ಒಮೈಕ್ರಾನ್‌ಗಿಂತ ಡೇಂಜರ್.. ಮತ್ತೊಂದು ಹೊಸ ರೂಪಾಂತರಿ ಫ್ರಾನ್ಸ್‌ನಲ್ಲಿ ಪತ್ತೆ!

ಪ್ಯಾರಿಸ್: ಒಮೈಕ್ರಾನ್ ಆರ್ಭಟ ಮುಂದುವರಿದಿರುವಾಗಲೇ ಮತ್ತೊಂದು ಹೊಸ ರೂಪಾಂತರಿ ಪತ್ತೆಯಾಗಿದೆ. ಒಮೈಕ್ರಾನ್‌ಗಿಂತ ವೇಗವಾಗಿ ಸೋಂಕು ಹರಡುತ್ತ ಆತಂಕ ಉಂಟುಮಾಡುತ್ತಿದೆ. ಹೊಸ ರೂಪಾಂತರವನ್ನು IHU (b.1.640.2) ಎಂದು ಕರೆಯಲಾಗುತ್ತದ್ದು, ಫ್ರಾನ್ಸ್ ನಲ್ಲಿ ಪತ್ತೆ ಹಚ್ಚಲಾಗಿದೆ.

ಫ್ರಾನ್ಸ್‌ನ IHU ಸೋಂಕಿನ ಬಗ್ಗೆ ಸಂಶೋಧನೆ ಮಾಡುತ್ತಿರುವ ವಿಜ್ಞಾನಿಗಳು ಈ ಹೊಸ ರೂಪಾಂತರವನ್ನು ಗುರುತಿಸಿದ್ದಾರೆ. ಮಾರ್ಸಿಲ್ಲೆ ಎಂಬ ನಗರದಲ್ಲಿ ಪ್ರಸ್ತುತ 12 ಪ್ರಕರಣಗಳು ದೃಢಪಟ್ಟಿವೆ. ಅವರೆಲ್ಲರೂ ಆಫ್ರಿಕಾದ ಕ್ಯಾಮರೂನ್ ದೇಶದಿಂದ ಬಂದವರು ಎಂದು ಗುರುತಿಸಲಾಗಿದೆ.

ಈ ರೂಪಾಂತರದಲ್ಲಿ 46 ಹೊಸ ರೂಪಾಂತರಗಳಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇದು ಒಮಿಕ್ರಾನ್‌ ಸೋಂಕಿಗಿಂತ ಹೆಚ್ಚು ವೇಗವಾಗಿ ಹರುಡುತ್ತದೆ. ಲಸಿಕೆ ನೀಡಿದರು ಸಹ ಪ್ರಯೋಜನವಿಲ್ಲ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಈ ಹೊಸ ರೂಪಾಂತರವು ಇತರ ದೇಶಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು WHO ಹೇಳಿಕೊಂಡಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯ ವೆರಿಯಂಟ್ ಅಂಡರ್ ಇನ್ವೆಸ್ಟಿಗೇಶನ್ ಪಟ್ಟಿಗೆ ಸೇರಿಸಲಾಗಿದೆ. ರೂಪಾಂತರದಲ್ಲಿರುವ ಹಾರ್ನ್ ಪ್ರೋಟೀನ್‌ಗಳು N501Y ಮತ್ತು E484K ಸೇರಿದಂತೆ 14 ಬದಲಾವಣೆಗಳಿಗೆ ಒಳಗಾಗಿವೆ ಮತ್ತು ಕರೋನಾ ವೈರಸ್‌ನಲ್ಲಿರುವ ಇತರ 9 ಅಮೈನೋ ಆಮ್ಲಗಳನ್ನು ಹೊಂದಿಲ್ಲ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದಾಗ್ಯೂ, ಹೊಸ ರೂಪಾಂತರಗಳು ಸೃಷ್ಟಿಯಾಗುತ್ತಲೆ ಇರುತ್ತವೆ ಎಂದು ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಲ್ ಡಿಂಗ್ ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು, ಹೊಸ ರೂಪಾಂತರ ಎಷ್ಟು ಅಪಾಯಕಾರಿ ಎಂಬುದನ್ನು ಕಂಡುಹಿಡಿಯಲು ಇನ್ನೂ ಕೆಲವು ವರ್ಷಗಳು ಬೇಕಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

error: Content is protected !!