ಕ್ರಿಸ್‌ ಗೇಲ್‌ಗೆ ವಿದಾಯ ಪಂದ್ಯದ ಗೌರವ ಇಲ್ಲ ?

ಸೇಂಟ್ ಜಾನ್ಸ್ (ಆ್ಯಂಟಿಗುವಾ), ಜ 2: ತವರು ನೆಲದಲ್ಲಿ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಬಯಸಿರುವ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕ್ರಿಸ್‌ ಗೇಲ್‌ ಅವರಿಗೆ ಸೂಕ್ತ ಗೌರವ ಲಭ್ಯವಾಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಐರ್ಲೆಂಡ್, ಇಂಗ್ಲೆಂಡ್ ವಿರುದ್ಧ ಈ ತಿಂಗಳು ನಡೆಯಲಿರುವ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾದ ವೆಸ್ಟ್‌ ವಿಂಡೀಸ್ ಆಟಗಾರರ ಪಟ್ಟಿಯಲ್ಲಿ ಗೇಲ್‌ ಗೆ ಸ್ಥಾನ ಲಭ್ಯವಾಗಿಲ್ಲ. ಆದರೆ ತಮ್ಮನ್ನು ತುಂಬಾ ಇಷ್ಟಪಡುವ ಅಭಿಮಾನಿಗಳ ನಡುವೆ ತವರು ನೆಲದಲ್ಲಿ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಬಯಸುತ್ತೇನೆ ರಂದು ಟಿ-20 ವಿಶ್ವಕಪ್ ವೇಳೆ ಗೇಲ್ ಟ್ವೀಟ್ ಮಾಡಿ ಮನದ ಇಂಗಿತ ಹೊರಹಾಕಿದ್ದರು. ಆದರೆ, ಎರಡೂ ಸರಣಿಗಳಲ್ಲಿ ಗೇಲ್ ಅವರಿಗೆ ತಂಡದಲ್ಲಿ ಸ್ಥಾನ ಲಭ್ಯವಾಗಿಲ್ಲ ಅಂದರೆ.. ಗೇಲ್‌ಗೆ ವಿದಾಯ ಪಂದ್ಯ ನಡೆಯದೇ ಇರಬಹುದೇ ಎಂಬ ಅನುಮಾನಗಳಿವೆ. ಕೋವಿಡ್ ಹಿನ್ನಲೆಯಲ್ಲಿ ಎರಡೂ ಸರಣಿಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಗೇಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ವೆಸ್ಟ್‌ ವಿಂಡೀಸ್ ಕ್ರಿಕೆಟ್‌ ಮಂಡಳಿ ಮೂಲಗಳು ತಿಳಿಸಿವೆ.

error: Content is protected !!