ರಾಜಕೀಯದಲ್ಲಿ ಜಾತಿ,ಧರ್ಮ ತಂದರೆ ಅವರಷ್ಟು ನತದೃಷ್ಟ, ಪಾಪ ಮಾಡಿದೋರು ಮತ್ತೊಬ್ಬನಿಲ್ಲ: ಸಚಿವ ಮಾದುಸ್ವಾಮಿ ಭಾವುಕನುಡಿ.

ತುಮಕೂರು:‌ಸದನಶೂರ,ಮಾತುಗಾರ, ದೈರ್ಯಶಾಲಿ ಹೀಗೆ ತಮ್ಮ ರೆಬೆಲ್ ನಡವಳಿಕೆಯಿಂದಲೇ ರಾಜ್ಯದ ಗಮನ ಸೆಳೆದಿರುವ ಕಾನೂನು ಸಚಿವ ಮಾದುಸ್ವಾಮಿ ಕಣ್ಣಂಚಲ್ಲಿ‌ ನೀರು‌ ತುಂಬಿಕೊಂಡು ಭಾವುಕರಾಗಿ ಮಾತನಾಡಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಸಮೀಪ ತಿಮ್ಲಾಪುರ ಕೆರೆ ತುಂಬಿದ ಹಿನ್ನೆಲೆಯಲ್ಲಿ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಈ ವೇಳೆ ತಾನು ಲಿಂಗಾಯಿತ ಜಾತಿಗೆ ಸೀಮಿತವಾಗಿದ್ದಾರೆ ಎಂಬ ಆರೋಪಕ್ಕೆ ಭಾವುಕರಾಗಿ ಸ್ಪಷ್ಟನೆ ನೀಡಿದ್ದಾರೆ.

ಲಿಂಗಾಯಿತರಿಗಷ್ಟೇ ಸಚಿವ ಮಾದುಸ್ವಾಮಿ ಎಂದು ಮಾತನಾಡುತ್ತಿದ್ದರು, ಈಗ ಆ ಪುಣ್ಯಾತ್ಮರು ಏನು ಹೇಳುತ್ತಾರೆ ಅಂತಾ ನೋಡೊಣಾ ಅಂದ್ರೆ ಕಾಣುತ್ತಿಲ್ಲ ಎನ್ನುತ್ತಲೆ ಭಾಷಣ ಶುರುಮಾಡಿದ ಸಚಿವ ಮಾದುಸ್ವಾಮಿ,ತಿಮ್ಲಾಪುರ ಕೆರೆಗೆ ನೀರು ಹರಿಸಲು ಹಠ ಮಾಡಿದ್ದೆ, ಯಾಕಂದ್ರೆ ತಿಮ್ಲಾಪುರ ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಮಾತ್ರ ಹಿಂದುಳಿದವರ ಜಮೀನುಗಳಿರೋದು ಅದನ್ನ ಎಲ್ಲರೂ ಅರ್ಥಮಾಡಿಕೊಳ್ಳಬೇಕು, ಈ ತಿಮ್ಲಾಪುರ ಕೆರೆ ತುಂಬಿ ಎಲ್ಲಾ ಹಿಂದುಳಿದ ವರ್ಗದವರಿಗೆ ರಕ್ಷಣೆಯಾಗಿ ನಿಂತಿದೆ. ಪಾಪ ಪುಣ್ಯ ಗೊತ್ತಿರೋರು ಇದನ್ನ ಯೋಚನೆ ಮಾಡಲಿ ಎಂದರು.

ರಾಜಕಾರಣ ಮಾಡುವಾಗ ಎಲ್ಲೆಲ್ಲಿ ಅನುಕೂಲ ಮಾಡಿದ್ರೆ ಯಾರ್ಯಾರು, ಎಷ್ಟು ಜನರು ಇದರ ಫಲಾನುಭವಿಗಳಾಗ್ತಾರೆ ನಮ್ಮ ತಲೆಯಲ್ಲಿ ಎಲ್ಲಾ ಆಲೋಚನೆಗಳು ಇರಬೇಕು, ಕಲ್ಪನೆ ಇಲ್ಲದೆ ಮಾಡುತ್ತಾ ಹೋದರೆ ಅದಕ್ಕೆ ಅರ್ಥವೇ ಇರೊದಿಲ್ಲ ಎನ್ನುತ್ತಲೇ ಕಣ್ಣಂಚಲ್ಲಿದ್ದ ನೀರನ್ನ ಒರೆಸಿಕೊಂಡರು.

ರಾಜಕೀಯಕ್ಕೂ, ಧರ್ಮ, ಜಾತಿಗೂ ಸಂಬಂಧ ತಂದರೆ ಅವರಷ್ಟು ನತದೃಷ್ಟ ಮತ್ತೊಬ್ಬನಿಲ್ಲ ಆ ಬದುಕಿನಲ್ಲಿ, ಅವರಷ್ಟು ಪಾಪ ಮಾಡಿದೋರು ಇರೊದಿಲ್ಲ ಎಂದು ಭಾವುಕರಾಗಿ ಮಾತನಾಡುತ್ತಾ ಮತದಾರರೇ ನಮಗೆ ದೇವ್ರು, ಮತಹಾಕಿದೋರೆ ನಮ್ಮನ್ನ ಬೆಳೆಸಿದೊರು ಅದನ್ನ ಬಿಟ್ಟು ರಾಜಕಾರಣದಲ್ಲಿ ಆ ಜಾತಿ, ಈ ಜಾತಿ ಅಂತಾ ಅಂತಾ ತಿಳಿದು ಸೋಂಕು ಮಾಡ್ತಾ ಹೋದ್ರೆ ಅದು ನಿಜವಾದ ಧರ್ಮವಲ್ಲ, ಅದನ್ನು ತಿಳಿದು ರಾಜಕಾರಣ ಮಾಡ್ತಿರೊನು ನಾನು ಎಂದು ಹೇಳುವ ಮೂಲಕ ನಾನು ಲಿಂಗಾಯತ ಜಾತಿಗೆ ಸೀಮಿತ ಅನ್ನುವ ಆರೋಪಕ್ಕೆ ಸ್ಪಷ್ಟನೆ ನೀಡಿದರು.

ಸಚಿವ ಮಾದುಸ್ವಾಮಿ‌ ಭಾವುಕ‌ ನುಡಿ.

ಅವರು ಈ ಹಿಂದೆ ತಮ್ಮ ಸ್ವಗ್ರಾಮವಾದ ಜೆ ಸಿ ಪುರದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಅಭಿವೃದ್ದಿ ವಿಚಾರವಾಗಿ ಮಾತನಾಡುತ್ತಲೂ ಭಾವುಕರಾಗಿದ್ದರು.

error: Content is protected !!