ತುಮಕೂರು ಡಿ 2: ತುಮಕೂರಿನಲ್ಲಿ ಅಂತಾರಾಷ್ಟ್ರೀಯ ‌ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣವಾಗ್ತಿರೋದು ಬಹಳ ಸಂತೋಷ ಉಂಟುಮಾಡಿದೆ. ಈ ಪ್ರದೇಶದಲ್ಲಿ ಸ್ಟೇಡಿಯಂ ನಿರ್ಮಾಣದಿಂದ ಈ ಭಾಗದಲ್ಲಿ ಹೆಚ್ಚಿ‌ನ ಅಭಿವೃದ್ದಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತುಮಕೂರು ತಾಲ್ಲೂಕಿನ ಸೋರೆಕುಂಟೆ ಬಳಿ ಪಿ ಗೊಲ್ಲಹಳ್ಳಿಯಲ್ಲಿ ಇಂದು ನೂತನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿ ಎಂ ಸಿದ್ದರಾಮಯ್ಯ ಗುದ್ದಲಿ ಪೂಜೆ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಕ್ರಿಕೆಟ್ ಪಿಚ್ ನಲ್ಲಿ ಬ್ಯಾಟಿಂಗ್ ಆಡುವ ಮೂಲಕ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಅದ್ದೂರಿ ಚಾಲನೆ ನೀಡಿದರು. ಸಚಿವರಾದ ಡಾ.ಜಿ ಪರಮೇಶ್ವರ್, ಕೆಎನ್ ರಾಜಣ್ಣ ಬ್ಯಾಟ್ ಬೀಸುವ ಮೂಲಕ ಸಿ ಎಂ ಗೆ ಸಾತ್ ನೀಡಿದರು.

ಬಳಿಕ ವೇದಿಕೆಯಲ್ಲಿ 40 ಎಕರೆ ಸರ್ಕಾರಿ ಭೂಮಿ ಹಾಗೂ 9 ಎಕರೆ ಖರಾಬ್ ಸೇರಿದಂತೆ ಒಟ್ಟು 51 ಎಕರೆ ಭೂಮಿಯ ಮಂಜುರಾತಿ ದಾಖಲೆಗಳನ್ನ ಕೆಎಸ್ ಸಿಎ ಗೆ ಅಧಿಕೃತವಾಗಿ ಸಿ ಎಂ ಸಿದ್ದರಾಮಯ್ಯ ಹಸ್ತಾಂತರಿಸಿದರು. ಬಳಿಕ  ಮಾತನಾಡಿದ ಅವರು ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಆಗುವುದರಿಂದ ಜಿಲ್ಲೆ ಹಾಗೂ ಈ ಭಾಗದ ಜನರ ಅಭಿವೃದ್ಧಿ ಆಗಲಿದೆ ಎಂದರು.

ಕೆಎಸ್ ಸಿ ಎ ಅವರು ತುಮಕೂರಿನ ಇಂಡಸ್ಟ್ರಿ ಯಲ್ ಕಾರಿಡಾರ್ ನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡ್ತಿದ್ದಾರೆ ಇದು ಉತ್ತಮವಾದ ಪ್ರದೇಶ, ತುಮಕೂರು ಬೆಂಗಳೂರಿಗೆ ಹತ್ತಿರವಿದ್ದು 90 ಕಿ ಮಿ ಇದೆ, ಒಂದುಕ್ಕಾಲು ಗಂಟೆ ಪ್ರಯಾಣ ಆಗಾಗಿ ಇಲ್ಲಿ ಸ್ಟೇಡಿಯಂ ನಿರ್ಮಾಣ ಮಾಡ್ತಿರೋದು ತುಂಬಾ ಸಂತೋಷ ಉಂಟುಮಾಡಿದೆ ಆದಷ್ಟು ಬೇಗ ಕಾಮಗಾರಿ ಮುಗಿಸಿ ಕ್ರಿಕೆಟ್ ಪ್ರೇಮಿಗಳ ಆಸೆ ಈಡೇರಿಸಿ ಎಂದರು.

ಈ ಭಾಗದಲ್ಲಿ ಕ್ರಿಕೇಟ್ ಅಭಿಮಾನಿಗಳು ಜಾಸ್ತಿ ಇದ್ದಾರೆ ಅವರಿಗೆ ಇದು ಹೆಚ್ಚಿನ ಅನುಕೂಲವಾಗಲಿದೆ. ಈ ಕ್ರೀಕೆಟ್ ಸ್ಟೇಡಿಯಂ ನಿರ್ಮಾಣ ವಾಗುವುದರಿಂದ ಈ ಭಾಗದಲ್ಲಿ ಹಲವಾರು ಉದ್ಯೊಗ ಸೃಷ್ಟಿ ಮಾಡಲಿದೆ ಎಂದರು.

ಬಿಜೆಪಿ ಶಾಸಕ ಸುರೇಶ್ ಗೌಡಗೆ ಟಾಂಗ್ ನೀಡಿದ ಸಿಎಂ.

ಇನ್ನೂ ಕಾಂಗ್ರೇಸ್ ಸರ್ಕಾರದಲ್ಲಿ ಹಣವಿಲ್ಲ, ಅನುಧಾನ ನೀಡುತ್ತಿಲ್ಲ ಎಂದು ಸಿಎಂ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದ ಬಿಜೆಪಿ ಶಾಸಕ ಸುರೇಶದ ಗೌಡಗೆ ವೇದಿಕೆಯಲ್ಲೆ ತಿರುಗೇಟು ನೀಡಿರುವ ಸಿ ಎಂ ಸಿದ್ದರಾಮಯ್ಯ ನೋಡಪ್ಪ ಸುರೇಶ್ ಗೌಡ ಅನುಧಾನ ಕೊಟ್ಟಿಲ್ಲ ಅಂತಿಯಲ್ಲ ನಿನ್ನ ಕ್ಷೇತ್ರದಲ್ಲೆ ಸ್ಟೇಡಿಯಂ ನಿರ್ಮಾಣ ಆಗುತ್ತಿದೆ ಎಂದರು.

ಒಂದು ಕಡೆ ಅನುಧಾನ‌ ಕೇಳ್ತಿರಾ, ಒಂದು ಕಡೆ ಸರ್ಕಾರದಲ್ಲಿ ಹಣವಿಲ್ಲ ಅಂತೀರಾ, 41 ವರ್ಷದಿಂದ‌ ರಾಜಕಾರಣದಲ್ಲಿ ಇದ್ದೀನಯ್ಯಾ. ಎರಡು ಸಲ ವಿರೋಧ ಪಕ್ಷದ ನಾಯಕನಾಗಿ, ಎರಡು ಭಾರಿ ಸಿ ಎಂ ಆಗಿದ್ದೇನೆ. ಇಂತದಕ್ಕೆಲ್ಲಾ ಹೆದರಿದ್ದರೆ ಇಷ್ಟು ವರ್ಷ ರಾಜಕಾರಣ ಮಾಡಲು ಸಾದ್ಯವಾಗ್ತಿರಲಿಲ್ಲ. ಯಾವುದೇ ತಪ್ಪು ಮಾಡದ ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲಾ ಎಂದರು.

ಸಚಿವರಾದ ಡಾ ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಕೆಎನ್ ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ‌ಬಿ ಜಯಚಂದ್ರ, ಶಾಸಕರಾದ ಕೆ ಷಡಕ್ಷರಿ, ಜ್ಯೋತಿಗಣೇಶ್, ಸುರೇಶ್ ಗೌಡ, ಮಾಜಿ ಶಾಸಕ ಗೌರಿಶಂಕರ್, ಜಿಲ್ಲಾಧಿಕಾರಿ ಶುಭಕಲ್ಯಾಣ್ , ಸಿಇಓ ಪ್ರಭು ಮುಂತಾದವರಿದ್ದರು.

LEAVE A REPLY

Please enter your comment!
Please enter your name here