ಕೋವಿಡ್ ರೋಗಿಯ ಚಿನ್ನದ ಸರ ಕಳ್ಳತನ: ಆಸ್ಪತ್ರೆ ಸಿಬ್ಬಂದಿ ಬಂಧನ

ಬೆಂಗಳೂರು: ಕೋವಿಡ್ ಚಿಕಿತ್ಸೆಗಾಗಿ ಆಡ್ಮಿಟ್ ಆಗಿದ್ದ ವೃದ್ದ ಮಹಿಳೆಯಿಂದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಖಾಸಗಿ ಆಸ್ಪತ್ರೆಯ 27 ವರ್ಷದ ಸಿಬ್ಬಂದಿಯೊಬ್ಬರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಚಿತ್ರದುರ್ಗದ ಮೂಲದ ಇಮ್ತಿಯಾಜ್ ಎಂದು ಗುರುತಿಸಲಾಗಿದೆ. ಹೆಸರುಘಟ್ಟದಲ್ಲಿ ವಾಸಿಸುತ್ತಿದ್ದ ಈಕೆ ಐಸಿಯುನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು.

ಸರ ಕಳ್ಳತನದ ಬಗ್ಗೆ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಮಹಿಳೆಯ ಕುಟುಂಬ ಸದಸ್ಯರು ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆ ನಡೆಸಿದಾಗ ಸರ ಕಳ್ಳತನದಲ್ಲಿ ಇಮ್ತಿಯಾಜ್ ಪಾತ್ರ ಪತ್ತೆಯಾಯಿತು. ಅಪರಾಧದ ನಂತರ ಆತ ಕೆಲಸ ಬಿಟ್ಟು, ತಲೆ ಮರೆಸಿಕೊಂಡಿದ್ದ. ಆತನ ಚಲನವಲನ ಪತ್ತೆ ಹಚ್ಚಿದ ಪೊಲೀಸರು, ಶನಿವಾರ ಬಂಧಿಸಿದ್ದಾರೆ.

ಇಂಜೆಕ್ಷನ್ ಪಡೆದ ನಂತರ ರೋಗಿ ಮಲಗುವುದನ್ನೆ ಕಾಯುತ್ತಿದ್ದ ಆರೋಪಿ, ನಂತರ ಆಕೆಯ ಕತ್ತಿನಿಂದ ಸುಮಾರು 3 ಲಕ್ಷ ರೂ. ಮೌಲ್ಯದ 70 ಗ್ರಾಮ್ ಚಿನ್ನದ ಸರವನ್ನು ಕದ್ದು, ಅದನ್ನು 2.38 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಗಿ ಆರೋಪಿ ತಪೊಪ್ಪಿಕೊಂಡಿದ್ದಾನೆ. ಆರೋಪಿ ನೀಡಿದ ಮಾಹಿತಿ ಆಧಾರದ ಮೇಲೆ ಕಳವು ಮಾಡಲಾಗಿದ್ದ ಚಿನ್ನದ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

error: Content is protected !!