ತುರುವೇಕೆರೆ ಶಾಸಕ ಮಸಾಲೆ ಜಯರಾಂ ಪುತ್ರ ತೇಜುಜಯರಾಂ ಮೇಲೆ ಹಲ್ಲೆ.ಹತ್ಯೆಗೆ ಸಂಚು ರೂಪಿಸಿದ್ದ ಹಂತಕರು.

ಗುಬ್ಬಿ ತಾಲ್ಲೂಕಿನ ನೆಟ್ಟೆಕೆರೆ ಗೇಟ್ ಸಮೀಪದಲ್ಲಿ ಮಂಗಳವಾರ ರಾತ್ರಿ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಪುತ್ರ ತೇಜುಜಯರಾಂ ಮೇಲೆ ಹಲ್ಲೆ ಯಾಗಿರುವ ಘಟನೆ ನೆಡೆದಿದೆ. ಕಾರಿನಲ್ಲಿ ಹಿಂಭಾಲಿಸಿಕೊಂಡ ಬಂದ ಹಂತಕರು ನೆಟ್ಟೆಕೆರೆ ಗೇಟ್ ಸಮೀಪದಲ್ಲಿ ಶಾಸಕರ ಪುತ್ರ ಚಲಾಯಿಸುತ್ತಿದ್ದ ಕಾರನ್ನು ಅಡ್ಡ ಗಟ್ಟಿ ತೇಜು ಜಯರಾಂ ಗೆ ಮುಖಕ್ಕೆ ಹೊಡೆದು ಹಲ್ಲೆ ಮಾಡಿರುತ್ತಾರೆ.ಇನ್ನೂ ಗಲಾಟೆ ನೆಡೆಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಭಾರಿ ಅನಾಹುತ ತಪ್ಪಿಸಿದ್ದು ಸ್ಥಳೀಯರು ಬಂದ ತಕ್ಷಣ ಹಂತಕರು ತಮ್ಮ ಕಾರುಗಳನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಇನ್ನೂ ಕಾರಿನಲ್ಲಿ ಇದ್ದ ಕೆಲವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತೇಜು ಹಲ್ಲೆಗೆ ಸಂಚು ರೂಪಿಸಿದ್ದ ಹಂತಕರು.ಮೇಲ್ನೋಟಕ್ಕೆ ಈ ಘಟನೆ ಗಮನಿಸಿದರೆ ಮೊದಲೆ ಶಾಸಕರ ಪುತ್ರನ ಹಲ್ಲೆಗೆ ಹಂತಕರು ಪೂರ್ವಜಿತ ಸಂಚು ರೂಪಿಸಿದ್ದು ಮೊದಲು ಹೆಬ್ಬೂರು ಗ್ರಾಮದಲ್ಲಿ ಗಲಾಟೆಯ ಸುಳಿವು ನೀಡಿ ನಂತರ ಹೆಬ್ಬೂರು ಗ್ರಾಮದಿಂದ ನೆಟ್ಟೆಕೆರೆ ಗೇಟ್ ವರೆವಿಗೂ ಶಾಸಕರ ಪುತ್ರ ತೇಜು ಕಾರನ್ನು ಹಿಂಬಲಿಸಿಕೊಂಡು ಬಂದಿದ್ದಾರೆ ಜೊತೆಗೆ ಹಂತಕರು ಕಾರು ಚಾಲನೆ ವೇಳೆ ಯಲ್ಲಿ ಬ್ಯಾಟ್ ತೋರಿಸಿ ಬೆದರಿಸಿರುವ ದೃಶ್ಯಗಳು ಕಂಡುಬರುತ್ತಿವೆ.

ಹಂತಕರ ಕಾರಿನಲ್ಲಿ ಮಾರಾಕಾಸ್ತ್ರ ಪತ್ತೆ. ಶಾಸಕರ ಪುತ್ರನ ಹಲ್ಲೆ ಗೆ ಬಳಸಲಾಗಿದ್ದ ಇನ್ನೋವಾ ಕಾರು ಹಾಗೂ ಕ್ವಾಲೀಸ್ ಕಾರಿನಲ್ಲಿ ಕ್ರಿಕೆಟ್ ಬ್ಯಾಟ್. ಲಾಂಗು.ಮಚ್ಚು.ಖಾರದ ಪುಡಿ.ಹಾಗೂ ಇನ್ನೀತರೆ ಆಯುಧಗಳು ಪತ್ತೆಯಾಗಿದ್ದು ಹತ್ಯೆಗೆ ಬಳಸಲು ಹಂತಕರು ತಂದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಎರಡು ಪಕ್ಷಗಳ ಸಂಘರ್ಷವೇ ಈ ಘಟನೆಗೆ ಕಾರಣವೇ? ಸಿ.ಎಸ್.ಪುರ ಹೋಬಳಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರ ಮುಸುಕಿನ ಗುದ್ದಾಟ ವೇ ಈ ಗಲಾಟೆಗೆ ಕಾರಾಣವಿರಬಹುದಾ? ಎಂಬ ಅನುಮಾನಗಳು ಸಾರ್ವಜನಿಕ ರಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.ಕಳೆದ ಮೂರು ದಿವಸಗಳ ಹಿಂದೆ ಇಡಗೂರು ಗ್ರಾಮದಲ್ಲಿ ನೆಡೆದ ಜೆಡಿಎಸ್ ಕಾರ್ಯಕರ್ತನ ಮೇಲೆ ನೆಡೆದ ಹಲ್ಲೆಗೂ ತಡರಾತ್ರಿ ನೆಡೆದ ಶಾಸಕರ ಪುತ್ರನ ಮೇಲಿನ ಹಲ್ಲೆ ಗೂ ರಾಜಕೀಯ ದ್ವೇಷದಿಂದ ಈ ಘಟನೆ ನೆಡೆದಿರಬಹುದು ಎಂದು ಸ್ಥಳೀಯವಾಗಿ ಆರೋಪಗಳು ಕೇಳಿಬರುತ್ತಿದೆ.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಬೆಂಬಲಿಗರಿಂದ ಹಲ್ಲೆ ಯತ್ನ ಆರೋಪ. ತಡರಾತ್ರಿ ನೆಡೆದ ತೇಜುರಾಂ ಮೇಲಿನ ಹಲ್ಲೆ ಗೆ ಮಾಜಿ ಶಾಸಕ ಎಂ.ಟಿ.ಕೃಷ್ಣ ಪ್ಪ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಗಳು ಕೇಳಿಬರುತ್ತಿದ್ದು ವೀರಣ್ಣನ ಗುಡಿ ಗ್ರಾಮದ ರಾಮು.ಅವ್ವೇರಹಳ್ಳಿ ಕೃಷ್ಣ. ಧನಂಜಯ್. ಹಾಗೂ ಇನ್ನಿತರ ‌ವ್ಯಕ್ತಿ ಗಳಿಂದ ಹಲ್ಲೆ ನೆಡೆದಿದ್ದು ಇವರು ಜೆಡಿಎಸ್ ಕಾರ್ಯಕರ್ತರಾಗಿದ್ದು ಮಾಜಿ ಶಾಸಕರ ಬೆಂಬಲಿಗರು ಎಂದು ಕೇಳಿಬರುತ್ತಿದೆ. ಹಲ್ಲೆ ಯ ಸ್ಥಳದಲ್ಲಿ ಇವರು ಸಿಕ್ಕ ದ್ದು ಸಿ.ಎಸ್.ಪುರ ಪೊಲೀಸರು ಈ ವ್ಯಕ್ತಿ ಗಳನ್ನು ವಶಕ್ಕೆ ಪಡೆದು ತನಿಖೆ ನೆಡೆಸಿದ್ದಾರೆ.ಸಿ.ಎಸ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!