ಗುಬ್ಬಿ: ಜಿಲ್ಲಾಧಿಕಾರಿಗಳ ನಡೆ.ಹಳ್ಳಿಯ ಕಡೆ ವಿನೂತನ ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಕಾಡಶೆಟ್ಟಿಹಳ್ಳಿಗ್ರಾಮ.

ಸರ್ಕಾರದ ಆದೇಶದಂತೆ ಗ್ರಾಮಗಳ ಸಮಸ್ಯೆ ಪರಿಹಾರಿಸುವ ನಿಟ್ಟಿನಲ್ಲಿ ಸರ್ಕಾರ ವಿನೂತನ ಕಾರ್ಯ ಕ್ರಮ ಜಾರಿಗೋಳಿಸಿದ್ದು ಅದರಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಗಳ ನಡೆ ಹಳ್ಳಿ ಯ ಕಡೆ ಎಂಬ ಕಾರ್ಯ ಕ್ರಮದಡಿಯಲ್ಲಿ ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಕಾಡಶೆಟ್ಟಿಹಳ್ಳಿಗ್ರಾಮ ಆಯ್ಕೆ ಯಾಗಿದ್ದು ನಾಳೆ ಈ ಕಾರ್ಯಕ್ರಮ ಕಾಡಶೆಟ್ಟಿಹಳ್ಳಿಯ ಸರ್ಕಾರಿ ಶಾಲೆಯ ಆವರಣದಲ್ಲಿ ನೆಡಲಿದೆ. ಈ ಕಾರ್ಯಕ್ರಮ ಕ್ಕೆ ಜಿಲ್ಲಾ ಧಿಕಾರಿಗಳು.ಉಪ ವಿಭಾಗಾಧಿಕಾರಿಗಳು.ಕಂದಾಯ ಇಲಾಖೆ.ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಬೆಳಿಗ್ಗೆ 10.ರಿಂದ ಸಂಜೆ 5 ಗಂಟೆಯ ವರೆವಿಗೆ ಈ ಕಾರ್ಯಕ್ರಮ ನೆಡೆಯಲಿದೆ ಎಂದು ಗುಬ್ಬಿ ತಾಲೂಕು ದಂಡಾಧಿಕಾರಿ ಡಾ. ಪ್ರದೀಪ್ ಕುಮಾರ್ ಹಿರೇಮಠ್ ತಿಳಿಸಿದ್ದಾರೆ. ಇನ್ನೂ ಕಾರ್ಯಕ್ರಮದ ಸ್ಥಳದ ಜವಾಬ್ದಾರಿ ವಹಿಸಿರುವ ಕಡಬ ನಾಡ ಕಛೇರಿಯ ಉಪ ತಹಶೀಲ್ದಾರ್ ರಾಜೇಂದ್ರ ಕುಮಾರ್ ಹಾಗೂ ಕಡಬ ಹೋಬಳಿ ಕಂದಾಯ ನೀರೀಕ್ಷಕರಾದ ನಾಗಭೂಷಣ್ ಸ್ಥಳದಲ್ಲಿದ್ದು ಸಾರ್ವಜನಿಕರ ಬೇಟಿಗೆ ಮತ್ತು ಮನವಿ ಸಲ್ಲಿಸಲು ಎಲ್ಲಾ ರೀತಿಯಲ್ಲಿ ಸಕಲ ಸೌಲಭ್ಯಗಳನ್ನು ರೂಪಿಸಿದ್ದು ಬರುವ ಸಾರ್ವಜನಿಕ ರಿಗೆ ತೊಂದರೆ ಯಾಗದಂತೆ ಪ್ರತ್ಯೇಕ ದೂರು ಸಂಗ್ರಹ ಕೇಂದ್ರಗಳನ್ನು ತೆರೆದಿದ್ದು ಕೊವೀಡ್ ನಿಯಮದಂತೆ ಅಗತ್ಯ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದ್ದು.ಈ ಕಾರ್ಯಕ್ರಮ ದ ಸದುಪಯೋಗ ವನ್ನು ಸಾರ್ವಜನಿಕರು ಪಡೆದುಕೊಂಡು ಕೊಳ್ಳಲು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!