ಗುಬ್ಬಿ.ಹಂದಿಜೋಗರ ಕಾಲೋನಿಯ ನಿವಾಸಿಗಳ ಸಂಕಷ್ಟಕ್ಕೆ ನೇರವಾದ ಜೆಡಿಎಸ್ ಮುಖಂಡಬಿ.ಎಸ್.ನಾಗರಾಜ್.

ಹಂದಿಜೋಗರ ಕಾಲೋನಿಯ ಮನೆಗಳಿಗೆ ದಿನಸಿ ಕಿಟ್ ನೀಡಿ ಅವರ ಸಂಕಷ್ಟಕ್ಕೆ ನೇರವಾಗುವ ಮೂಲಕ ಮಾನವೀಯತೆ ಮೇರೆದ ಜೆಡಿಎಸ್ ಮುಖಂಡ ಬಿ.ಎಸ್. ನಾಗರಾಜ್.

ಗುಬ್ಬಿ ಪಟ್ಟಣದ ಹೃದಯ ಭಾಗದಲ್ಲಿರುವ ಮಾರನಕಟ್ಟೆ ಪ್ರದೇಶಕ್ಕೇ ಬೇಟಿ ನೀಡಿ ಮಾತನಾಡಿದ ಅವರು ಸುಮಾರು 40 ವರ್ಷಗಳಿಂದ ವಾಸವಿರುವ ಹಂದಿಜೋಗಿ ಜನಾಂಗದ ಸುಮಾರು 42 ಕುಟುಂಬಗಳು ಕಳೆದ ಏಳೆಂಟು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಳೆ ನೀರು ಗುಡಿಸಲಿಗೆ ನುಗ್ಗಿ ಸಂಪೂರ್ಣ ಮುಳುಗಡೆಯಾಗಿದ್ದು ನಿತ್ಯ ಜೀವನದ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುವುದನ್ನು ಮನಗಂಡು ಸ್ಥಳೀಯ ಮುಖಂಡರ ಜೊತೆ ಸೇರಿ ಮಾನವೀಯತೆ ದೃಷ್ಟಿಯಿಂದ ಸಹಾಯಸ್ತ ಮಾಡಲು ಮುಂದಾಗಿದ್ದು
ಕಳೆದೆರಡು ದಿನಗಳಿಂದ ಮಳೆ ನೀರಿನಿಂದ ಮುಳುಗಡೆಯಾದ ಗುಡಿಸಲ ವಾಸಿಗಳ ಕುಟುಂಬಗಳನ್ನೂ ಬೇಟಿಯಾಗಿ ಅವರ ಜೊತೆ ಮಾತನಾಡಿ ಯೋಗಕ್ಷೇಮ ವಿಚಾರಿಸಿ ಆಹಾರ ಧಾನ್ಯದ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ಈಗಲಾದರೂ ಎಚ್ಚೆತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಹಂದಿ ಜೋಗಿ ಜನಾಂಗಕ್ಕೆ ತಾಲೂಕಿನ ಸಾತೇನಹಳ್ಳಿ ಗೇಟ್ ಬಳಿ ವಸತಿ ಕಲ್ಪಿಸುವ ಕೆಲಸ ಮಾಡಲು ಆದಷ್ಟು ಬೇಗ ಮಾಡಿ ಅವರಿಗೆ ನಿವೇಶನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶ್ ಗೌಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುರೇಶ್, ಸಿ.ಗಂಗಣ್ಣ, ಮದನ, ರಂಜಿತ್, ಜೋಗಿ ಇತರರು ಇದ್ದರು.

error: Content is protected !!