ತುಮಕೂರು: ಬೈಕ್ ವಿಲೀಂಗ್ ಗೆ ಅಡ್ಡ ಬಂದ ಯುವತಿಯನ್ನ ಚುಡಾಯಿಸಿ ನಿಂದಿಸುತ್ತಿದ್ದನ್ನ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಪುಂಡರ ಗ್ಯಾಂಗ್ ಮಾರಾಕಾಸ್ತ್ರಗಳಿಂದ ಕೊಚ್ಚಿ ಮನಬಂದಂತೆ ಹಲ್ಲೆಗೈದಿರುವ ಘಟನೆ ಬುಧವಾರ ರಾತ್ರಿ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ನಡೆದಿದೆ.
ಮರಳೂರು ದಿಣ್ಣೆ ನಿವಾಸಿ ಇರ್ಫಾನ್ (30) ಮೇಲೆ ಮತ್ತೊರ್ವ ಇರ್ಫಾನ್ ಹಾಗೂ ಆತನ ಸ್ನೇಹಿತರ ಗ್ಯಾಂಗ್ ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಇರ್ಫಾನ್ ಗೆ ಕೈ, ಕುತ್ತಿಗೆ, ಬುಜದ ಭಾಗಕ್ಕೆ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಗಾಯಾಳು ಇರ್ಫಾನ್ ಗೆ ಸ್ಥಳೀಯರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರಳು ದಿಣ್ಣೆಯಲ್ಲಿ ಇರ್ಫಾನ್ ಹಾಗೂ ಆತನ ಸ್ನೇಹಿತರು ಬೈಕ್ ವೀಲಿಂಗ್ ಮಾಡುತ್ತಿದ್ದರು. ಈ ವೇಳೆ ಅಡ್ಡ ಬಂದ ಯುವತಿಯನ್ನ ಇರ್ಫಾನ್ ಬೈಕ್ ನಿಂದ ತಳ್ಳಿ ಕೆಳಗೆ ಬೀಳಿಸಿ ನಿಂದಿಸುತ್ತಿದ್ದ. ಇದನ್ನ ಗಮನಿಸಿದ ಗಾಯಾಳು ಇರ್ಫಾನ್ ಯುವತಿಯನ್ನ ರಕ್ಷಣೆ ಮಾಡಿ ಇರ್ಫಾನ್ ಹಾಗೂ ಆತನ ಸ್ನೇಹಿತರಿಗೆ ಬೈದು ಬುದ್ದಿವಾದ ಹೇಳಿ ಕಳಿಸಿದ್ದಾರೆ. ಇದರಿಂದ ಕುಪಿತಗೊಂಡ ಇರ್ಫಾನ್ ಆತನ ಸ್ನೇಹಿತರ ಜೊತೆ ಸಂಜೆ ಮತ್ತೆ ಬಂದು ಇರ್ಫಾನ್ ಮೇಲೆ ಏಕ ಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ.
ಸದ್ಯ ಆರೋಪಿ ಇರ್ಫಾನ್ ಹಾಗೂ ಸ್ನೇಹಿತರು ತಲೆ ಮರೆಸಿಕೊಂಡಿದ್ದು ಆರೋಪಿಗಳ ಪತ್ತೆಗಾಗಿ ಜಯನಗರ ಪೊಲೀಸರು ಬಲೆ ಬಿಸಿದ್ದಾರೆ.