ಕುಡಿದ ಮತ್ತಿನಲ್ಲಿ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್ ರಂಪಾಟ

ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯ ಸುರೇಶ್  ಬ್ರಿಗೇಡ್ ರೋಡ್‍ನಲ್ಲಿ ರಂಪಾಟ ಮಾಡಿದ ಘಟನೆ ಇಂದು ರಾತ್ರಿ ನಡೆದಿದೆ.

ಬ್ರಿಗೇಡ್ ರೋಡ್‍ನಲ್ಲಿ ಸ್ನೇಹಿತರೊಂದಿಗಿದ್ದ ದಿವ್ಯ ಸುರೇಶ್ ಕುಡಿದ ಅಮಲಿನಲ್ಲಿ ಗಲಾಟೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಪೊಲೀಸರು ಮತ್ತು ಮಾಧ್ಯಮಗಳು ಬರುತ್ತಿದ್ದಂತೆ ಕ್ಯಾಮೆರಾ ಕಂಡು ದಿವ್ಯ ಸುರೇಶ್ ಕಾಲ್ಕಿತ್ತಿದ್ದಾರೆ.

ಪೊಲೀಸರು ದಿವ್ಯ ಸುರೇಶ್ ಜೊತೆ ಮಾತನಾಡುತ್ತಿದ್ದಂತೆ ಮಾಧ್ಯಮಗಳು ಕೂಡ ಸ್ಥಳಕ್ಕೆ ದಾವಿಸಿವೆ. ಈ ವೇಳೆ ದಿವ್ಯ ಸುರೇಶ್ ಕ್ಯಾಮೆರಾ ಕಂಡು ಆಟೋ ಹತ್ತಿ ತೆರಳಿದಿದ್ದಾರೆ.

ಬಿಗ್‍ಬಾಸ್ ಕನ್ನಡ ಸೀಸನ್ 8ರಲ್ಲಿ 6ನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರ ಬಂದ ದಿವ್ಯಾ ಸುರೇಶ್ ಅವರು ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕವೇ ಹೆಚ್ಚು ಜನಪ್ರಿಯವಾಗಿದ್ದರು.

error: Content is protected !!