ರಾಯಚೂರು: ಬಸ್ ಡಿಕ್ಕಿ ತಂದೆ, ಮಗಳ ಸಾವು

ರಾಯಚೂರು: ಸರ್ಕಾರಿ ಬಸ್ ಡಿಕ್ಕಿ ಆಗಿ ಕಾರಿನಲ್ಲಿದ್ದ ತಂದೆ, ಮಗಳ ಸಾವು ಸಂಭವಿಸಿದ ದುರ್ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಾ ಬಳಿ ನಡೆದಿದೆ. ಅಪಘಾತದಲ್ಲಿ ಪ್ರಸಾದ್ (50), ವಿದ್ಯಾ (11) ಎಂಬವರು ಸಾವನ್ನಪ್ಪಿದ್ದಾರೆ. ಮೃತ ಪ್ರಸಾದ್​ ಅಂಬಾರಮಠದ ಅರ್ಚಕರಾಗಿದ್ದರು ಎಂದು ತಿಳಿದುಬಂದಿದೆ. ಅಂಬಾರಮಠದಿಂದ ಮಂತ್ರಾಲಯಕ್ಕೆ ತೆರಳುವಾಗ ಘಟನೆ ನಡೆದಿದೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!