ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆರೋಗ್ಯ ಸ್ಥಿರ

ಕೊಲ್ಕತ್ತಾ, ಡಿಸೆಂಬರ್ 29: ಬಿಸಿಸಿಐ ಅಧ್ಯಕ್ಷ ಮತ್ತು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆ ಮುಂದುವರೆದಿದೆ ಎಂದು ವುಡ್ ಲ್ಯಾಡ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಸೌರವ್ ಗಂಗೂಲಿಗೆ ಕೋವಿಡ್ ದೃಢಪಟ್ಟ ಕಾರಣ ಕೋಲ್ಕತ್ತಾದ ವುಡ್ ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ಬಾರಿ ಲಸಿಕೆ ತೆಗೆದುಕೊಂಡಿದ್ದರೂ ಗಂಗೂಲಿಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆ ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಗೂಲಿ ಸೋಮವಾರ ರಾತ್ರಿಯೇ ಮೊನೋಕ್ಲೋನಲ್ ಆ್ಯಂಟಿಬಾಡಿ ಕಾಕ್ಟೈಲ್ ಥೆರಪಿಗೆ ಒಳಪಟ್ಟರು. ಇದೀಗ ಆರೋಗ್ಯ ಸ್ಥಿರವಾಗಿದೆ ಎಂದು ವುಡ್ ಲ್ಯಾಡ್ಸ್ ಆಸ್ಪತ್ರೆಯ ಎಚಿಡಿ, ಸಿಇಒ ಡಾ. ರೂಪಾಲಿ ಬಸು ಮಾಹಿತಿ ನೀಡಿದರು.

ಡಾ ಸರೋಜ್ ಮೊಂಡಲ್, ಡಾ ಸಪ್ತರ್ಷಿ ಬಸು ಮತ್ತು ಡಾ ಸೌತಿಕ್ ಪಾಂಡಾ ಅವರನ್ನೊಳಗೊಂಡ ವೈದ್ಯಕೀಯ ಮಂಡಳಿಯು ಡಾ ದೇವಿ ಶೆಟ್ಟಿ ಮತ್ತು ಡಾ ಅಫ್ತಾಬ್ ಖಾನ್ ಅವರೊಂದಿಗೆ ಸಮಾಲೋಚಿಸಿ ಅವರ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಬಸು ಹೇಳಿದರು.

ಗಂಗೂಲಿ ಹಿರಿಯ ಸಹೋದರ ಸ್ನೇಹಾಶಿಶ್ ಅವರಿಗೂ ಈ ವರ್ಷದ ಆರಂಭದಲ್ಲಿ ಕೋವಿಡ್ ಕಾಣಿಸಿಕೊಂಡಿತ್ತು.

error: Content is protected !!