ನಟಿ ಶಿಲ್ಪಾ ಶಿರೋಡ್ಕರ್‌ಗೆ ಕೋವಿಡ್ ಪಾಸಿಟಿವ್

ಮುಂಬೈ, ಡಿಸೆಂಬರ್ 30: ಹಮ್, ಖುದಾ ಗವಾ ಮತ್ತು ಆಂಖೇನ್‍ನಂತಹ ಚಲನಚಿತ್ರಗಳ ಖ್ಯಾತ ನಟಿ ಶಿಲ್ಪಾ ಶಿರೋಡ್ಕರ್ ಅವರಿಗೆ ಕೋವಿಡ್ ದೃಢಪಟ್ಟಿದೆ.

ಈ ಬಗ್ಗೆ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ 90ರ ದಶಕದ ನಟಿ. ನಾಲ್ಕು ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಇನ್‍ಸ್ಟಾಗ್ರಾಮ್‍ನಲ್ಲಿ ಕೋವಿಡ್ ಪಾಸಿಟಿವ್ ನಾಲ್ಕನೇ ದಿನ, ಕೋವಿಡ್ ಲಸಿಕೆ ಪಡೆದ ಮೊದಲ ಭಾರತೀಯ ಸೆಲೆಬ್ರೆಟಿ ಎಂದು ಬರೆದುಕೊಳ್ಳುವ ಮೂಲಕ ಕೋವಿಡ್ ಇರುವ ಬಗ್ಗೆ ತಿಳಿಸಿದ್ದಾರೆ.

ತಮ್ಮ ಕುಟುಂಬದೊಂದಿಗೆ ದುಬೈನಲ್ಲಿ ನೆಲೆಸಿರುವ ಶಿಲ್ಪಾ ಶಿರೋಡ್ಕರ್ ಈ ವರ್ಷದ ಜನವರಿಯಲ್ಲಿ ಸಿನೋಫಾರ್ಮ್ ಲಸಿಕೆಯನ್ನು ಪಡೆದಿದ್ದರು.

ಎಲ್ಲರೂ ಸುರಕ್ಷಿತವಾಗಿರಿ, ದಯವಿಟ್ಟು ಲಸಿಕೆಯನ್ನು ಪಡೆಯಿರಿ ಮತ್ತು ಎಲ್ಲಾ ನಿಯಮಗಳನ್ನು ಅನುಸರಿಸಿ, ನಿಮಗೆ ಯಾವುದು ಉತ್ತಮ ಎಂದು ನಿಮ್ಮ ಸರ್ಕಾರಕ್ಕೆ ತಿಳಿದಿದೆ. ಬಹಳಷ್ಟು ಪ್ರೀತಿ #ಗೆಟ್ ವ್ಯಾಕ್ಸಿನೇಟೆಡ್ #ಮಾಸ್ಕ್ ಆನ್ #ಸೇಫ್ ಎಂದು ಹೇಳಿದ್ದಾರೆ.

error: Content is protected !!