯರುಗಳಾದ ರಘುರಾಮ್ ರೇಣುಕಪ್ಪ ಲಕ್ಷ್ಮೀನರಸಯ್ಯ ರಾಜಣ್ಣ ಚಿಕ್ಕ ನರಸಯ್ಯ ರವೀಶ್ ಊರಿನ ಗ್ರಾಮಸ್ಥರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು

error: Content is protected !!