ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲು: ಪೋಷಕರ ಆಕ್ರಂದನ.

ತಿಪಟೂರು:ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಗರದ ಮಾರನಗೆರೆಯಲ್ಲಿ ನಡೆದಿದೆ.

ಶಾರದ ನಗರ ನಿವಾಸಿ ಕೆಇಬಿ ನೌಕರ ಮಂಜುನಾಥ್ ರವರ ಪುತ್ರ ತರುಣ್(11), ಸರ್ಕಾರಿ ಆಸ್ಪತ್ರೆ ನೌಕರ ದಿನೇಶ್ ರವರ ಪುತ್ರ ದೀಪಕ್ (13), ಬಿ ಎಂ ಟಿ ಸಿ ನೌಕರ ಶಶಿಧರ್ ರವರ ಪುತ್ರ ಕೌಶಿಕ್ (13) ವರ್ಷ ಮೃತ ಬಾಲಕರು.

ಇಂದು ಶಾಲೆ ರಜೆ ಇದ್ದ ಕಾರಣ ಬೆಳಗ್ಗೆಯೇ 6 ಜನ ಸ್ನೇಹಿತರು ಮಾರನಗೆರೆ ಕೆರೆಯಲ್ಲಿ ಈಜಾಡಲು ತೆರಳಿದ್ದಾರೆ. ಇವರಲ್ಲಿ ಓರ್ವ ಬಾಲಕ ನೀರಿನಲ್ಲಿ ಮುಳಗಲೆತ್ನಿಸಿದ್ದಾನೆ, ಇದನ್ನ‌ ಕಂಡ ಮತ್ತಿಬ್ಬರು ಆತನನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಸಾದ್ಯವಾಗದೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ.

ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ತೆರಳಿ ಮೃತ ಬಾಲಕರ ಶವಗಳನ್ನ ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ‌.

ಇದ್ದ ಒಂದೊಂದು ಮಕ್ಕಳನ್ನೂ ಕಳೆದುಕೊಂಡ ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ದುಃಖ ಮಡುಗಟ್ಟಿದ್ದು ಬಾಳಿ ಬದುಕಬೇಕಾದ ಮಕ್ಕಳು ಶವಗಾರದಲ್ಲಿ ಮಲಗಿರುವುದನ್ನ ಕಂಡು ಸಾರ್ವಜನಿಕರು ಮಮ್ಮಲ ಮುರುಗಿದರು.

Leave a Reply

Your email address will not be published. Required fields are marked *

error: Content is protected !!