ಜವಾನ ಕೆಲಸಕ್ಕೆ ಮುಗಿಬಿದ್ದ ಬಿಟೆಕ್‌, ಎಂಬಿಎ ಪದವೀಧರರು…!

ಭೂಪಾಲ್‌, ಡಿ 30: ಡಿ ದರ್ಜೆಯ ಜವಾನ ಹುದ್ದೆಗಾಗಿ ಸ್ನಾತ್ತಕೋತ್ತರ ಪದವೀದರರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಅನೇಕ ಮಂದಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದ ಉದ್ಯೋಗ ಭದ್ರತೆ ಹೊಂದಿರುವ ಸರ್ಕಾರಿ ಉದ್ಯೋಗಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಪ್ಯೂನ್‌ ಕೆಲಸಕ್ಕಾಗಿ ಸ್ನಾತ್ತಕೋತ್ತರ ಪದವೀಧರರು, ಪಿ ಎಚ್‌ ಡಿ ಮಾಡಿರುವವರು ಸಹ ಅರ್ಜಿ ಸಲ್ಲಿಸಿದ್ದಾರೆ.

ಗ್ವಾಲಿಯರ್ ಜಿಲ್ಲಾ ನ್ಯಾಯಾಲಯದಲ್ಲಿ 15 ಪ್ಯೂನ್, ಗಾರ್ಡಿನರ್, ಡ್ರೈವರ್ ಹಾಗೂ ಸ್ಲೀಪರ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಒಟ್ಟು 11,000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪ್ಯೂನ್, ಗಾರ್ಡಿನರ್ ಹಾಗೂ ಸ್ಲೀಪರ್ ಉದ್ಯೋಗಗಳಿಗೆ 8 ನೇತರಗತಿ ಉತ್ತೀರ್ಣಗೊಂಡವರು ಆರ್ಹರು . ಡ್ರೈವರ್ ಹುದ್ದೆಗೆ 10ನೇ ತರಗತಿ ಪಾಸಾಗಿರಬೇಕು ಆದರೆ, ಸಂದರ್ಶನದ ಸಾಲಿನಲ್ಲಿ ಪದವೀಧರರು , ಸ್ನಾತಕೋತ್ತರ ಪದವೀಧರರೇ ಹೆಚ್ಚು. ಅರ್ಜಿ ಸಲ್ಲಿಸಿದವರಲ್ಲಿ ಬಿಟೆಕ್, ಎಂಬಿಎ, ಪಿಎಚ್‌ಡಿ ಮಾಡಿದವರೂ ಇದ್ದಾರೆ.

error: Content is protected !!