ತೆಂಗು ಬೆಳೆ: ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲ ಸೌಲಭ್ಯ

ತುಮಕೂರು : ಆಹಾರ ಸಂಸ್ಕರಣೆಯ ಅತೀ ಸಣ್ಣ ಉದ್ಯಮ ಕ್ಷೇತ್ರದ ಕೊಡುಗೆ ಹಾಗೂ ಅವುಗಳ ಕಾರ್ಯಕ್ಷಮತೆಗೆ ತೊಡಕಾಗುತ್ತಿರುವ ಸವಾಲುಗಳನ್ನು ಗಣನೆಗೆ ತೆಗೆದುಕೊಂಡು ಆಹಾರ ಸಂಸ್ಕರಣಗಳ (ministry of  food processing industries) ಮಂತ್ರಾಲಯದ ಪೂರಕ ಬೆಂಬಲ ಹಾಗೂ ಸೇವೆಗಳ ಸೇವಗಳ ಒಂದು ಪ್ಯಾಕೇಜ್ ಮೂಲಕ ’ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ’ಯನ್ನು (PM Formalisation of micro food processing enterprises scheme) ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಬೇಕಾಗಿದ್ದು, ಯೋಜನೆಯಡಿ ತೆಂಗು ಬೆಳೆ ಅವಲಂಬಿತ ಆಹಾರ ಸಂಸ್ಕರಣಾ ಘಟಕಗಳ ಪ್ರಾರಂಭ/ಉನ್ನತಿಕರಣಕ್ಕಾಗಿ ಅರ್ಹ ರೈತರಿಗೆ ಸಾಲ ಸೌಲಭ್ಯ ಒದಗಿಸಲು ಉದ್ದೇಶಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಂದು ಉತ್ಪನ್ನಒಂದು ಜಿಲ್ಲೆ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ತೆಂಗುಬೆಳೆಯನ್ನು ಆಯ್ಕೆಮಾಡಲಾಗಿರುವುದರಿಂದ ತೆಂಗುಬೆಳೆ ಅವಲಂಬಿತ ಆಹಾರ ಕಿರು ಉದ್ದಿಮೆಗಳಿಗೆ, ರೈತ ಉತ್ಪಾದಕರ ಸಂಸ್ಥೆ(ಎಫ್.ಪಿ..ಗಳು), ಸ್ವಸಹಾಯ ಗುಂಪು(ಎಸ್.ಹೆಚ್.ಜಿ.ಗಳು), ಉತ್ಪಾದಕರ ಸಹಕಾರಿಗಳಿಗೆ ಮತ್ತು ರೈತರಿಗೆ ಹೊಸ ಯೋಜನೆ ಪ್ರಾರಂಭಿಸಲು/ಉನ್ನತಿಕರಣಕ್ಕೆ ಹಾಗೂ ಇತರೆ ಆಹಾರ ಸಂಸ್ಕರಣೆಯ ಕಿರು ಉದ್ದಿಮೆ, ರೈತ ಉತ್ಪಾದಕರ ಸಂಸ್ಥೆ, ಸ್ವಸಹಾಯ ಗುಂಪು, ಉತ್ಪಾದಕರ ಸಹಕಾರಿ ಹಾಗೂ ರೈತರು ಅರ್ಜಿ ಸಲ್ಲಿಸಬಹುದಾಗಿದೆ.

    ಅರ್ಜಿದಾರರು ಹಾಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗತ ಅಸಂಘಟಿತ ತೆಂಗು ಬೆಳೆಯ ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣ/ಹೊಸ ಯೋಜನೆಗಾಗಿ ಗರಿಷ್ಠ 10.00 ಲಕ್ಷ ರೂ.ಗಳ ಮಿತಿಯ ಅನುದಾನದೊಂದಿಗೆ ಯೋಜನಾ ವೆಚ್ಚದ ಶೇ.35% ರಷ್ಟು ಸಾಲ ಸಂಪರ್ಕಿತ ಅನುದಾನದ ಪ್ರಯೋಜನ ಪಡೆಯಬಹುದಾಗಿದೆ.

 ಆಸಕ್ತರು ಆನ್ ಲೈನ್ ಮೂಲಕ ಜಾಲತಾಣ http://pmfme.mofpi.gov.in/mis/#/Login ದಲ್ಲಿ ಸಲ್ಲಿಸಬಹುದು. ಎಸ್.ಹೆಚ್.ಜಿ./ಎಫ್.ಪಿಒ/ಸಹಕಾರ ಸಂಘಗಳಿಗೆ ನಿಗಧಿಪಡಿಸಿರುವ ಗರಿಷ್ಠ ಮಿತಿಯೊಳಗೆ ಬಂಡವಾಳ ವೆಚ್ಚಕ್ಕಾಗಿ ಯೋಜನಾ ವೆಚ್ಚದ ಶೇ.35% ರಷ್ಟು ಸಾಲ ಸಂಪರ್ಕಿತ ಅನುದಾನ ಪ್ರಯೋಜನ ಪಡೆದು ಅರ್ಜಿಗಳನ್ನು ಆಫ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಮಾಹಿತಿಗಾಗಿ ಜಾಲತಾಣ http://mofpi.nic.in./pmfme./mis ವನ್ನು ವೀಕ್ಷಿಸಬಹುದಾಗಿದೆ.

    ರೈತರು/ಉದ್ದಿಮೆಗಳು/ಅಭ್ಯರ್ಥಿಗಳು ಅರ್ಜಿಯನ್ನ ಸಂಬಂಧಿಸಿದ ಜಾಲತಾಣದ ಮೂಲಕ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾಗಿ ಆಯ್ಕೆಯಾಗಿರುವ  ಗೌತಮ್ ( ಮೊ.ಸಂ.8217076131, ಇ-ಮೇಲ್ [email protected])   ಪ್ರಣೀತ್ ಜಿ.ಎಸ್.  (ಮೊ.ಸಂ..9902856987, ಇ-ಮೇಲ್ [email protected])   ಹಾಗೂ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ನೋಡೆಲ್ ಅಧಿಕಾರಿ ಚಿದಾನಂದಸ್ವಾಮಿ ಬಿ.ಎಸ್.  ( 0816-2970197)ಇವರನ್ನು ಸಂಪರ್ಕಿಸಬಹುದಾಗಿದೆ. ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.

error: Content is protected !!