ಗುಬ್ಬಿ. ಕೊವೀಡ್ ನಿಯಂತ್ರಣ ಮಾಡುವಲ್ಲಿ ಬಿಜೆಪಿ ಸರ್ಕಾರ ವಿಫಲ.ಕೆಪಿಸಿಸಿ ವಕ್ತಾರ ಮುರಳಿಧರ್ ಹಾಲಪ್ಪ ಆರೋಪ.

ಕರೋನಾ ಎರಡನೇ ಅಲೆಯನ್ನು ತಡೆಹಿಡಿಯುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದ್ದು ಭಾರತೀಯ ಜನತಾ ಪಕ್ಷದ ಸರ್ಕಾರವು ಕರ್ನಾಟಕದ ಜನತೆಗೆ ಇದ್ದು ಇಲ್ಲಾದಂತ ಸ್ಥಿತಿಗೆ ತಲುಪಿದೆ ಎಂದು ಕೆಪಿಸಿಸಿ ವಕ್ತಾರ ಮುರುಳಿಧರ್ ಹಾಲಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕೇವಲ ತಮ್ಮ ಸ್ವಾರ್ಥಸಾಧನೆಗೆ ಲಸಿಕೆಗಳನ್ನು ಬೇರೆ ದೇಶಗಳಿಗೆ ನೀಡಿ ನಮ್ಮ ದೇಶದ ಜನತೆಗೆ ದ್ರೋಹವೆಸಗಿದ್ದಾರೆ ಕೇಂದ್ರ ಸಚಿವೆ ನಿರ್ಮಲಾ ಲಕ್ಷ ಕೋಟಿಗಟ್ಟಲೆ ಹಣ ಮೀಸಲಿಡುವುದಾಗಿ ಒಂದು ನಯಾ ಪೈಸೆ ಹಣವನ್ನು ಬಿಡುಗಡೆ ಮಾಡದೆ ಇರುವುದು ಈ ಸರ್ಕಾರದ ಧೋರಣೆ ಎಂದು ಕಿಡಿಕಾರಿದರು.

ಅವರು ಅಶ್ವಥ್ ಕಟ್ಟೆ ಗಣಪತಿ ದೇವಸ್ಥಾನದ ಆವರಣದಲ್ಲಿ ಕಾಂಗ್ರೆಸ್ ಮುಖಂಡರುಗಳ ಸಭೆಯಲ್ಲಿ ಮಾತನಾಡಿ ಕರೋನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಖಂಡರುಗಳು ಆಸಕ್ತಿವಹಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷವು ಮಾಡುತ್ತಿದ್ದು ಇದರಿಂದ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಿ ಕಾಂಗ್ರೆಸ್ ಪಕ್ಷದ ಸಹಾಯಹಸ್ತ ಎಂಬ ದೂರವಾಣಿಯ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ತಿಳಿಸಿದರು‌. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಜಿಲ್ಲಾ ಮುಖಂಡರಾದ ರೇವಣಸಿದ್ದಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ಮುಖಂಡರುಗಳು ಜಾಗೃತಿ ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!