ಚಂದಾಪುರ ಮತ್ತು ಹೆಬ್ಬಗೋಡಿಯ ಸಮಗ್ರ ಅಭಿವೃದ್ಧಿ ಬಿಜೆಪಿ‌ ಗುರಿ: ಕೇಂದ್ರ ಸಚಿವ ಎ ನಾರಾಯಣಸ್ವಾಮಿ.

ಆನೇಕಲ್: ಚಂದಾಪುರ ಮತ್ತು ಹೆಬ್ಬಗೋಡಿಯ ಸಮಗ್ರ ಅಭಿವೃದ್ಧಿ ಮತ್ತು ಸ್ವಚ್ಛ, ಪಾರದರ್ಶಕ ಹಾಗೂ ದಕ್ಷ ಆಡಳಿತ ಬಿಜೆಪಿಯ ಗುರಿಯಾಗಿದೆ. ಹಾಗಾಗಿ ಎರಡೂ ಸ್ಥಳೀಯ ಸಂಸ್ಥೆಗಳಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಡಾ.ಎ.ನಾರಾಯಣಸ್ವಾಮಿ ತಿಳಿಸಿದರು.

ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಹೆಬ್ಬಗೋಡಿಗೆ ಕಾವೇರಿ ನೀರು ಪೂರೈಕೆ ಮಾಡುವ ಸಂಬಂಧ ಬಯೋಕಾನ್‌ ಕಾರ್ಖಾನೆಯೊಂದಿಗೆ ನಾನು ಆನೇಕಲ್‌ ಶಾಸಕನಾಗಿದ್ದ ಅವಧಿಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಒಳಚರಂಡಿ ವ್ಯವಸ್ಥೆಮ ರಸ್ತೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಬಿಜೆಪಿ ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂದಿಸಿ ವಿಶ್ವಾಸ ಗಳಿಸಿದೆ ಎಂದರು. ಆನೇಕಲ್‌ ತಾಲ್ಲೂಕಿನಲ್ಲಿ ಕಾಮಗಾರಿಗಳಲ್ಲಿ ಕೆಲಸ ಆಗದೇ ಬಿಲ್‌ ಆಗಿರುವ ಬಗ್ಗೆ ಮಾಹಿತಿಗಳಿದ್ದು ಲೋಕೋಪಯೋಗಿ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ, ಕೆಆರ್‌ಡಿಸಿಎಲ್‌ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಈ ಬಗ್ಗೆ ದೂರು ಸಲ್ಲಿಸಲಾಗಿದ್ದು ತನಿಖೆ ನಡೆಯಲಿದೆ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಆನೇಕಲ್‌ ತಾಲ್ಲೂಕಿನಲ್ಲಿ ಮೂರು ಮತ್ತು ಚಿತ್ರದುರ್ಗದಲ್ಲಿ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ಎಲ್ಲೆಡೆ ಬಿಜೆಪಿ ಪರವಾದ ವಾತಾವರಣವಿದ್ದು ಅಧಿಕಾರದ ಗದ್ದುಗೆ ಹಿಡಿಯಲಿದೆ. ಕರ್ನಾಟಕ ಗಡಿಭಾಗ ಬೆಳಗಾವಿಯಲ್ಲಿ ಭಾಷಾ ಗೊಂದಲ ಸೃಷ್ಠಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಂಡಿದೆ ಎಂದರು.

ಕಿಯೋನಿಕ್ಸ್‌ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಎನ್‌.ಶಂಕರ್‌, ಎಸ್‌.ಆರ್‌.ಟಿ.ಅಶೋಕ್‌, ಸುರೇಶ್‌ ರೆಡ್ಡಿ, ಕರ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನ್ನೂರು ಪಿ.ರಾಜು, ಹಾಪ್‌ಕಾಮ್ಸ್‌ ನಿರ್ದೇಶಕ ಜೆ.ನಾರಾಯಣಪ್ಪ, ಮುಖಂಡರಾದ ಬಿ.ಜಿ.ಆಂಜಿನಪ್ಪ, ಎನ್‌.ಬಸವರಾಜು, ಪಂಡಿತನಗ್ರಹಾರ ಆಂಜಿನಪ್ಪ, ಸರ್ಜಾಪುರ ಸಿ.ಮುನಿರಾಜು, ಬಿ.ಬಿ.ಐ.ಮುನಿರೆಡ್ಡಿ, ಆದೂರು ಮಹದೇವಯ್ಯ, ನಾಗೇಶ್‌ರೆಡ್ಡಿ, ಟಿ.ವಿ.ಬಾಬು, ಹುಲ್ಲಹಳ್ಳಿ ಶ್ರೀನಿವಾಸ್‌, ಸತೀಶ್‌, ಪ್ರದೀಪ್‌ ಮತ್ತಿತರರಿದ್ದರು.

error: Content is protected !!