ಬೆಂಗಳೂರು:ಶಾಸಕಕೃಷ್ಣಭೈರೇಗೌಡರಿಂದ ಕೊರೋನಾ ಲಸಿಕೆ ತಪಾಸಣೆ ಕಾರ್ಯಕ್ಕೆ ಚಾಲನೆ.

ಕೊರೋನಾ ಸೊಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತೀರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಹಳ ಜಾಗೃತಿ ವಹಿಸಬೇಕು ಎಂದು ಶಾಸಕ ಕೃಷ್ಣಭೈರೇಗೌಡ ಅಭಿಪ್ರಾಯ ಪಟ್ಟರು. ನಗರದ ದೇವಿನಗರದಲ್ಲಿ ಆರೋಗ್ಯ ಇಲಾಖೆ ಆಯೋಜಿಸಿದ್ದ ಕೊರೋನಾ ಲಸಿಕೆ ತಪಾಸಣೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದು ಕೊವೀಡ್ ಎರಡನೇ ಅಲೆ ಪ್ರಾರಂಭ ವಾಗಿದ್ದು ಸೊಂಕಿತರ ಸಂಖ್ಯೆ ಏರಿಕೆ ಯಾಗುತ್ತಿರುವುದು ಬಹಳ ವಿಷಾದನೀಯ ಸಂಗತಿ.

ಸಾರ್ವಜನಿಕರು ಕೊರೋನಾ ಸೊಂಕಿನ ವಿಚಾರದಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕಿದೆ. ನಿತ್ಯ ಸೊಂಕಿತರು ಚಿಕಿತ್ಸೆ ಲಭ್ಯ ವಾಗದೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಡ್ ಸಿಗದೆ ಮರಣ ಹೊಂದುತ್ತಿರುವ ಸಂಗತಿಗಳು ಬಹಳ ನೋವುತರುವ ಸಂಗತಿಯಾಗಿವೆ.ಈ ನಿಟ್ಟಿನಲ್ಲಿ ಸಾರ್ವಜನಿಕರು ಕೊರೋನಾ ಲಕ್ಷಣಗಳು ಕಂಡುಬಂದರೆ ಕೊಡಲೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು.ಈಗಾಗಲೇ ಕೊರೋನಾ ಲಸಿಕೆ ಪಡೆದಿರುವವರು ಸಹ ಹೆಚ್ಚು ಆರೋಗ್ಯ ದ ಕಡೆ ಗಮನ ಹರಿಸಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.

ಈ ವೇಳೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಹನುಮಂತಿ.ವೆಂಕಟಸ್ವಾಮಿ.ಫೈನಾನ್ಸ್ ರಾಜು.ವೀರಣ್ಣಕಾರ್ಯ ದರ್ಶಿ LKRNRWA.ಕೆಪಿಸಿಸಿ ಲೇಬರ್ ಸೇಲ್ ಉಪಾಧ್ಯಕ್ಷೆ ಮೈನಾ ಹಾಗೂ ಇತರರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

error: Content is protected !!