ಈ ನನ್ಮಗಾ ನಮ್ ಮಂತ್ರಿ ಹೆಂಗ್ ಗೊತ್ತಾ….? ಬೈರತಿ ಕಿವಿಯಲ್ಲಿ ಪಿಸುಗುಟ್ಟಿದ ಬಸವರಾಜು.

ತುಮಕೂರು: ಈ ನನ್ ಮಗ, ನಮ್ ಮಂತ್ರಿ ಹೇಂಗ್ ಗೊತ್ತಾ?… ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ ಅವನಂಗೆ. ಕೆಟ್ಟ ನನ್ಮಗ. ಇವ್ನಿಂದ ಜಿಲ್ಲೆಯಲ್ಲಿ ಒಂದು ಸೀಟ್ ಬರೋಲ್ಲ… ಹಾಳ್ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ… ಮಾತು ಎತ್ತಿದ್ರೆ ಹೊಡಿ ಬಡಿ ಕಡಿ ಅಂತಾನೆ… ಎಂದು ಹೆಸರನ್ನ ಪ್ರಸ್ತಾಪಿಸದೇ ಸಚಿವ ಮಾದುಸ್ವಾಮಿ ವಿರುದ್ದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜುಗೆ ಪಿಸುಗುಡುತ್ತಾ ಸಂಸದ ಜಿ.ಎಸ್.ಬಸವರಾಜು ಚಾಡಿ ಹೇಳುತ್ತಿದ್ದ ವಿಡಿಯೋ ವೈರಲ್ ಆಗಿದೆ.

ತುಮಕೂರು ನಗರದಲ್ಲಿ ವಿವಿಧ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಗುರುವಾರ ಸುದ್ದಿಗೋಷ್ಠಿಗೆ ಸಂಸದ ಜಿ.ಎಸ್.ಬಸವರಾಜು ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಆಗಮಿಸಿದ್ದರು. ಇಬ್ಬರೂ ಪಕ್ಕದಲ್ಲೇ ಕುಳಿತು ಕುಶಲೋಪರಿ ವಿಚಾರಿಸುತ್ತಾ ಗುಸುಗುಸು ಮಾತನಾಡಲು ಶುರು ಮಾಡಿದರು. ಆ ವೇಳೆ ಸಚಿವರ ಕಿವಿಯಲ್ಲಿ ಪಿಸುಗುಟ್ಟಿದ ಜಿಎಸ್‌ಬಿ, ‘ಈ ನನ್ ಮಗ, ನಮ್ ಮಂತ್ರಿ ಹೇಂಗ್ ಗೊತ್ತಾ? ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ ಅವನಂತೆ. ಕೆಟ್ಟ ನನ್ಮಗ, ಇವನಿಂದ ಜಿಲ್ಲೆಯಲ್ಲಿ ಒಂದು ಸೀಟ್ ಬರೋಲ್ಲ… ಹಾಳು ಮಾಡಿಬಿಟ್ಟಿದ್ದಾನೆ ನಮ್ಮ
ಜಿಲ್ಲೆಯನ್ನ…’ ಎಂದು ಹೆಸರು ಪ್ರಸ್ತಾಪಿಸದೇ ಕಾನೂನು ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾದುಸ್ವಾಮಿಯವರ ವಿರುದ್ದ ಚಾಡಿ ಹೇಳುತ್ತಾ ಬೈಯ್ಯುತ್ತಲೇ ಇದ್ದರು. ‘ಸುಮ್ಮನಿರು ಆಮೇಲೆ ಮಾತಾಡೋಣ’ ಎಂದು ಬೈರತಿ ಹೇಳಿದರೂ ಸಂಸದರು ಮಾತ್ರ ಬೈಯ್ಯುತ್ತಲೇ ಇದ್ದರು.

ಮಾತೆತ್ತಿದ್ರೆ ಹೊಡಿ ಬಡಿ ಕಡಿ ಅಂತಾನೇ..ನಮ್ಮ ಎಕ್ಸಿಕ್ಯುಟಿವ್ ಇಂಜಿನಿಯರ್ ಗೆ ನೀನು ನಿನ್ ಹೆಡ್ತಿ ಸೀರೆ ಹೊಗಿಯಕ್ಕೆ ಲಾಯಕ್ಕು ಹೋಗು ಅಂತಾ ಬಾಯಿಗೆ ಬಂದಂಗೆ ಬಯ್ತಾನೆ, ಮೊನ್ನೆ 1000 ಕೋಟಿ ಡಿಕ್ಲೇರ್ ಮಾಡಿಕೊಂಡು ಬಂದವ್ನೆ, ನಮಗ್ಯಾರಿಗೂ ಇನ್ವಿಟೇಷನ್ ಇಲ್ಲಾ, ಕರೆಯೋದು ಇಲ್ಲಾ, ನಿಮ್ಮ ಇಲಾಖೆಗೆ ಬಂದು ಕೇಳಿದ್ರೆ ತಲೆಕಡಡಿಸ್ಕೊಬೇಡಿ ಎಂದು ಸಚಿವ ಮಾದುಸ್ವಾಮಿ ವಿರುದ್ದ ಚಾಡಿ ಹೇಳಿದ್ದಾರೆ. ಇದು ಶಿಸ್ತಿನ ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಉದಾಹರಣಡಯಾಗಿದೆ.

error: Content is protected !!