ಕೇಂದ್ರ ನಾರು ಮಂಡಳಿಗೆ ಮಂಚೇನಹಳ್ಳಿ ಕೃಷ್ಣಮೂರ್ತಿ ನಾಮನಿರ್ದೇಶನ:ಯಾದವ ಮುಖಂಡರಿಂದ ಅಭಿನಂದನೆ.

ತುರುವೇಕೆರೆ: ಕೇಂದ್ರ ನಾರು ಅಭಿವೃದ್ಧಿ ಮಂಡಳಿಗೆ ತಾಲೂಕಿನ ಯಾದವ ಮುಖಂಡ ಮಂಚೇನಹಳ್ಳಿ ಕೃಷ್ಣಮೂರ್ತಿ ಅವರನ್ನು ನಾಮ ನಿರ್ದೇಶನ ಮಾಡಿ ನೇಮಕ ಮಾಡಿರುವ ಬಿಜೆಪಿ ಪಕ್ಷದ ವರಿಷ್ಟರಿಗೆ ಹಾಗೂ ಎಲ್ಲಾ ನಾಯಕರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಯಾದವ ಹಿತರಕ್ಷಣಾ ಸಮಿತಿ  ಅಧ್ಯಕ್ಷ ಶಂಕರಪ್ಪ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಸಮುದಾಯದ ಪರವಾಗಿ ದ್ವನಿಯತ್ತಿ ಸಮುದಾಯದ ಹೆಮ್ಮಯ ನಾಯಕರಾಗಿ ಹಾಗೂ ಬಿಜೆಪಿ ಪಕ್ಷದ ನಿಷ್ಟಾವಂತರಾಗಿ ಬೆಳೆದ ನಮ್ಮ ತಾಲೂಕಿನ ಮಂಚೇನಹಳ್ಳಿ ಗ್ರಾಮದ ಕೃಷ್ಣಮೂರ್ತಿ ಅವರನ್ನು ಕೇಂದ್ರ ನಾರು ಅಭಿವೃದ್ಧಿ ಮಂಡಳಿಗೆ ನಾಮ ನಿರ್ದೇಶನ ಮಾಡಿರುವ  ಬಿಜೆಪಿಯ ಕೇಂದ್ರ ನಾಯಕರಿಗೆ ಹಾಗೂ ರಾಜ್ಯ ನಾಯಕರಿಗೆ ಹಾಗೂ ಪಕ್ಷದ ಎಲ್ಲಾ ಮುಖಂಡರುಗಳಿಗೆ ನಮ್ಮ ಯಾದವ ಸಮುದಾಯದ ವತಿಯಿಂದ ಪಕ್ಷಾತೀತವಾಗಿ ಅಭಿನಂದಿಸುತ್ತೇವೆ ಸಣ್ಣ ಸಮಾಜಗಳನ್ನು ಗುರ್ತಿಸಿ ಜವಾಬ್ದಾರಿ ಕೊಟ್ಟಿರುವುದು ಅದರಲ್ಲಿಯೂ ಕೇಂದ್ರ ಸರ್ಕಾರದ ಅಂಗಸಂಸ್ಥೆ ಒಂದರಲ್ಲಿ ನಾಮ ನಿರ್ದೇಶನ ಸದಸರನ್ನಾಗಿ ನಮ್ಮ ಸಮುದಾಯದ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಿರುವುದು ಸಂತಸದ ವಿಚಾರ ಮುಂದಿನ ರಾಜಕೀಯ ಜೀವನದಲ್ಲಿ ಅವರಿಗೆ ಹೆಚ್ಚಿನ ಅಧಿಕಾರ  ಲಭಿಸಲಿ  ಸಮುದಾಯದ ಪರವಾಗಿ ಹಾಗೂ ಪಕ್ಷಾತೀತವಾಗಿ ಬಡವರ ಪರವಾಗಿ ಕೆಲಸ ಮಾಡುವ ಶಕ್ತಿ ಸಿಗಲಿ ಎಂದು ಕೃಷ್ಣಮೂರ್ತಿ ಅವರಿಗೆ ಹಾರೈಸಿದರು.


 ತಾಲೂಕು ಯಾದವ ಯುವ ಸೇನೆ ಅಧ್ಯಕ್ಷ ಅಶೋಕ್ ಮಾತನಾಡಿ ಯಾದವ ಸಮುದಾಯದಲ್ಲಿ ಸಾವಿರಾರು ಯುವಕರಿಗೆ ಚೈತನ್ಯದ ಚಿಲುಮೆಯಾಗಿದ್ದ ಮಂಚೇನಹಳ್ಳಿ ಕೃಷ್ಣಮೂರ್ತಿ ಅವರನ್ನು ಬಿಜೆಪಿ ಪಕ್ಷ ಗುರ್ತಿಸಿ ಕೇಂದ್ರ ನಾರು ಅಭಿವೃದ್ಧಿ ಮಂಡಳಿಗೆ ನಾಮ ನಿರ್ದೇಶನ ಮಾಡಿರುವುದು ಸಂತಸದ ವಿಚಾರ ತಾಲೂಕಿನ ಯುವಕರಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ನಾರು ಅಭಿವೃದ್ಧಿ ಮಂಡಳಿಯಿಂದ ಸಿಗಬೇಕಾದ ಸವಲತ್ತುಗಳನ್ನು ತಲುಪಿಸುವ ಕೆಲಸ ಕೃಷ್ಣಮೂರ್ತಿ ಅವರು ಮಾಡುತ್ತಾರೆ ಅವರ ಮುಂದಿನ ರಾಜಕೀಯ ಜೀವನ ಮತ್ತಷ್ಟು ಉಜ್ವಲಗೊಳ್ಳಲಿ ನಾರು ಅಭಿವೃದ್ಧಿ ಮಂಡಳಿಗೆ ನಾಮ ನಿರ್ದೇಶನ ಮಾಡಿದ ಪಕ್ಷದ ಎಲ್ಲಾ ಮುಖಂಡರಿಗೆ ಪಕ್ಷಾತೀತವಾಗಿ ಯಾದವ ಸಮುದಾಯ ಅಭಿನಂದನೆ ಸಲ್ಲಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಡಿ.ಕೆ.ಬಸವರಾಜ್, ಚಿದಾನಂದ , ಕೃಷ್ಣಮೂರ್ತಿ ಇತರರು ಇದ್ದರು

Leave a Reply

Your email address will not be published. Required fields are marked *

error: Content is protected !!