ಗುಬ್ಬಿ. ಹಳೇ ವೈಷಮ್ಯದ ಹಿನ್ನೇಲೆ ಎಮ್ಮೆ ದೊಡ್ಡಿ ಗ್ರಾಮದ ದಲಿತ ಕುಟುಂಬದ ವಾಸದ ಗುಡಿಸಲಿಗೆ ಬೆಂಕಿ.

ಗುಬ್ಬಿ ತಾಲ್ಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ಹಳೇವೈಷಮ್ಯದ ಹಿನ್ನಲೆಯಲ್ಲಿ ದಲಿತ ಸಮುದಾಯದ ವಾಸದ ಗುಡಿಸಿಲಿಗೆ ಸವರ್ಣೀಯ ಜನಾಂಗದ ವ್ಯಕ್ತಿ ಗಳು ಬೆಂಕಿ ಹಚ್ಚಿರುವ ಘಟನೆ ನೆಡೆದಿದೆ. ಹಾನಿಗೋಳಗಾದವರನ್ನು ದಲಿತ ಸಮುದಾಯದ ವೆಂಕಟೇಶ್ ಎಂದು ಗುರುತಿಸಿದ್ದು ಗುಡಿಸಲಿನಲ್ಲಿ ಸಂಗ್ರಹಿಸಿ ದ ಧವಸ ಧಾನ್ಯ. ಅಡಿಕೆ. ತೆಂಗು.ರಾಗಿ ಹಾಗೂ ಮನೆಯಲ್ಲಿ ಇಟ್ಟಿದ್ದ ವಡವೆ ಹಣ ಸೇರಿ ಸುಮಾರು ಹತ್ತು ಲಕ್ಷ ನಷ್ಟ ಸಂಭವಿಸಿದೆ ಎಂದು ಕುಟುಂಬ ಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಘಟನೆ ಹಿನ್ನೆಲೆ. ದಿ.15 ರಂದು ಇದೇ ಎಮ್ಮೆ ದೊಡ್ಡಿ ಗ್ರಾಮದ ಸವರ್ಣೀಯ ಸಮುದಾಯದ ಲಿಂಗಮೂರ್ತಿ ಹಾಗೂ ರಾಜ್ ಕುಮಾರ್ ಎಂಬುವ ವ್ಯಕ್ತಿ ಗಳ ಜಮೀನು ವೆಂಕಟೇಶ್ ಬಿನ್ ಗಂಗಯ್ಯ ಎಂಬುವರ ಜಮೀನಿನ ಅಕ್ಕ ಪಕ್ಕದಲ್ಲಿ ಇರುವುದರಿಂದ ಇವರ ಜಮೀನಿನಲ್ಲಿ ಬಾಳೇ ಕಾಯಿ ಕಳ್ಳತನ ಮಾಡಿದ್ದೀರಾ ಎಂದು ಆರೋಪಿಸಿ ಗಲಾಟೆ ಮಾಡಿ ವೆಂಕಟೇಶ್ ಎಂಬುವ ದಲಿತ ಸಮುದಾಯದ ವ್ಯಕ್ತಿಯ ಮೇಲೆ ಚೇಳೂರು ಠಾಣೆಯಲ್ಲಿ ದೂರು ನೀಡಿದ್ದಾರೆ ಪೊಲೀಸರು ಇಂದು ವಿಚಾರಣೆ ಗೆ ಬರುವಂತೆ ತಿಳಿಸಿದರು ಆದರೆ ಇಂದು ಹೋಗಲು ಸಾಧ್ಯ ವಾಗಲಿಲ್ಲ ಇದೇ ಕಾರಾಣದಿಂದ ಇಂದು ನಾವು ಜಮೀನಿನ ಬಳಿ ಇಲ್ಲದಿರುವುದನ್ನು ಗಮನಿಸಿ ಲಿಂಗಮೂರ್ತಿ. ರಾಜ್ ಕುಮಾರ್ ನಮ್ಮ ಗುಡಿಸಿಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.

ತೋಟದ ಕೆಲಸಕ್ಕೆ ಬರಲಿಲ್ಲ ಎಂದು ದೌರ್ಜನ್ಯ.ಕುಟುಂಬದ ಸದಸ್ಯರ ಹೇಳಿಕೆ ಪ್ರಕಾರ ಇವರಿಗೆ ಸರ್ಕಾರದ ವತಿಯಿಂದ ಕೊಂಡ್ಲಿ ಸ.ನಂ.84 ರಲ್ಲಿ 5 ಎಕರೆ ಜಮೀನು ಮಂಜೂರಾತಿ ಯಾಗಿದ್ದು ಲಿಂಗಮೂರ್ತಿ. ರಾಜ್ ಕುಮಾರ್ ಜಮೀನು ಇವರ ಅಕ್ಕ ಪಕ್ಕ ದಲ್ಲಿ ಇದೆ.ಈ ದಲಿತ ಕುಟುಂಬದ ವರು ಸಹ ಕಷ್ಟ ಪಟ್ಟು ಜಮೀನು ಅಭಿವೃದ್ಧಿ ಪಡಿಸಿದ್ದಾರೆ ಇದನ್ನು ಸಹಿಸದೆ ಮತ್ತು ಇವರ ತೋಟಗಳಿಗೆ ಕೆಲಸಕ್ಕೆ ಕರೆದರೆ ಬರುವುದಿಲ್ಲ ಎಂಬ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ವೆಂಕಟೇಶ್ ತೋಟದ ವಿದ್ಯುತ್ ಪರಿವರ್ತಕಕ್ಕೂ ಸಹ ಬೆಂಕಿ ಇಟ್ಟಿದರು ಈ ಸಮಯದಲ್ಲಿ ಚೇಳೂರು ಠಾಣೆಗೆ ನಾವು ದೂರು ನೀಡಿದರು ಯಾವುದೇ ಪ್ರಯೋಜನವಾಗಲಿಲ್ಲ ಪೊಲೀಸರು ರಾಜೀ ಸಂಧಾನ ಮಾಡಿ ಕಳುಹಿಸಿದರು ಈ ಘಟನೆ ನೆಡೆದಾಗ ಪೊಲೀಸರು ನಮಗೆ ರಕ್ಷಣೆ ನೀಡಿದ್ದರೆ ಇಂದು ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೂಕ್ತ ರಕ್ಷಣೆ ಗೆ ದಲಿತ ಕುಟುಂಬ ಆಗ್ರಹ.ನಮಗೆ ಸವರ್ಣೀಯ ಜನಾಂಗದ ವ್ಯಕ್ತಿ ಗಳಿಂದ ನಿಂಧನೆ.ಪ್ರಾಣಭಯವಿರುವುದರಿಂದ ಗ್ರಾಮದ ಲ್ಲಿ ಮತ್ತು ನಮ್ಮ ಜಮೀನಿನಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ ಇಂದು ನಮ್ಮ ಗುಡಿಸಿಲಿಗೆ ಬೆಂಕಿ ಇಟ್ಟು ನಮ್ಮ ಕುಟುಂಬ ಬೀದಿ ಗೆ ತಂದಿರುವ ವ್ಯಕ್ತಿ ಗಳ.ಮೇಲೆ ಪೊಲೀಸ್ ಇಲಾಖೆ ಕಾನೂನು ಕ್ರಮ ವಹಿಸಬೇಕು ನಮಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

error: Content is protected !!