ತುರುವೇಕೆರೆ:”ರಾಮಸಾಗರ” ಗ್ರಾಮದ, “ಅಭಿವೃದ್ಧಿಯೇ” ನಮ್ಮ ಗುರಿ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ರಾಮಸಾಗರ ಗ್ರಾಮದಲ್ಲಿ ಸ್ಥಳೀಯ ಗ್ರಾಮಸ್ಥರೊಂದಿಗೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರ ಜೊತೆಗೂಡಿ ಗ್ರಾಮದ ಅಭಿವೃದ್ಧಿಗಾಗಿ ಬೈತರಹೊಸಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಂ.ಎಲ್ ಪ್ರಕಾಶ್ ಮತ್ತು ಸದಸ್ಯರಾದ ಶ್ರೀಮತಿ ಮಂಜುಳಾ ಶಿವಲಿಂಗು ರವರ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಗ್ರಾ.ಪಂ. ಅಧ್ಯಕ್ಷರಾದ ಎಂ.ಎಲ್. ಪ್ರಕಾಶ್ ರವರು ಮಾತನಾಡಿ ‌ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿ-ಹಳ್ಳಿಗೂ ಭೇಟಿ ನೀಡಿ ಮೂಲಸೌಲಭ್ಯಗಳ ಕೊರತೆಗಳನ್ನು ಮಾಹಿತಿ ಪಡೆದು, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಒಂದೊಳ್ಳೆ ಉತ್ತಮ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲಾ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದು, ಶಿಕ್ಷಣ ಮತ್ತು ಕುಡಿಯುವ ನೀರು, ಮೂಲಸೌಕರ್ಯವನ್ನು ಪೂರೈಸುವ ಎಲ್ಲಾ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿದರು. ಮತ್ತು ಪುರಾತನ ಪ್ರಸಿದ್ಧ ಶ್ರೀ ವರದರಾಜ ಸ್ವಾಮಿ ದೇವಾಲಯವು ಇತಿಹಾಸ ಹೊಂದಿದ್ದು, ಆದರೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ದೇವಾಲಯದ ಅಭಿವೃದ್ಧಿಗಾಗಿ ವಿಶೇಷವಾಗಿ ಸರ್ಕಾರದ ಅನುಮತಿ ಪಡೆದು, ಗ್ರಾಮ ಪಂಚಾಯಿತಿಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು, ಅಂಗನವಾಡಿ ಜಾಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಮುದಾಯ ಭವನದ ರಸ್ತೆ ವಿಚಾರವನ್ನು ಸಹಾ ಶೀಘ್ರದಲ್ಲಿ ಬಗೆಹರಿಸಲಾಗುವುದು, ರಾಮಸಾಗರ ಗ್ರಾಮದ ಅಭಿವೃದ್ಧಿಯೇ ನಮ್ಮ ಗುರಿ, ಗ್ರಾಮಸ್ಥರು ಸಹಕರಿಸುವಂತೆ ಮನವಿ ಮಾಡಿದರು.

ಈ ವೇಳೆ ಸದಸ್ಯರಾದ ಶ್ರೀಮತಿ ಮಂಜುಳಾ ಶಿವಲಿಂಗು ಅವರು ಮಾತನಾಡಿ, ಪುರಾತನ ಪ್ರಸಿದ್ಧ ಶ್ರೀ ವರದರಾಯಸ್ವಾಮಿ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿಸಲಾಗಿದೆ. “ಸಿ” ಗ್ರೇಡ್ ದೇವಾಲಯವಾದ್ದರಿಂದ, ಸರ್ಕಾರಕ್ಕೆ ಯಾವುದೇ ಆದಾಯವಿಲ್ಲದ ಕಾರಣ, ಕೆಲವು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅಭಿವೃದ್ಧಿಗಾಗಿ ಅನುದಾನಗಳ ಕೊರತೆಯಿದ್ದು, ಅಭಿವೃದ್ಧಿಗೆ ಮುಂಬರುವ ದಾನಿಗಳು ಕಷ್ಟಕರವಾಗಿದೆ. ಹೀಗಿರುವಾಗ ಹಲವು ವರ್ಷಗಳಿಂದ ಕೆಲ ಸ್ವಯಂ ಪ್ರೇರಿತರಾಗಿ ಸ್ವಾಮಿಯ ಒಕ್ಕಲಿನ ಭಕ್ತರಗಳು ತಮ್ಮ ಕೈಲಾದ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಅಂತಹ ದಾನಿಗಳಿಗೆ ಸರ್ಕಾರವು ಪ್ರೋತ್ಸಾಹಿಸಬೇಕು.ಅಲ್ಲದೇ ದೇವಸ್ಥಾನದ ಅಭಿವೃದ್ಧಿಗಾಗಿ ಬರುವಂತಹ ಭಕ್ತರು ಹಾಗೂ ದಾನಿಗಳು ಸರ್ಕಾರದ ಅನುಮತಿಗಳನ್ನು ಪಡೆದು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು, ಇದಕ್ಕೆ ಗ್ರಾಮಸ್ಥರು ಹಾಗೂ ಸಂಬಂಧಪಟ್ಟ ಇಲಾಖೆಗಳು ಸಹಕರಿಸಬೇಕು. ಗ್ರಾಮಸ್ಥರ ಸಹಕಾರದೊಂದಿಗೆ ಅಭಿವೃದ್ಧಿ ಸಮಿತಿಯೊಂದನ್ನು ‌ರಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿ ದೇವಾಲಯಕ್ಕೆ ಹಾಗೂ ಗ್ರಾಮಕ್ಕೆ ಸೌಲಭ್ಯಗಳನ್ನು ಪಡೆಯಲು ಪ್ರಯತ್ನ ಪಡಬಹುದು ಎಂದು ಅಭಿಪ್ರಾಯಪಟ್ಟರು.ಹಾಗೂ ಬೇಸಿಗೆಯಂತಹ ಸಮಯದಲ್ಲಿ ಗ್ರಾಮಗಳಿಗೆ ನೀರಿನ ಸಮಸ್ಯೆಯಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಸ್ಥಳೀಯ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಚರ್ಚೆ ಮಾಡಿ, ಗ್ರಾಮ ಹಾಗೂ ದೇವಾಲಯ ಅಭಿವೃದ್ಧಿಗಾಗಿ ಮುಂಬರುವಂತಹ ದಾನಿಗಳು ಸರ್ಕಾರದ ಅನುಮತಿ ಪಡೆದು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಮ್ಮ ಸಹಕಾರ ಇರಲಿದೆ ಗ್ರಾಮಕ್ಕೆ, ದೇವಾಲಯಕ್ಕೆ, ಒಳಿತಾಗಲಿ ಎಂದು ಎಲ್ಲರೂ ಸಹ ಒಪ್ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ವರದರಾಯ ಸೇವಾ ಸಹಕಾರ ಸಂಘದ ರಾಜೇಶ್, ಆನಂದ್ಅಯ್ಯಂಗಾರ್, ಶ್ರೀಧರ್ ಅಯ್ಯಂಗಾರ್,ರಾಜಾಅಯ್ಯಂಗಾರ್, ಸಚ್ಚಿದಾನಂದ, ಮಧು ಅಯ್ಯಂಗಾರ್, ವೇಣುಗೋಪಾಲ್, ವಿಜಯಲಕ್ಷ್ಮಿ, ಸಹ ಪದಾಧಿಕಾರಿಗಳು, ಚಿಕ್ಕ ಬೀರನಕೆರೆ ಗ್ರಾಮದ ಶಿವಣ್ಣ, ದಾಸೇಗೌಡ, ಲಕ್ಷ್ಮಣಪ್ಪ, ನಾಗರಾಜು, ಜಡೇಯ ಗ್ರಾಮದ ನಿವೃತ್ತ ಸೈನಿಕ ಸಿದ್ದಲಿಂಗಯ್ಯನವರು, ಗ್ರಾಮದ ಮಾ. ಗ್ರಾ.ಪಂ‌.ಸದಸ್ಯರಾದ ರವಿಚಂದ್ರ, ಆರ್.ಡಿ.ರಾಜು,ಶ್ರೀನಿವಾಸ್, ಗೋವಿಂದರಾಜು, ಹನುಮಯ್ಯ, ನಾಗೇಶ್, ನಂದೀಶ್, ಜವರೇಗೌಡ್ರು ವೆಂಕಟೇಶ್, ಕೆಂಪರಾಜು, ಗೋವಿಂದಪ್ಪ, ಗಿರೀಶ್,ಶಂಕರ್, ಹರೀಶ್, ಸೇರಿದಂತೆ ಸ್ಥಳೀಯ ಗ್ರಾಮಸ್ಥರು, ಅಕ್ಕಪಕ್ಕದ ಮುಂತಾದ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವರದಿ-ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!