ಗುಬ್ಬಿ:ಗ್ರಾಹಕರಿಗೆ ವಂಚಿಸುತ್ತಿರುವ ಎಂ.ಹೆಚ್.ಪಟ್ಣ ಸಮೀಪದ ಎಟಾಪ್ 786 ಪೆಟ್ರೋಲ್ ಬಂಕ್.

ಗುಬ್ಬಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಗೆ ಹೊಂದಿಕೊಂಡಿರುವ ಎಟಾಪ್ 786 ಪೆಟ್ರೋಲ್ ಬಂಕ್ ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.ಇಂದು ಸ್ಥಳೀಯ ಯುವಕರು ತಮ್ಮ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹೋದ ಸಮಯದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ಗಳು ಮೀಟರ್ ರೀಡ್ ಮಾಡದೆ ಪೆಟ್ರೋಲ್ ಹಾಕಿದ್ದು 90 ರೂಗಳ ಪೆಟ್ರೋಲ್ ಹಾಕಿದರೆ ಬರ್ತಿಯಾಗಿದ್ದು ಮಾತ್ರ ಅರ್ಧ ಲೀಟರ್ ಗೂ ಕಮ್ಮಿ ಇದನ್ನು ಪ್ರಶ್ನೆ ಮಾಡಿದ ಗ್ರಾಹಕರಿಗೆ ಸರಿಯಾದ ಉತ್ತರ ನೀಡದೆ ಬೇಜವಾಬ್ದಾರಿ ವರ್ತನೆ ಮಾಡಿದ ಸಿಬ್ಬಂದಿ ಗಳ ಮತ್ತು ಪೆಟ್ರೋಲ್ ಬಂಕ್ ಮುಖ್ಯ ಸ್ಥರ ಮೇಲೆ ಗ್ರಾಹಕರು ತರಾಟೆಗೆ ತೆಗೆದುಕೊಂಡರು. ಗ್ರಾಹಕರಿಗೆ ಸರಿಯಾಗಿ ಸೇವೆ ನೀಡುವ ಬದಲು ಹಗಲು ದರೋಡೆ ಗೆ ನಿಂತಿರುವ ಬಂಕ್ ಮಾಲೀಕರ ಮೇಲೆ ಕ್ರಮ ವಹಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಒತ್ತಾಯ ಮಾಡಿದರು.

ಈ ಪೆಟ್ರೋಲ್ ಬಂಕ್ ನಲ್ಲಿ ಮೀಟರ್ ನಿಯಂತ್ರಣಕ್ಕೆ ಮುಂದಾದ ಮಾಲೀಕರು.ಈ ಬಂಕಿನಲ್ಲಿ ಗ್ರಾಹಕರು ಪೆಟ್ರೋಲ್ ಗೆ ಬಂದರೆ ಬಹುಶಃ ಸಾಕಷ್ಟು ಗ್ರಾಹಕರು ಮೋಸಹೋದಂತೆ ಕಾಣಬರುತ್ತದೆ ಕಾರಣ ಯಾವ ಗ್ರಾಹಕರು ಸಹ ಅಷ್ಟು ಗಮನಹರಿಸಿ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳಿಗೆ ತುಂಬಿಸುವುದಿಲ್ಲ ಈ ಸಿಬ್ಬಂದಿ ಗಳ ಮೊಸತನದಿಂದ ಮೀಟರ್ ನಿಯಂತ್ರಣ ಕ್ಕೆ ಒಳಪಡಿಸಿ ಪ್ರಾರಂಭದಲ್ಲಿ ಹೇರ್ ತುಂಬಿಸಿ ಪೆಟ್ರೋಲ್ ಹಾಕುತ್ತಿರುವಂತೆ ಕಾಣುತ್ತದೆ ಹಾಗಾಗಿ ಮೊದಲು ಪೆಟ್ರೋಲ್ ತುಂಬಿಸಿದ ಸಮಯದಲ್ಲಿ ಕೇವಲ 25 ರಷ್ಟು ಮಾತ್ರ ಪೆಟ್ರೋಲ್ ತುಂಬಿದೆ‌.ಪುನಃ ಹಾಕಿಸಿದಾಗ ಶೇ 75 ರಷ್ಟು ಪೆಟ್ರೋಲ್ ತುಂಬಿದು ಗ್ರಾಹಕರು ನೀಡುವ ಹಣಕ್ಕೆ ಸರಿಯಾಗಿ ಸೇವೆ ನೀಡುತ್ತಿಲ್ಲ ಯಾರು ಎಷ್ಟೇ ಪೆಟ್ರೋಲ್ ತುಂಬಿಸಿದರು ಸಹ ಬಿಲ್ ಮಾತ್ರ 90 ರೂಗಳೆಂದು ನಮೂದಾಗುತ್ತಿದೆ ಎಂದು ಗ್ರಾಹಕರು ಬಂಕ್ ಮಾಲೀಕರ ವಿರುದ್ದ ಆಕ್ರೋಶ ಹೊರಹಾಕಿದರು.

ಪೆಟ್ರೋಲ್ ಬಂಕ್ ಮೋಸತನ ಬಯಲು ಮಾಡಿದ ಯುವಕರು.ಈ ಪೆಟ್ರೋಲ್ ಬಂಕ್ ನಲ್ಲಿ ಹಲವು ದಿವಸಗಳಿಂದ ಪೆಟ್ರೋಲ್ ಹಾಕುವ ವೇಳೆ.ಮೋಸಮಾಡುತ್ತಿರುವ ಬಗ್ಗೆ ಆರೋಪಳು ಕೇಳಿಬಂದವು ಅದನ್ನು ಸಬೀತು ಮಾಡುವ ಸಲುವಾಗಿ ಇಂದು ನಾವು ಇದೇ ಬಂಕ್ ನಲ್ಲಿ ಮೂರು ಬಾರಿ ಖಾಲಿ ಬಟಲ್ ಗೆ ಪೆಟ್ರೋಲ್ ತುಂಬಿಸಿದಾಗ ಇವರ ಮೋಸತನ ತಿಳಿದಿದೆ ಇಂತಹ ಬಂಕ್ ಗಳಿಂದ ನಿತ್ಯ ಬರುವ ಗ್ರಾಹಕರಿಗೆ ಮೋಸವಾಗುತ್ತಿದ್ದು ಇವರ ಮೇಲೆ ಸೂಕ್ತ ಕ್ರಮವಹಿಸುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!