ಕೆನರಾ ಬ್ಯಾಂಕ್ ಕೃಷಿ ಸಾಲ ಕೇಂದ್ರಕ್ಕೆ ಚಾಲನೆ.

ತುಮಕೂರು: ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಹಾಗೂ ಕೇಂದ್ರ ಸರಕಾರ ರೈತರಿಗೆ ಜಾರಿಗೆ ತಂದಿರುವ ಕೃಷಿ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯ ವಿತರಿಸುವ ಉದ್ದೇಶದಿಂದ ತುಮಕೂರಿನ ಕೆನರಾ ಬ್ಯಾಂಕ್‌ಮುಖ್ಯ ಕಚೇರಿಯ ಶಾಖೆಯಲ್ಲಿ ಕೃಷಿ ಸಾಲ ಕೇಂದ್ರ ಆರಂಭಿಸಲಾಗಿದೆ ರೈತರು ಇದರ ಉಪಯೋಗ ಪಡೆಯುವಂತೆ ಕೆನರಾ ಬ್ಯಾಂಕ್‌ಬೆಂಗಳೂರಿನ ವೃತ್ತ ಕಚೇರಿಯ ಸಿಜಿಎಂ ವಿ.ಎಂ ಗಿರಿಧರ್ ತಿಳಿಸಿದರು.

 ನಗರದ ಬಟವಾಡಿಯ ಕೆನರಾ ಬ್ಯಾಂಕ್‌ಮುಖ್ಯ ಕಚೇರಿಯ ಶಾಖೆಯಲ್ಲಿ ಕೃಷಿ ಸಾಲ ಕೇಂದ್ರವನ್ನು ಸ್ಥಾಪಿಸಲಾಗಿದ್ದು,ಸೋಮವಾರ ಕೃಷಿ ಸಾಲ ಕೇಂದ್ರಕ್ಕೆ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ಸಿಜಿಎಂ ವಿ.ಎಂ ಗಿರಿಧರ್ ಮಾತನಾಡಿ, ಒಂದೇ ಸೂರಿನಲ್ಲಿ ಎಲ್ಲಾ ಕೃಷಿ ಸಂಬಂಧ ಸಾಲ ಸೌಲಭ್ಯಗಳು ರೈತರಿಗೆ ಒದಗಿಸುವ ಸಲುವಾಗಿ ಕೃಷಿ ಸಾಲ ಕೇಂದ್ರವನ್ನು ಪ್ರಾರಂಭಿಸಲಾಗಿದೆ.ರೈತರು ಅವಕಾಶವನ್ನು ಬಳಸಿಕೊಂಡು ತಮ್ಮ ಆರ್ಥಿಕ ಅಭಿವೃದ್ಧಿ ಆಗಬೇಕು ಹಾಗೂ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಬೇಕು ಎಂದರು.

ರೈತರು ನೇರವಾಗಿ ಬ್ಯಾಂಕ್‌ಗೆ ಭೇಟಿ ನೀಡಿ ಕೃಷಿ ಸಾಲ ಕೇಂದ್ರದಲ್ಲಿ ಇರುವಂತಹ ಕೃಷಿ ಅಧಿಕಾರಿ ಹಾಗೂ ಬ್ಯಾಂಕ್‌ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಭೂ ದಾಖಲಾತಿಗಳನ್ನು ತಂದು ಸಾಲ ಪಡೆಯಬಹುದು. ಇಲ್ಲಿನ ಅಧಿಕಾರಿಗಳು ಭೂಮಿ ಹಾಗೂ ತೋಟಕ್ಕೆ ಲಭ್ಯವಿರುವಷ್ಟು ಸಾಲ ಮಂಜೂರಾತಿ ಮಾಡುತ್ತಾರೆ ಎಂದರು.

ಕೆನರಾ ಬ್ಯಾಂಕ್‌ಬೆಂಗಳೂರಿನ ವೃತ್ತ ಕಚೇರಿಯ ಡಿಜಿಎಂ ಪಾರ್ಶ್ವನಾಥ.ಬಿ ರವರು ಮಾತನಾಡಿ, ರೈತರಿಗೆ ಅನೇಕ ಸಾಲಸೌಲಭ್ಯಗಳಿದ್ದು ಹಾಗೂ ಹೊಸ ಕೃಷಿ ಮೂಲಸೌಕರ್ಯ,ಆಹಾರ ಸಂಸ್ಕರಣೆ, ಹೈನುಗಾರಿಕೆ,ಸೌರ ಪಂಪುಗಳು,ಸೌರ ಘಟಕ,  ಹಾಗೂ ಸಂಕುಚಿತ ಜೈವಿಕ ಅನಿಲ ತಯಾರಿಕಾ ಘಟಕ ಮತ್ತು ಇನ್ನಿತರ ಸಾಲ ಸೌಲಭ್ಯಗಳು ಲಭ್ಯವಿರುತ್ತವೆ ಎಂದು ತಿಳಿಸಿದರು.

ರೈತರು ಬ್ಯಾಂಕ್ ಮುಖಾಂತರ ಸಾಲ ಪಡೆದು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು, ನಂತರ ಸಾಲ ಮರುಪಾವತಿಯನ್ನು ತಪ್ಪದೇ ಮಾಡಬೇಕು,ಪಡೆದ ಸಾಲವನ್ನು ನಿಗಧಿತ ಸಮಯಕ್ಕೆ ಮರುಪಾವತಿ ಮಾಡಿ,ಪುನಃ ಬ್ಯಾಂಕಿನಿಂದ ಸಾಲ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಸಲಹೆ ನೀಡಿದ ಅವರು, ಬ್ಯಾಂಕ್‌ನೊಂದಿಗೆ ಉತ್ತಮ ಸಂಬಂಧವನ್ನು ಹೊಂದುವಂತೆ ಸಲಹೆ ನೀಡಿದರು.

ಉತ್ತರ ಪ್ರದೇಶದ ಆಗ್ರಾ,ತಮಿಳುನಾಡಿನ ಸೇಲಂ,ಹರಿಯಾಣದ ಕರ್ನಲ್,ಆಂಧ್ರಪ್ರದೇಶದ ಒಂಗೋಲ್ ಮತ್ತು ಕರ್ನಾಟಕದ ತುಮಕೂರು ಸೇರಿದಂತೆ ದೇಶದಲ್ಲಿ ಒಟ್ಟು ಐದು ಕಡೆ ಕೃಷಿ ಸಾಲ ಕೇಂದ್ರಗಳನ್ನು ತೆರೆಯಲಾಗಿದೆ.

ಕೆನರಾ ಬ್ಯಾಂಕ್‌ಕಾರ್ಯನಿರ್ವಾಹಕ ನಿರ್ದೇಶಕಿ ಎ.ಮಣಿ ಮೇಕಲ್ಯೆ ಕೃಷಿ ಸಾಲ ಕೇಂದ್ರಕ್ಕೆ ಚಾಲನೆ ನೀಡಿದರು.

ಇದೇ ವೇಳೆಯಲ್ಲಿ 20ಕ್ಕೂ ಹೆಚ್ಚು ರೈತರಿಗೆ ಸುಮಾರು ರೂ. 6.5 ಕೋಟಿ ಸಾಲ ವಿತರಣೆಯ ಮಂಜೂರಾತಿ ಪತ್ರ ವಿತರಿಸಲಾಯಿತು. ೪೦ಕ್ಕೂ ಅಧಿಕ ರೈತರು ಹಾಗೂ ಗ್ರಾಹಕರು ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.

ಕೆನರಾ ಬ್ಯಾಂಕಿನ ಉನ್ನತ ಅಧಿಕಾರಿಗಳಾದ ಕೆನರಾ ಬ್ಯಾಂಕಿನ ಉನ್ನತ ಅಧಿಕಾರಿ ಎಂ. ಪರಮಶಿವಂ,ಡಿಜಿಎಂ ಕೆ.ಆರ್ ಬದ್ರಿನಾಥ್, ತುಮಕೂರು ಶಾಖೆಯ ಎಜಿಎಂ ಎಸ್.ಆರ್ ರಮೇಶ್,ಪ್ರಬಂಧಕರಾದ ರಾಮಕೃಷ್ಣ,ಸೇರಿದಂತೆ ಹಲವು ಅಧಿಕಾರಿ ವರ್ಗದವರು ಭಾಗವಹಿಸಿದ್ದರು.  

Leave a Reply

Your email address will not be published. Required fields are marked *

error: Content is protected !!