ಹುಸಿಯಾಯ್ತು ನಿರೀಕ್ಷೆ..​ ನಾಯಕ ವಿರಾಟ್ ಕೊಹ್ಲಿ

2 ವರ್ಷಗಳ ಸುದೀರ್ಘ ಕಾಯುವಿಕೆಗೆ ಮುಂಬೈ ವಾಂಖೆಡೆ ಅಂಗಳದಲ್ಲಿ ಬ್ರೇಕ್​ ಬೀಳುತ್ತೆ ಎಂಬ ನಿರೀಕ್ಷೆ ಹುಸಿಯಾಗಿದೆ. ಎರಡನೇ ಇನ್ನಿಂಗ್ಸ್​​ನಲ್ಲೂ ಬಿಗ್​ ಇನ್ನಿಂಗ್ಸ್​ ಕಟ್ಟುವಲ್ಲಿ ಎಡವಿರುವ ವಿರಾಟ್​​ ಕೊಹ್ಲಿ, ತಮ್ಮ ಸ್ಥಾನಕ್ಕೆ ಕುತ್ತು ತಂದಿಟ್ಟುಕೊಂಡಿದ್ದಾರೆ. ಒಂದು ಪಂದ್ಯದ ವೈಫಲ್ಯ ನಾಯಕನ ಸ್ಥಾನಕ್ಕೆ ಕುತ್ತು ತಂದಿರೊದ್ಯಾಕೆ.? ಇಲ್ಲಿದೆ ಡಿಟೇಲ್ಸ್.

D

ಮುಂಬೈ ಟೆಸ್ಟ್​ ಪಂದ್ಯದ ಆರಂಭಕ್ಕೂ ಮುನ್ನ ಹೆಚ್ಚು ಚರ್ಚೆ ಆದ ವಿಚಾರ ಅಂದ್ರೆ ಅದು ವಿರಾಟ್​ ಕೊಹ್ಲಿಯ ಕಮ್​ಬ್ಯಾಕ್​. ಕೊಹ್ಲಿ ಆಗಮನ ತಂಡಕ್ಕೆ ಬಲ ತುಂಬಿತು ಅನ್ನೋದ್ರಿಂದ ಹಿಡಿದು, ಕೊಹ್ಲಿಗಾಗಿ ಸ್ಥಾನ ತ್ಯಾಗ ಮಾಡೋದು ಯಾರು? ಎಂಬಲ್ಲಿವರೆಗೆ ಚರ್ಚೆಗಳು ನಡೆದಿದ್ವು. ಅದರ ಜೊತೆಗೆ ಸುದೀರ್ಘ ಕಾಲದ ಸೆಂಚುರಿ ಬರಕ್ಕೆ ಬ್ರೇಕ್​ ಬೀಳುತ್ತಾ? ಎಂಬ ಪ್ರಶ್ನೆಯೂ ಹಾಟ್​ ಟಾಪಿಕ್​ ಆಗಿ ಮಾರ್ಪಟ್ಟಿತ್ತು. ಈ ವಿಚಾರದಲ್ಲಿ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಿತ್ತು. ಜೊತೆಗೆ ಕ್ರಿಕೆಟ್​ ವಲಯ ಕೂಡ ಮುಂಬೈ ಟೆಸ್ಟ್ ಶತಕದ ಬರ ನೀಗಿಸಿಕೊಳ್ಳಲು ಉತ್ತಮ ಅವಕಾಶ ಎಂದೇ ಅಭಿಪ್ರಾಯಪಟ್ಟಿತ್ತು.

ಮುಂಬೈ ಟೆಸ್ಟ್​ ಪಂದ್ಯದಲ್ಲೂ ನೀಗಲಿಲ್ಲ ಶತಕದ ಬರ
ಆದ್ರೆ, ಅಭಿಮಾನಿಗಳ ನಿರೀಕ್ಷೆ ಮೊದಲ ಇನ್ನಿಂಗ್ಸ್​ನಲ್ಲೇ ಉಲ್ಟಾ ಆಯ್ತು. ವಿವಾದಾತ್ಮಕ ತೀರ್ಪಿಗೆ ವಿರಾಟ್​​ ಡಕೌಟ್​​ ಆಗಿ ನಿರ್ಗಮಿಸಿದ್ರು. ಹಾಗಿದ್ರೂ, 2ನೇ ಇನ್ನಿಂಗ್ಸ್​​ನಲ್ಲಿ ಮತ್ತೊಂದು ಅವಕಾಶವಿದೆ ಅನ್ನೋ ಅಂಶ ಭರವಸೆಯನ್ನ ಹುಟ್ಟು ಹಾಕಿತ್ತು. ಆದ್ರೆ, ಆ ಭರವಸೆ ಹುಸಿಯಾಯ್ತು. ಕೇವಲ 36 ರನ್​ಗಳಿಗೆ ಟೀಮ್​ ಇಂಡಿಯಾ ನಾಯಕನ ಆಟಕ್ಕೆ ಬ್ರೇಕ್​ ಬಿತ್ತು.

2ನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಬ್ಯಾಟಿಂಗ್​ಗೆ ಆಗಮಿಸೋ ಮುನ್ನವೇ ಟೀಮ್​ ಇಂಡಿಯಾ ಉತ್ತಮ ಲೀಡ್​ ಪಡೆದುಕೊಂಡಿತ್ತು. ಸ್ಕೋರ್​​ ಬೋರ್ಡ್​​ ಮೇಲೆ ಹೆಚ್ಚಿನ ರನ್​ ಇದ್ದದ್ದು, ನಾಯಕ ಕೊಹ್ಲಿ ಮೇಲಿನ ಒತ್ತಡವನ್ನ ಕಡಿಮೆ ಮಾಡಿತ್ತು. ಇದೂ ಕೂಡ ಕೊಹ್ಲಿ 2 ವರ್ಷಗಳ ಬಳಿಕ ಮೂರಂಕಿ ಗಡಿ ಮುಟ್ಟಲಿದ್ದಾರೆ ಅನ್ನೋ ಅಭಿಮಾನಿಗಳ ಲೆಕ್ಕಾಚಾರಕ್ಕೆ ಕಾರಣವಾಗಿತ್ತು. ಆದ್ರೆ, ರಚಿನ್​ ರವೀಂದ್ರ ಬೌಲಿಂಗ್​ನಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿದ ಕೊಹ್ಲಿ ಕೈ ಸುಟ್ಟುಕೊಂಡ್ರು.

Image

ಸೌತ್​​ ಆಫ್ರಿಕಾ ಪ್ರವಾಸಕ್ಕೆ ರೋಹಿತ್​ ಶರ್ಮಾ ಉಪನಾಯಕ..?
ಇಂಡೋ – ಕಿವೀಸ್​ ನಡುವಿನ ಟೆಸ್ಟ್​ ಸರಣಿ ನಡುವೆಯೇ ಸೌತ್​ ಆಫ್ರಿಕಾ ಪ್ರವಾಸ ಹೆಚ್ಚು ಸದ್ದು ಮಾಡ್ತಿದೆ. ಪ್ರವಾಸದಲ್ಲಿ ಅಜಿಂಕ್ಯಾ ರಹಾನೆ ಬದಲು ರೋಹಿತ್​ ಶರ್ಮಾಗೆ ಉಪನಾಯಕನ ಪಟ್ಟ ಕಟ್ಟಲಿದ್ದಾರೆ ಅನ್ನೋದು ಸದ್ಯದ ಮಾಹಿತಿಯಾಗಿದೆ. ಇದು ಕೊಹ್ಲಿ ಮೇಲಿನ ಒತ್ತಡವನ್ನ ಇನ್ನಷ್ಟು ಹೆಚ್ಚಿಸಲಿದೆ ಅನ್ನೋದು ಕ್ರಿಕೆಟ್​ ವಲಯದಲ್ಲಿ ಚರ್ಚೆಯಾಗ್ತಿದೆ. ಯಾಕಂದ್ರೆ, ಶತಕ ಸಿಡಿಸಿಲ್ಲ ಅನ್ನೋದರ ಜೊತೆಗೆ ಕೊಹ್ಲಿಯ ಬ್ಯಾಟಿಂಗ್​ ಫಾರ್ಮ್​ ಕಳೆಗುಂದಿರೋದು ಇದಕ್ಕೆ ಕಾರಣವಾಗಿದೆ.

Image

ಕೊನೆಯ ಶತಕದ ಬಳಿಕ ಕೊಹ್ಲಿಯ ಬ್ಯಾಟಿಂಗ್​ ಸರಾಸರಿ ಕೇವಲ 26.05… ಇದೀಗ ಕಳಪೆ ಫಾರ್ಮ್​ನಲ್ಲಿರೋ ರಹಾನೆ ಬದಲು ರೋಹಿತ್​ ಶರ್ಮಾಗೆ ಉಪನಾಯಕನ ಹೊಣೆಗಾರಿಕೆ ನೀಡೋ ಯೋಜನೆಯಂತೆ, ಕೊಹ್ಲಿಯ ಕಳಪೆ ಫಾರ್ಮ್​ ಸ್ಥಾನಕ್ಕೆ ಕುತ್ತು ತಂದರೂ ಅಚ್ಚರಿಯಿಲ್ಲ. ಹೀಗಾಗಿ ಮುಂಬರುವ ಸೌತ್​​ ಆಫ್ರಿಕಾ ಪ್ರವಾಸ ಕೊಹ್ಲಿ ಪಾಲಿಗೆ ನಿರ್ಣಾಯಕವಾಗಿರಲಿದೆ.

error: Content is protected !!