ಗುಬ್ಬಿ.ಸೋಮಲಾಪುರ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯಲ್ಲಿ ಗ್ರಾಹಕರಿಗೆ ದೋಖಾ.ಕಣ್ಮುಚ್ಚಿ ಕುಳಿತ ಆಹಾರ ಇಲಾಖೆ.

ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಗ್ರಾಮದ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ರೇಷನ್ ವಿತರಣೆ ಮಾಡುವ ಅಧಿಕಾರಿ ಬಿಪಿಎಲ್ ಕಾರ್ಡ್ ದಾರರಿಗೆ ನೀಡುವಂತಹ ಪಡಿತರ ಅಕ್ಕಿ.ರಾಗಿ.ಗೋಧಿ ಇತರೆ ವಸ್ತುಗಳನ್ನು ನೀಡದೆ ಮೋಸ ಮಾಡುತ್ತಿದ್ದಾರೆ ಎಂದು ಕೆಲವು ಗ್ರಾಹಕರು ಪಡಿತರ ವಿತರಕನ ಮೇಲೆ ಆರೋಪ ಮಾಡಿದರು.

ನಿಟ್ಟೂರು ಹೋಬಳಿಯ ಸೋಮಲಾಪುರ ಗ್ರಾಮದ ವಿ.ಎಸ್.ಎಸ್.ಎನ್.ವತಿಯಿಂದ ತೆರೆಯಲಾಗಿರುವ ನ್ಯಾಯ ಬೆಲೆ ಅಂಗಡಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಯಿಂದ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ರಾಗಿ ಗೋಧಿ ನೀಡಲು ಆದೇಶವಿದ್ದರೂ ಸಹ ಬಿಪಿಎಲ್ ಕಾರ್ಡ್ ದಾರರಿಗೆ ರೇಷನ್ ವಿತರಣೆ ಮಾಡುವಂತಹ ಸಮಯದಲ್ಲಿ
ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ತೂಕ ಮಾಡುವಂತಹ ಯಂತ್ರವನ್ನು ಕೊಠಡಿಯ ಒಳಭಾಗ. ಇಟ್ಟುಕೊಂಡು ರೈತರ ಕಣ್ಣಿಗೆ ಕಾಣದಂತೆ ತೂಕ ಮಾಡಿ ಅಕ್ಕಿ. ರಾಗಿ .ಗೋಧಿ. ನೀಡುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಆರೋಪಗಳು ಕೇಳಿಬರುತ್ತಿದೆ.

ಪಡಿತರ ವಿತರಣಾ ಸಿಬ್ಬಂದಿ ದಬ್ಬಾಳಿಕೆ:ಗ್ರಾಮೀಣ ಭಾಗದ ಹಳ್ಳಿಯ ರೈತರು ನಮಗೆ ಸರ್ಕಾರದಿಂದ ಬಂದಿರುವಂತಹ ದವಸ ಧಾನ್ಯಗಳನ್ನು ಸರಿಯಾಗಿ ನೀಡದಿರುವ ಬಗ್ಗೆ ಪ್ರಶ್ನೆ ಮಾಡಿ ಎಲ್ಲರಿಗೂ ಕಾಣುವಂತೆ ತೂಕ ಮಾಡಿ,ತೂಕ ಮಾಡುವಂತಹ ಯಂತ್ರವನ್ನು ಯಾಕೆ ಮುಚ್ಚಿ ಇಟ್ಟುಕೊಳ್ಳುತ್ತೀರಿ ತೂಕ ಮಾಡುತ್ತಿದ್ದಿರೋ ಅಥಾವ ಕೈಗೆ ಬಂದಷ್ಟು ಕೊಟ್ಟು ಕಳುಹಿಸಿತಿದಿರೋ. ಎಂದು ಕೇಳಿದರೆ ಯಾವುದಕ್ಕೂ ಉತ್ತರ ನೀಡದೆ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದಾರೆ.

ಸರ್ಕಾರ ಪ್ರತಿ ಸದಸ್ಯರ ಕುಟುಂಬಕ್ಕೆ ಸರ್ಕಾರದಿಂದ ಎಷ್ಟು ರೇಷನ್ ಬಂದಿದೆ ಎಂದು ಬಂದಿರುವಂತಹ ಎಲ್ಲಾ ಸಾರ್ವಜನಿಕರು ನೋಡಲಿ ಎಂದು ಪ್ರಶ್ನಿಸಿದರೆ, ಅಂತಹ ರೈತರ ವಿರುದ್ಧ ರೇಷನ್ ವಿತರಣೆ ಮಾಡುವಂತಹ ಅಧಿಕಾರಿ ನಮ್ಮೆಲ್ಲರ ಮೇಲೆ ದಬ್ಬಾಳಿಕ ನೆಡೆಸುತ್ತಾರೆಂಬ ಆರೋಪ ಕೇಳಿಬರುತ್ತಿದೆ.

ಪ್ರಶ್ನೆ ಮಾಡುವ ಗ್ರಾಹಕರಿಗೆ ಪಡಿತರವಿಲ್ಲ ಎಂಬ ಉತ್ತರ. ಈ ವಂಚನೆಯ ಕುರಿತು ಗ್ರಾಹಕರು ಪ್ರಶ್ನೆ ಮಾಡಿದರೆ ನಿಮ್ಮ ಬೆರಳಚ್ಚು ಬರುತ್ತಿಲ್ಲ ನಾಳೆ ಬನ್ನಿ ನಿಮಗೆ ರೇಷನ್ ಬಂದಿಲ್ಲ ಎಂಬ ಉಡಾಫೆ ಮಾತುಗಳನ್ನ ಹೇಳಿಕಳಿಸುತ್ತಾರೆ.
ಕೆಲವರಿಗೆ ರೇಷನ್ ವಿತರಣೆ ಮಾಡುತ್ತಾರೆ. ನಾವೇನಾದರೂ ರೇಷನ್ ವಿತರಣೆ ಮಾಡುವ ಅಧಿಕಾರಿಯ ಉತ್ತರಕ್ಕೆ ಪ್ರತ್ಯುತ್ತರ ನೀಡಿದರೆ ನಮ್ಮಗಳಿಗೆ ರೇಷನ್ ಕೊಡುವುದಿಲ್ಲ ಹೋಗು ಎಂಬ ದುರಂಕಾರದ ಮಾತುಗಳನ್ನು ಹೇಳಿ ನಮ್ಮಗಳಿಗೆ ಕಳಿಸುತ್ತಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಸರ್ಕಾರ ನಿಯಮ ಪಾಲಿಸದೆ ಬೇಕಾ ಬಿಟ್ಟಿ ಪಡಿತರ ವಿತರಣೆ ಆರೋಪ. ಸರ್ಕಾರ ಬಿ ಪಿ ಎಲ್ ಪಡಿತರ ಚೀಟಿ ಪಡೆದಿರುವ ಫಲಾನುಭವಿಗಳಿಗೆ ಕುಟುಂಬದ ಸದಸ್ಯರ ಸಂಖ್ಯೆ ಗೆ ಅನುಗುಣವಾಗಿ ರೇಷನ್ ವಿತರಣೆ ಮಾಡುವಂತೆ ಆದೇಶ ವಿದ್ದರೂ ಸಹ ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳು ಮತ್ತು ಖಾಸಗಿ ನ್ಯಾಯ ಬೆಲೆ ಅಂಗಡಿಯಲ್ಲಿ ಗ್ರಾಹಕರಿಗೆ ಸುಮಾರು ವರ್ಷಗಳಿಂದ ಮೋಸ ಮಾಡುತ್ತಿದ್ದಾರೆ.ಇನ್ನೂ ಕೆಲ ಸಾರ್ವಜನಿಕ ರಿಗೆ ತಮ್ಮ ಕುಟುಂಬಕ್ಕೆ ಎಷ್ಟು ಪಡಿತರ ದೊರೆಯುತ್ತದೆ ಎಂಬ ಮಾಹಿತಿ ಸಹ ಲಭ್ಯವಿರುವುದಿಲ್ಲ ಇಂತಹ ಮುಗ್ಧ ಜನರ ವಂಚನೆ ಮಾಡುವುದನ್ನು ಕೆಲ ನ್ಯಾಯ ಬೆಲೆ ಅಂಗಡಿ ಮಾಲೀಕರು ರೂಢಿ ಗತ ಮಾಡಿಕೊಂಡಿದ್ದಾರೆ.

ಸಮಯಕ್ಕೆ ಸರಿಯಾಗಿ ಪಡಿತರ ಪಡೆಯದೆ ಇದ್ದರೆ ರೇಷನ್ ಮಾಯ. ಸರ್ಕಾರ ಪಡಿತರ ಪಡೆಯಲು ಸಮಯ ನಿಗದಿ ಪಡಿಸದೆ ಇದ್ದರೂ ಸಹ ಪಡಿತರ ಚೀಟಿ ಹೊಂದಿರುವ ನಾಗರಿಕರು ಸಮಯಕ್ಕೆ ಸರಿಯಾಗಿ ಪಡಿತರ ಪಡೆಯದೆ ಇದ್ದರೆ ಈ ನ್ಯಾಯ ಬೆಲೆ ಅಂಗಡಿಯಲ್ಲಿ ರೇಷನ್ ಖಾಲಿಯಾಗಿ ದೆ ಎಂಬ ಹರಿಕೆ ಉತ್ತರ ನೀಡುವ ಈ ಅಧಿಕಾರಿಗಳು ಗ್ರಾಹಕರಿಗೆ ಬಂದ ಆಹಾರ ಪದಾರ್ಥಗಳನ್ನು ಮತ್ತೋಬ್ಬರಿಗೆ ನೀಡಲು ಹೇಗೆ ಸಾಧ್ಯ ? ಪಡಿತರ ಹಂಚಿಕೆ ಯಾದ ಸಮಯದಲ್ಲಿ ಆಯಾ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವ ಫಲಾನುಭವಿಗಳ ಸಂಖ್ಯೆ ಆಧಾರಿಸಿ ಪಡಿತರ ಸಾಮಾಗ್ರಿಗಳನ್ನು ನೀಡುತ್ತಾರೆ ಆದರೆ ಈ ಅಂಗಡಿಯಲ್ಲಿ ಮಾತ್ರ ಪಡಿತರ ಚೀಟಿದಾರರು ಬರದೆ ಇದ್ದರೆ ಅವರ ಪಾಲಿನ ಪಡಿತರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಒಟ್ಟಾರೆ ಯಾಗಿ ಇವರ ಪಡಿತರ ದುರುಪಯೋಗಕ್ಕೆ ಲಾಗಾಮು ಹಾಕದೆ ಹೋದರೆ ಪಡಿತರ ಚೀಟಿದಾರರು ಸಂಕಷ್ಟಕ್ಕೆ ಸಿಲುಕುವ ಸಮಯ ಬರುವುದರಲ್ಲಿ ಅನುಮಾನ ವಿಲ್ಲ.

ಪಡಿತರ ವಿತರಣೆ ವಂಚನೆ ಬಗ್ಗೆ ದೂರು ನೀಡಿದರು ಕ್ಯಾರೆ ಎನ್ನದ ತಾಲೂಕು ಆಹಾರ ಇಲಾಖೆ ಅಧಿಕಾರಿಗಳು. ಈ ನ್ಯಾಯ ಬೆಲೆ ಅಂಗಡಿಯ ವಂಚನೆ ಬಗ್ಗೆ ಗ್ರಾಮದಿಂದ ಗುಬ್ಬಿ ತಾಲ್ಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದೂರು ನೀಡಿದರು ಯಾವುದೇ ರೀತಿ ಪ್ರಯೋಜನವಾಗಿಲ್ಲ ಆದ್ದರಿಂದ ದಯವಿಟ್ಟು ಜಿಲ್ಲಾಮಟ್ಟದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ಸರ್ಕಾರದಿಂದ ಬರುವಂತಹ ಅನ್ನ

ವನ್ನಾದರೂ ಸರಿಯಾಗಿ ವಿತರಣೆ ಮಾಡುವಲ್ಲಿ ಕ್ರಮ ವಹಿಸಬೇಕು ಎಂದು ನಾಗರಿಕರು ಸಂಬಂಧ ಪಟ್ಟ ತಾಲೂಕು ಆಡಳಿತವನ್ನು ಮತ್ತು ಆಹಾರ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!