ಬಿಜೆಪಿ ಅಧಿಕಾರಕ್ಕೆ ಬಂದರೇ 50 ರೂಪಾಯಿಗೆ ಅಗ್ಗದ ಮದ್ಯ

ಹೈದರಾಬಾದ್, ಡಿಸೆಂಬರ್ 29: 2024ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಒಂದು ಕೋಟಿ ಮತಗಳನ್ನು ಗಳಿಸಿದ್ದಲ್ಲಿ ರಾಜ್ಯದ ಜನರಿಗೆ 70 ರೂ.ಗೆ ಮದ್ಯ ಸಿಗಲಿದೆ ಎಂದು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಭರವಸೆ ನೀಡಿದರು.

ವಿಜಯವಾಡದಲ್ಲಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವೀರರಾಜು, ರಾಜ್ಯದಲ್ಲಿ ಕಳಪೆ ಗುಣಮಟ್ಟದ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ, ಆದರೆ ಜನಪ್ರಿಯ ಬ್ರಾಂಡ್‍ಗಳು ಮಾತ್ರ ರಾಜ್ಯದಲ್ಲಿ ಲಭ್ಯವಿಲ್ಲ ಎಂದು ಆರೋಪಿಸಿದರು.

ಸ್ಪೆಷಲ್ ಸ್ಟೇಟಸ್, ಗವರ್ನರ್ಸ್ ಮೆಡಲ್ ಎಂಬ ಲೇಬಲ್‍ಗಳ ಅಡಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಆದರೆ ಬ್ರಾಂಡೆಡ್ ಮದ್ಯ ಮಾರಾಟ ಮಾಡುತ್ತಿಲ್ಲ. ಮದ್ಯ ನಿಷೇಧ ಎಂದು ಹೇಳಿದರೂ ಬ್ರಾಂಡಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರ ನಕಲಿ ಮದ್ಯ ಉತ್ಪಾದಿಸಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಜನರ ರಕ್ತ ಕುಡಿಯುತ್ತಿದೆ. ಪ್ರತಿ ತಿಂಗಳು ಒಬ್ಬ ವ್ಯಕ್ತಿ ಮದ್ಯಕ್ಕೆ 12,000 ರೂ. ಈ ಹಣವನ್ನು ಸರ್ಕಾರ ಕಲ್ಯಾಣ ಯೋಜನೆಗಳ ನೆಪದಲ್ಲಿ ಪಡೆದು ವಾಪಸು ನೀಡುತ್ತಿದೆ ಎಂದರು.

ಬ್ರಾಂಡ್‍ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಕಾರಣ ರಾಜ್ಯದಲ್ಲಿ ಪ್ರೀಮಿಯಂನಲ್ಲಿ ಮದ್ಯ ಮಾರಾಟವಾಗುತ್ತಿದೆ. ಇತ್ತೀಚೆಗೆ, ರಾಜ್ಯ ಸರ್ಕಾರವು ಮದ್ಯದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಿದೆ. ಆದರೆ ‘ವಿಶೇಷ ಮಾರ್ಜಿನ್’ ಸೇರ್ಪಡೆಯೊಂದಿಗೆ ಎಂಆರ್‍ಪಿಗಳು ಬದಲಾಗದೆ ಇರುವುದರಿಂದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ ಎಂದು ಹೇಳಿದರು.

ಚರ್ಚೆಗೆ ಗ್ರಾಸವಾದ ಸೋಮು ವೀರರಾಜು ಹೇಳಿಕೆ

ಅಧ್ಯಕ್ಷ ಸೋಮು ವೀರ್ರಾಜು ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರವಾಗಿ ತೆಲಂಗಾಣ ಸಚಿವ . ಟಿ.ಆರ್. ಎಸ್. ಕಾರ್ಯಾಧ್ಯಕ್ಷ ಕೆಟಿಆರ್ ವ್ಯಂಗ್ಯವಾಡಿದ್ದಾರೆ.

ಸೋಮು ವೀರ್ರಾಜು ಮಾತನಾಡಿದ ವೀಡಿಯೊವನ್ನು ಟ್ಟಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ವಾಹ್ ಎಂಥ ಯೋಜನೆ. ಎಂಥ ಅವಮಾನಕರ ಯೋಜನೆ ಇದರೊಂದಿಗೆ ಆಂಧ‍್ರಪ್ರದೇಶದಲ್ಲಿ ಬಿಜೆಪಿ ಪಥನವಾಗುವ ಹಾದಿ ಹಿಡಿದಿದೆ. ಚೀಪ್ ಲಿಕ್ಕರ್ ಕೇಲವ 50 ರೂಪಾಯಿಗೆ ನೀಡುವುದು ಬಿಜೆಪಿಯ ವಿಧಾನವ? ಅಥವ ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಮಾತ್ರ ಈ ಬಂಪರ್ ಆಫರ್ ನೀಡ್ತಿದ್ಯಾ ? ಎಂದು ಕೆಟಿಆರ್ ಪ್ರಶ್ನಿಸಿದರು.

error: Content is protected !!