ತುರುವೇಕೆರೆ: ಮಾಯಸಂದ್ರ ಗ್ರಾಮದಲ್ಲಿ ಡಿ ಬಾಸ್ ಅಭಿಮಾನಿಗಳ ವಿಶೇಷ ಸಂಭ್ರಮಾಚರಣೆ.

ತುರುವೇಕೆರೆ: ತಾಲೂಕಿನ “ಮಾಯಸಂದ್ರ” ಎಂಬ ಗ್ರಾಮವು ರಾಜ್ಯಕ್ಕೆ ಹೆಸರುವಾಸಿಯಾಗಿದೆ.ಅಲ್ಲದೇ ಕಲೆಯ ತವರೂರಾಗಿದೆ. ಹಲವು ಕ್ಷೇತ್ರದಲ್ಲಿನ ಕಲಾವಿದರು, ಗಣ್ಯರು, ಗ್ರಾಮದಲ್ಲಿದ್ದಾರೆ.ಹೆಸರಾಂತ ಕಲಾವಿದರು, ರಾಜಕೀಯ ಪ್ರತಿನಿಧಿಗಳು, ಸರ್ಕಾರಿ ನೌಕರರು, ಹಾಗೂ ದೇಶದ ಗಡಿ ಕಾಯುವ ಯೋಧರು ಗ್ರಾಮದಲ್ಲಿರುವುದು ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ.

ಕಲೆಗೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುವ ಗ್ರಾಮದಲ್ಲಿ, ಮಹಾಶಿವರಾತ್ರಿ ಹಬ್ಬದ ದಿನದಂದು ರಾಜ್ಯದ ಹೆಸರಾಂತ ಚಾಲೆಂಜಿಂಗ್ ಸ್ಟಾರ್ “ದರ್ಶನ್” ಅಭಿನಯದ “ರಾಬರ್ಟ್” ಚಿತ್ರವು ಬಿಡುಗಡೆಗೊಳ್ಳುತ್ತಿರುವ ಅಂಗವಾಗಿ, ಚಲನಚಿತ್ರವು ಶತದಿನ ಆಚರಿಸಲೆಂದು ಹಾಗೂ ನಾಯಕನಟ “ದರ್ಶನ್” ರವರ ಚಿತ್ರರಂಗದ ಭವಿಷ್ಯ ಇನ್ನಷ್ಟು ಉತ್ತುಂಗಕ್ಕೇರಲು ಎಂದು ಗ್ರಾಮದ “ಡಿ ಬಾಸ್” ಅಭಿಮಾನಿ ಬಳಗದ ಯುವಕರು ಮುಂಜಾನೆಯೇ ಗ್ರಾಮದಲ್ಲಿನ ಶಕ್ತಿದೇವತೆಯಾದ ಗ್ರಾಮದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿ ಹಾಗೂ ಶ್ರೀ ರಾಮಾಂಜನೇಯ ದೇವತೆಗಳಿಗೆ, ವಿಶೇಷ ಅಭಿಷೇಕ ಅಲಂಕಾರ ಮತ್ತು ಲಘು ಅನ್ನಸಂತರ್ಪಣೆ ಪ್ರಸಾದ ವಿನಿಯೋಗ ಮಾಡುವುದರ ಮೂಲಕ ತಮ್ಮ ಸಂಭ್ರಮಾಚರಣೆ ಮಾಡಿದರು ಹಾಗೂ “ರಾಬರ್ಟ್” ಚಿತ್ರದ ಸಮವಸ್ತ್ರಗಳನ್ನು ಧರಿಸಿಕೊಂಡು ವಿಶೇಷವಾಗಿ ಎಲ್ಲ ಯುವಕರು ಗ್ರಾಮಸ್ಥರ ಗಮನಸೆಳೆದರು.

ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿ ಬಳಗದ ಸುನಿಲ್ ಚಕ್ರವರ್ತಿ, ಜೀವನ್ ಗೌಡ, ಚಂದನ್, ಚರಣ್, ಪ್ರಮೋದ್ (ಪಮ್ಮಿ), ಚೇತು(ಸ್ಟುಡಿಯೋ), ವೆಂಕಟೇಶ್(ಐ.ಸಿ), ಜಯರಾಮ್, ಅನಿಲ್ (ಸರ್ಪ), ದರ್ಶನ್ ಸ್ವಾಮಿ(ಪಾನಿಪುರಿ), ಶ್ರೀಧರ್ (ಕಣ್ಣ), ಮಹದೇವ್, ಮಂಜು, ಮನು, ನಾಗೇಶ್, ಶರತ್,ರಮೇಶ್,
(ಟುಮ್ ಟುಮ್) ಜಯರಾಮ್, ಮಂಜು, ಮಹದೇವ್, ಶ್ರೀನಿವಾಸ್ ,ಪುರುಷೋತ್ತಮ್
(ಬಾಟ್ಲುಮನಿ), ದರ್ಶನ್, ನವೀನ್ (ಚಂದುಳ್ಳಿ), ಕೇಶವ, ಶಶಿ, ಸೇರಿದಂತೆ ಇನ್ನು ಮುಂತಾದ ಅಭಿಮಾನಿಗಳು ಪಾಲ್ಗೊಂಡಿದ್ದರು.

ವರದಿ-ಸಚಿನ್(ಮಾಯಸಂದ್ರ).

ಡಿ ಬಾಸ್ ಅಭಿಮಾನಿಗಳು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿರುವ ದೃಶ್ಯ
ಮಾಯಸಂದ್ರ ಗ್ರಾಮದ ಡಿ ಬಾಸ್ ಆಭಿಮಾನಿಗಳು

Leave a Reply

Your email address will not be published. Required fields are marked *

error: Content is protected !!