ತುರುವೇಕೆರೆ: ಮಾರ್ಚ್ 16ಕ್ಕೆ ದಲಿತ ವಿರೋಧಿ ಧೋರಣೆ ಖಂಡಿಸಿ “ಅನಿರ್ದಿಷ್ಟಾವಧಿ ಧರಣಿ”- ಜಗದೀಶ್.

ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿ ಹುಲ್ಲೇಕೆರೆ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿವೇಶನ ಮಂಜೂರು ಮಾಡಲು ನಿರ್ಲಕ್ಷ ಹಾಗೂ ತಾರತಮ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ಅನಿರ್ದಿಷ್ಟಾವಧಿ ಧರಣಿಯನ್ನು ಮಾ.16ನೇ ಮಂಗಳವಾರ ಹುಲ್ಲೇಕೆರೆ ಗ್ರಾಮ ಪಂಚಾಯಿತಿ ಮುಂಭಾಗ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ, ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಡಿ.ಎಸ್.ಎಸ್ ಅಧ್ಯಕ್ಷ ‌ಕುಣಿಕೇನಹಳ್ಳಿ ಜಗದೀಶ್ ತಿಳಿಸಿದ್ದಾರೆ.

ಅನಿರ್ದಿಷ್ಟಾವಧಿ ಧರಣಿ ಕುರಿತು ಮಾತನಾಡಿದ ಅವರು, ಹುಲ್ಲೇಕೆರೆ ಗ್ರಾಮದಲ್ಲಿ ಸುಮಾರು 150 ದಲಿತ ಕುಟುಂಬಗಳು ವಾಸವಿದ್ದು, ಸರಿ ಸುಮಾರು 69 ನಿವೇಶನಗಳನ್ನು ಸರ್ವೆ ನಂಬರ್ 118 ರ 5 ಎಕರೆ 1 ಗುಂಟೆ ಜಮೀನು ಮಂಜೂರು ಮಾಡಿರುವುದು ಸರಿಯಷ್ಟೇ. ಮೂಲತಹ ಈ ಸರ್ವೆ‌ ನಂಬರಿನ ಜಮೀನು ಕುಲವಾಡಿಕೆ ಇನಾಂ ಜಮೀನು ಆಗಿದ್ದು, ದಲಿತರಿಗೆ ಮಾತ್ರವೇ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಆಗಿನ ಹಿರಿಯ ದಲಿತರ ಸದುದ್ದೇಶದಿಂದ ನಿವೇಶನ ಸಂಖ್ಯೆ 59 ಮತ್ತು 62ರನ್ನು ಸಹಾ ಖಾಲಿ ಉಳಿಸಿಕೊಂಡಿತ್ತು. ಪ್ರಸ್ತುತ ಈಗಲೂ ಸಹ ಖಾಲಿ ಇರುತ್ತದೆ. ಇದನ್ನು ಗ್ರಾಮಸ್ಥರು ಮನಗಂಡು ದಲಿತ ಕಾರ್ಯಕ್ರಮಗಳಿಗೆ ಶುಭ ಸಭೆ, ಸಮಾರಂಭಗಳಿಗೆ, ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಈ ಎರಡು ನಿವೇಶನಗಳು ಒಂದು ಸಮುದಾಯ ಭವನಕ್ಕೆ ಸೂಕ್ತವಾಗಿರುತ್ತದೆ ಎಂದು, ಕಳೆದ ಐದು ವರ್ಷಗಳಿಂದಲೂ ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸೌಧದ ವರೆಗೂ ನಿವೇಶನಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡುವಂತೆ ಕೋರಿ ಅರ್ಜಿ ಸಲ್ಲಿಸುತ್ತಾ ಬಂದಿದ್ದರೂ ಸಹಾ,ಇಂದಿಗೂ ಎಲ್ಲರೂ ಸಹಾ ದಲಿತ ವಿರೋಧಿ ನೀತಿ ಅನುಸರಿಸಿಕೊಂಡು ಬಂದಿರುತ್ತಾರೆ. ಕಳೆದ ಬಾರಿ ಸವರ್ಣಿಯರು ಆದಾ ಗ್ರಾಮ ಪಂಚಾಯತಿ ಸದಸ್ಯರು ಸಂವಿಧಾನ ವಿರೋಧಿ ನಡಾವಳಿ ಅನುಸರಿಸಿ ಡಾ. ಬಿ.ಆರ್ .ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಉದ್ದೇಶದಿಂದ ಸವರ್ಣಿಯರು ಸಮುದಾಯ ಭವನ ನಿರ್ಮಾಣಕ್ಕೆ ಅಡ್ಡಗಾಲು ಹಾಕಿದ್ದರು.ಅಲ್ಲದೇ ನಿವೇಶನ ಮಂಜೂರು ಮಾಡಲು ಸ್ಥಳೀಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಿದರು, ಅಧಿಕಾರಿಯು ಸವರ್ಣೀಯರ ತಾಳಕ್ಕೆ ಕುಣಿದು ಅನ್ಯಾಯವೆಸಗಿದ್ದಾರೆ ಮತ್ತುಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಸವರ್ಣಿಯರು ಆದರಿಂದ ಭವನ ನಿರ್ಮಾಣಕ್ಕೆ ತಾರತಮ್ಯ ಹಾಗೂ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಹಾಗೂ ಭವನ ನಿರ್ಮಾಣ ಮಂಜೂರು ಮಾಡಬೇಕೆಂದು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅನಿರ್ದಿಷ್ಟಾವಧಿ ಧರಣಿ ಗೆ ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆ ಒಕ್ಕೂಟಗಳ ಬೆಂಬಲವನ್ನು ಕೋರಿದ್ದಾರೆ.

ವರದಿ- ಸಚಿನ್ ಮಾಯಸಂದ್ರ.

error: Content is protected !!