ದಲಿತ ಅಸ್ಪೃಷ್ಯನಲ್ಲಾ, ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ದಲಿತರ ಕೊಡುಗೆ ಇದೆ: ಕೇಂದ್ರ ಸಚಿವ ಎ ನಾರಾಯಣಸ್ವಾಮಿ

ತಿಪಟೂರು: ಅಂಬೇಡ್ಕರ್, ಜಗಜೀವನ್ ರಾಂ ಭವನ ಅಂದ್ರೆ ಅದು ಕೇವಲ ಇಟ್ಟಿಗೆ ಸಿಮೆಂಟು ಕಲ್ಲಿನ ಕಟ್ಟಡವಲ್ಲ ಭವಿಷ್ಯದ ಯುವ ಪೀಳಿಗೆಗೆ ಈ ಮಹನೀಯರ ಆದರ್ಶ, ಅವರ ಹೋರಾಟ, ಅವರ ತ್ಯಾಗಗಳನ್ನ ಸಾರುವ ಸ್ಮರಣಾರ್ಥ ಶಕ್ತಿ ಸೌಧವಾಗಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖಾ ರಾಜ್ಯ ಸಚಿವ ನಾರಾಯಣಸ್ವಾಮಿ ಹೇಳಿದರು.

ಡಾ ಬಿ ಆರ್ ಅಂಬೇಡ್ಕರ್ ಹಾಗೂ ಡಾ ಬಾಬು ಜಗಜೀವನ್ ರಾಂ ಸಮುದಾಯ ಭವನಗಳ ಶಂಕುಸ್ಥಾಪನೆ ಹಾಗೂ ನಾಮಫಲಕ, ಹಾಸ್ಟೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮ ಯಾಕೆ ಹೋಗ್ಬೆಕು ಎಂಬ ತಾತ್ಸಾರ ಹಲವರಿಗೆ, ದೇಶ ಕಟ್ಟುವಲ್ಲಿ ಕಾರ್ಮಿಕನಿಂದಿಡಿದು ಸರ್ಕಾರದವರೆಗೆ ಎಲ್ಲಾ ಕಾಯಕಗಳಲ್ಲಿ ಸಮಾಜದ ಪಾಲುದಾರಿಕೆಯಿಂದ ಸದೃಡ ದೇಶಕಟ್ಟಲು ಸಾಧ್ಯ ಎಂದರು.

ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಸಾಮರ್ಥ್ಯದ ಬಗ್ಗೆ ಅವಮಾನಿಸಿ ಸಂವಿಧಾನ ರಚನೆಗೆ ವಿದೇಶಿಗರನ್ನ ಕರೆತರಲು ಮುಂದಾಗಿದ್ದವರಿಗೆ ಇಡೀ ವಿಶ್ವವೇ ಕೊಂಡಾಡುವಂತಹ ಸಂವಿಧಾನವನ್ನ ಭಾರತ ದೇಶಕ್ಕೆ ನೀಡಿ ದೇಶದ ಸ್ವಾಭಿಮಾನವನ್ನ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ.ಅದೇ ರೀತಿ ಬಾಬು ಜಗಜೀವನ್ ರಾಂ ನಮಗೆ ಕೊಟ್ಟ ಕೊಡುಗೆ ಏನು, ಅವರು ಕಾರ್ಮಿಕ ಇಲಾಖೆ ಸಚಿವರಾಗಿದ್ದಾಗ ಉದ್ಯೋಗದಲ್ಲಿ ಮೀಸಲಾತಿಯನ್ನ ಕೊಟ್ಟಿದ್ದಾರೆ ಇದೆಲ್ಲಾ ಭವಿಷ್ಯದ ಪೀಳಿಗೆಗೆ ಅವರ ಭವನದೊಳಗೆ ಪ್ರವೇಶಿಸುತ್ತಿದ್ದಂತೆ ಅವರ ಇತಿಹಾಸಗಳು ನೆನಪಾಗಬೇಕು ಎಂದರು.

ಪ್ರತಿಮೆ ಕಟ್ಟಡಗಳ ದ್ವಂಸ, ಅಪಮಾನದ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಸಚಿವ ನಾರಾಯಣಸ್ವಾಮಿ

ಪ್ರತಿಮೆ,ಕಟ್ಟಡಗಳನ್ನ ಸ್ಥಾಪನೆ ಮಾಡುವಾಗ ಯಾವ ಕಾನೂನಿನಡಿ, ಯಾವ ಕಟ್ಟಡ, ಯಾರ ಪ್ರತಿಮೆ ಅವಶ್ಯಕತೆ ಇದೆ ಎಂದು ಯೋಚಿಸುವ ಕಾಲ ಕರ್ನಾಟಕಕ್ಕೆ ಮೊನ್ನೆ ಬಂದೊಗಿತ್ತು. ಕ್ರಾಂತಿಕಾರಿ ಬಸವಣ್ಣನವರು ಹುಟ್ಟಿದ ನಾಡಿನಲ್ಲಿ ಕನಕದಾಸರ ಕೀರ್ತನೆಗಳು ಇಡೀ ಸಮಾಜವನ್ನ ಜಾಗೃತಿಗೊಳಿಸಿರುವ ನೆಲದಲ್ಲಿ ಶಿವಾಜಿ ಮಹಾರಾಜರು, ಸಂಗೊಳ್ಳಿರಾಯಣ್ಣರ ಪ್ರತಿಮೆಗಳಿಗೆ ಅಪಮಾನ ಮಾಡುವ ಅವಶ್ಯಕತೆ ಇರಲಿಲ್ಲ ಬೇಸರ ವ್ಯಕ್ತಪಡಿಸಿದರು.

ನಾನು ಇತ್ತೀಚೆಗೆ ಮಂತ್ರಿಯಾದ್ಮೇಲೆ ಬಹಳಷ್ಟು ರಾಜ್ಯಗಳಲ್ಲಿ ಓಡಾಡಿದ್ದೆನೆ, ತಮಿಳ್ನಾಡು,ಪೂನಾ, ಮಹಾರಾಷ್ಟ್ರ, ಅಸ್ಸಾಂ, ಮೇಘಾಲಯ, ನಾನು ಎಲ್ಲೋ‌ ಒಂದ್ಕಡೆ ಅಂದ್ಕೊಂಡಿದ್ದೆ ಒಬ್ಬ ದಲಿತನಾಗಿ, ದಲಿತ ಮಂತ್ರಿಯಾಗಿ ಒಬ್ಬ ಅಸ್ಪೃಷ್ಯನಾಗಿ ಉತ್ತರ ಭಾರತಕ್ಕೆ ಹೋದಾಗ ರವಿದಾಸರ ಕ್ರಾಂತಿಕಾರಿ ಸಂತ, ತಮಿಳುನಾಡಿನ ಲ್ಲಿ ಕೊಂಡೆವೀರನ್ ಎಂಬ ಒಬ್ಬ ದಲಿತ ಬ್ರೀಟಿಷರ ವಿರುದ್ದ ಹೋರಾಡಿದ್ದ, ಒಬ್ಬ ಮಹಿಳೆ ಕೋಹಿಲಿ, ಹಾಗೂ ಪೂನಾದಲ್ಲಿ ಪೇಶ್ವೆ ರ ವಿರುದ್ದ ಹೋರಾಡಿದ್ದ ಸೇನಾನಿ ಲಾಹೋರ್ ಜಿ ಶಾಲ್ವಿ, ಎರಡನೆ ಮಹಾಯುದ್ಧದಲ್ಲಿ ದುಷ್ಪರಿಣಾಮಗಳನ್ನ ವಿಶ್ವಕ್ಕೆ ತೋರಿಸಿಕೊಟ್ಟ ಅಣ್ಣಾಬಾಹು ಸಾಹೇಬ್ ರ ದೊಡ್ಡ ಕಟ್ಟಡ, ಸ್ಮಾರಕಗಳಾಗಿವೆ ಎಂದರು.

ಇವತ್ತು ಈ ದೇಶದಲ್ಲಿರುವ ದಲಿತ ಅಸ್ಪೃಷ್ಯನಲ್ಲಾ, ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ಮಹಾರಾಜರ ಜೊತೆ ದಲಿತರು ಬ್ರಿಟೀಷರ ವಿರುದ್ದ ಹೋರಾಡಿ ಯುದ್ದ ಮಾಡಿದ್ದರು. ಇಂದು ಈ ದೇಶದಲ್ಲಿ ಜಾತಿ,ಅಸ್ಪೃಷ್ಯತೆ ಅವಶ್ಯಕತೆ ಇಲ್ಲಾ ಈ ನಿಟ್ಟಿನಲ್ಲಿ ಸಮಾಜವನ್ನ ಕಟ್ಟಬೇಕಾಗಿದೆ. ಈ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದೆವೆ ಎಂದರು.

ರಾಜ್ಯದಲ್ಲಿ 5 ಲಕ್ಷ ದಲಿತ ಕುಟುಂಬಗಳಿಗೆ ಮನೆಯಿಲ್ಲ: ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ.

ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ 28 ಲಕ್ಷ ದಲಿತ ಕುಟುಂಬಗಳಲ್ಲಿ 5 ಲಕ್ಷ ಕುಟುಂಬಗಳಿಗೆ ಮನೆಗಳಿಲ್ಲ ಎಂಬುದನ್ನ ನಾವು ಮರೆಮಾಚಲು ಸಾದ್ಯವಿಲ್ಲ. ಯಾವುದೇ ಗಲ್ಲಿಯಲ್ಲಿ ಒಬ್ಬ ವ್ಯಕ್ತಿ ಅಸ್ಪೃಷ್ಯತೆ ಯನ್ನ ಅನುಭವಿಸಿದ್ರೆ ಸರ್ಕಾರ ಸುಮ್ಮನಿರಬೇಕಾ…? ಯಾರನ್ನೆ ಎದುರು ಹಾಕ್ಕೊಂಡ್ರು ಪರವಾಗಿಲ್ಲ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದರು.

ಕೆಲವರು ಚಾಲೆಂಜ್ ಮಾಡಿದ್ದರು: ಸಚಿವ ಬಿ ಸಿ‌ ನಾಗೇಶ್

ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿ ತಳ ಸಮುದಾಯಗಳು ಸಹ ಗೌರವಯುತವಾಗಿ ತಮ್ಮೆಲ್ಲ ಕಾರ್ಯಕ್ರಮಗಳನ್ನ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳುವಂತೆ ಸಮುದಾಯ ಭವನಗಳನ್ನು ನಿರ್ಮಾಣ ಮಾಡುತ್ತಿದ್ದೆವೆ. 2012 ರಲ್ಲಿ ನಾರಾಯಣಸ್ವಾಮಿ ಯವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ನಾನು ಕೇಳಿಕೊಂಡ ತಕ್ಷಣ ಈ ಎರಡು ಭವನಗಳಿಗೆ ಮಂಜೂರು ನೀಡಿದ್ದರು ಇಂದು ಅವರ ಕೈಯಿಂದಲೇ ಸಮುದಾಯ ಭವನ ಶಂಕು ಸ್ಥಾಪನೆಯಾಗಿದೆ ಇನ್ನು ಒಂದು ವರ್ಷದಲ್ಲಿ ಅವರೆ ಬಂದು ಉದ್ಘಾಟನೆ ಮಾಡುವಂತೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುತ್ತೆನೆ ಎಂಬ ಭರವಸೆಯನ್ನ ಕೊಡುತ್ತೆನೆ.

ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಯಾವುದೇ ಕಾಲೋನಿಯಲ್ಲಿ ಕಾಂಕ್ರಿಟ್ ರಸ್ತೆಗಳಿರಲಿಲ್ಲ…ಸನ್ಮಾನ್ಯ ಯಡಿಯೂರಪ್ಪನವರು ಅಧಿಕಾರವದಿಯಲ್ಲಿ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆ ಬಗ್ಗೆ ಕಾರ್ಯಕ್ರಮಗಳನ್ನ ರೂಪಿಸಲಾಯಿತು. ಒಳಚರಂಡಿ, 24 ಗಂಟೆ ಕುಡಿಯುವ ನೀರು ಯೋಜನೆಯಡಿ ನಲ್ಲಿ ಅಳವಡಿಸಲು ನಗರದಲ್ಲಿ ರಸ್ತೆಗಳನ್ನ ಅಗೆಯಲಾಗಿತ್ತು ಇದನ್ನ ಕೆಲವರು ಚಾಲೆಂಜ್ ಮಾಡಿದ್ದರು, ಇದೀಗ ಹಾಳಾಗಿದ್ದ ನಗರದ ರಸ್ತೆಗಳನ್ನ ಪೂರ್ಣಗೊಳಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ರಾಮ್ ಮೋಹನ್, ಗಣೇಶ್, ಸದಸ್ಯ ಕಿರಣ್ ಕುಮಾರ್, ಉಪವಿಭಾಗಾಧಿಕಾದಿ ದಿಗ್ವಿಜಯ್ ಬೋಡ್ಕೆ, ಸಮಾಜ ಕಲ್ಯಾಣ ಇಲಾಖೆ ಜಂಟಿ‌ನಿರ್ದೇಶಕಿ ಪ್ರೇಮಾ, ಡಿವೈಎಸ್ಪಿ ಸಿದ್ದಾರ್ಥ ಗೋಯೆಲ್ ಸೇರಿದಂತೆ ಹಲವರು ಹಾಜರಿದ್ದರು.

error: Content is protected !!