ಬಿಸಿಸಿಐ ಅಧ್ಯಕ್ಷ ಗಂಗೂಲಿಗೆ ಕರೊನಾ ಪಾಸಿಟಿವ್ – ಕೊಲ್ಕತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೊಸದಿಲ್ಲಿ, ಡಿಸೆಂಬರ್ 28:  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಮೂಲಗಳ ಪ್ರಕಾರ, ಕೊಲ್ಕತ್ತಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೌರವ್ ಅವರ ಕೋವಿಡ್ ರಿಪೋರ್ಟ್ ಸೋಮವಾರ ರಾತ್ರಿ ಬಂದಿದ್ದು, ಕರೊನಾ ಅಟ್ಯಾಕ್ ಆಗಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.

ಈ ವರ್ಷದ ಜನವರಿ ತಿಂಗಳ ಆರಂಭದಲ್ಲಿ ಗಂಗೂಲಿ ಹೃದಯಾಘಾತಕ್ಕೆ ಸೌರವ್ ಒಳಗಾಗಿದ್ದರು. ಬಳಿಕ ಅವರು ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಂಜಿಯೋಪ್ಲಾಸ್ಟಿ ಮಾಡಿದ ಕೆಲವು ದಿನಗಳ ನಂತರ ಸೌರವ್ ಅವರ ಆರೋಗ್ಯ ಸುಧಾರಿಸಿರಲಿಲ್ಲ. ಮತ್ತೆ ಅವರನ್ನು ಆಸ್ಪತ್ರೆಯಲ್ಲಿ ದೀರ್ಘ ಕಾಲದ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಆರೋಗ್ಯದಲ್ಲಿ ಸುಧಾರಣೆ ಕಂಡ ನಂತರ ಕ್ರಿಕೆಟ್ ನ ದೈನಿಂದನ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದು, ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.

The post ಬಿಸಿಸಿಐ ಅಧ್ಯಕ್ಷ ಗಂಗೂಲಿಗೆ ಕರೊನಾ ಪಾಸಿಟಿವ್ – ಕೊಲ್ಕತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ appeared first on UNI ಕನ್ನಡ.

error: Content is protected !!