ರಾಬರ್ಟ್: ನಟ ದರ್ಶನ್ ಅಭಿಮಾನಿಗಳಿಂದ ಆಟೋ, ಹಸು ವಿತರಣೆ.

ತುಮಕೂರು: ನಗರದ ಎಂ.ಜಿ.ರಸ್ತೆಯಲ್ಲಿ ತುಮಕೂರು ಜಿಲ್ಲಾ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ವತಿಯಿಂದ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಬಿಡುಗಡೆಯ ಪ್ರಯುಕ್ತ ದರ್ಶನ್ ಅಭಿಮಾನಿಗಳಿಗೆ ಆಟೋರಿಕ್ಷಾ ಮತ್ತು ಅವಶ್ಯಕತೆ ಇರುವ ರೈತನಿಗೆ ಸೀಮೆ ಹಸು ವಿತರಣೆ ಮಾಡುವ ಮೂಲಕ ಬಡವರಿಗೆ ನೆರವಾಗಿದ್ದಾರೆ.

ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮಾತನಾಡಿ, ಜಿಲ್ಲಾ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ಅಧ್ಯಕ್ಷ ಗಿರೀಶ ಗೌಡ ಮತ್ತು ಪದಾಧಿಕಾರಿಗಳು ಬಡವರ ಪರ ಕಾಳಜಿ ಇಟ್ಟುಕೊಂಡು ಸಾಧ್ಯವಾದಷ್ಟು ಜನರಿಗೆ ಜೀವನೋಪಾಯವಾಗಿ ಸಹಾಯ ಹಸ್ತ ನೀಡುವ ಮೂಲಕ ರಾಬರ್ಟ್ ಚಿತ್ರ ಬಿಡುಗಡೆಯ ಸಂಭ್ರಮಾರಣೆಯನ್ನು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಆಚರಿಸುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.

ಖ್ಯಾತ ನಾಯಕನಟ ದರ್ಶನ್ ಅವರೂ ಸಹ ಸಮಾಜ ಸೇವೆಯಲ್ಲಿ ಹಾಗೂ ಪ್ರಾಣಿಗಳನ್ನು ದತ್ತು ಪಡೆಯುವುದರಲ್ಲಿ ಸದಾ ಮಂಚೂಣಿಯಲ್ಲಿರುತ್ತಾರೆ. ಸಾಮಾಜಿಕ ಕಾರ್ಯಗಳು, ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ದರ್ಶನ್ ಅವರು ಯುವಜನತೆಗೆ ಪ್ರೇರಣೆಯಾಗಿದ್ದಾರೆ. ನಿರಂತರ ಪರಿಶ್ರಮದಿಂದ ಎತ್ತರದ ಸ್ಥಾನಕ್ಕೆ ಏರಿರುವ ದರ್ಶನ್ ಅವರು, ಕನ್ನಡ ಚಿತ್ರರಂಗದ ಖ್ಯಾತಿ ಜಾಗತಿಕ ಮಟ್ಟದಲ್ಲಿ ರಾಬರ್ಟ್ ಚಿತ್ರದ ಮೂಲಕ ಮತ್ತಷ್ಟು ಹರಡುವಂತಾಗಲಿ ಎಂದು ಶುಭ ಹಾರೈಸಿದರು.

ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರಾದ ಸುಧೀರ್ ಅವರ ಪುತ್ರ ತರುಣ್ ಸುಧೀರ್ ನಿರ್ದೇಶಕರಾಗಿ ಮತ್ತು ತೂಗುದೀಪ ಶ್ರೀನಿವಾಸ ರವರ ಪುತ್ರ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಕನ್ನಡ ಚಿತ್ರ ರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿರುವಂತಹ ಕುಟುಂಬದವರಿಂದ ಹೊರ ಬಂದಿದ್ದು ಇದು ಶತದಿನೋತ್ಸವ ಆಚರಿಸಲಿ ಎಂದು ಆಶಿಸಿದರು.

ಸಂದರ್ಭದಲ್ಲಿ ಜಿಲ್ಲಾ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ಅಧ್ಯಕ್ಷ ಗಿರೀಶ ಗೌಡ, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಅರುಣ್ ಕುಮಾರ್, ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ರಕ್ಷಣಾ ತಂಡದ ರಾಜ್ಯಾಧ್ಯಕ್ಷ ಸೈಯದ್ ಅಜ್ಮಲ್, ಉಪಾಧ್ಯಕ್ಷರಾದ ಸಚಿನ್, ಅಬ್ದುಲ್ ಬಷೀರ್, ನೂರು, ಸಂಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!