ಮೇಷ : ಈ ರಾಶಿಯವರಿಗೆ ಈ ವಾರ ಸಾಕಷ್ಟು ಸುತ್ತಾಟ ಕೆಲಸ ಕಾರ್ಯ ಆಗಬಹುದು ಅನಾವಶ್ಯಕ ಖರ್ಚು ದೂರಗೊಳಿಸುವುದು ಉತ್ತಮ ಯಾರಿಗಾದರೂ ಸಾಲ ಕೊಡುವ ಮುನ್ನ ಯೋಚಿಸಿ ಆರೋಗ್ಯ ದಲ್ಲಿ ಗ್ಯಾಸ್ಟ್ರಿಕ್ ಅಸಿಡಿಟಿ ಉಪ್ಪು ಉಳಿ ಖಾರದಂತ ಊಟ ಹೆಚ್ಚು ಸೇವಿಸುವ ಸಂಭವ ವಿದೆ ಹಾಗಾಗಿ ಹೊಟ್ಟೆ ಹದಗೆಡದಂತೆ ನೋಡಿಕೊಳ್ಳಿ ವಾರದ ಕೊನೆಯಲ್ಲಿ ಲಾಭ ವಿಷ್ಣುವಿನ ಆರಾಧನೆ ಮಾಡಿ ಶನಿವಾರ ಅರಳಿ ಪ್ರದಕ್ಷಿಣೆ 11 ಬಾರಿ ಶುಭವಾಗಲಿ
ವೃಷಭ : ವಾರದ ಮೊದಲಲ್ಲಿ ಹಣಕಾಸು ಲಾಭ ಧನ ಧಾನ್ಯ ಹೆಚ್ಚುವವು ಸೌಖ್ಯ ನೆಮ್ಮದಿ ಕಾಣಬಹುದು ಆದರೆ ಕೊನೆ ಪ್ರಯತ್ನದಲ್ಲಿ ವಿಫಲ ಕೆಲಸ ಕಾರ್ಯ ದಲ್ಲಿ ನಿದಾನವಾಗಿ ಸಾಗುವುದು ಬುದ್ಧಿ ನಿದಾನವಾಗಿದೆ ಅನ್ನಿಸಬಹುದು ಸರಿಯಾದ ನಿದ್ರೆ ಹಿತವಾದ ಪೌಷ್ಟಿಕ ಆಹಾರ ಸಹಾಯ ವಾಗುತ್ತದೆ ಸೂರ್ಯ ದೇವನ ಆರಾಧನೆ ಮಾಡಿ ಅರ್ಘ್ಯ ಕೊಡಿ ಶುಭಮಸ್ತು
ಮಿಥುನ :ಈ ವಾರ ಚಂದ್ರನ ಆಸ್ಥಾನ ಪಾಪಗ್ರಹದೊಂದಿಗೆ ಆರೋಗ್ಯ ಭಾಗ್ಯ ವೃತ್ತಿ ಸ್ಥಾನವನ್ನು ದಾಟುವುದರಿಂದ ಆರೋಗ್ಯ ವಿಚಾರದಲ್ಲಿ ತೊಂದರೆ ಮಾನಸಿಕ ಕಿರಿಕಿರಿ ಅಶಾಂತಿ ವೃತ್ತಿ ಉದ್ಯೋಗ ಕೆಲಸ ಕಾರ್ಯಗಳಲ್ಲಿ ಸಹೋದ್ಯೋಗಿಗಳಿಂದ ತೊಂದರೆ ಉಂಟಾಗಬಹುದು ಕಾರ್ಯ ಸಿದ್ಧಿ ಹನುಮಾರಾಧನೆ ಮಾಡಿ ಶುಭಮಸ್ತು
ಕರ್ಕಾಟಕ :ಈ ರಾಶಿಯವರು ಈ ವಾರ ಜಾಗೃತಿ ವಹಿಸಬೇಕು ಏಕೆಂದರೆ ಹಠಾತ್ ಆಗಿ ಕೆಲವು ಘಟನೆಗಳು ನಡೆಯುವ ಸಂಭವ ವಿದೆ ಉದರ ಸಂಬಂಧ ಹಲವು ಸಮಸ್ಯೆಗಳು ಕಾಡಬಹುದು ಕುಟುಂಬ ದೊಂದಿಗೆ ಮನೆಯ ವಿಚಾರವಾಗಿ ಚರ್ಚೆ ಆಗಬಹುದು ವಿಘ್ನೇಶ್ವರನ ಆರಾಧನೆ ಮಾಡಿ ಅನುಕೂಲ ಶುಭಮಸ್ತು
ಸಿಂಹ :ಈ ರಾಶಿಯವರಿಗೆ ಈ ವಾರ ಹಠಾತ್ ಆಗಿ ಹಣದ ಸಂಬವ ಉಂಟಾಗಬಹುದು ಯಾವುದು ಸಂಘರ್ಷ ವಾದಗಳಿಗೆ ಹೋಗಬೇಡಿ ಇದು ನಿಮ್ಮ ನೆಮ್ಮದಿ ಹಾಗೂ ಗೌರವವನ್ನು ಹಾಳು ಮಾಡಬಹುದು ವೈಯಕ್ತಿಕ ಜೀವನ ದಿಂದ ದೂರ ಉಳಿಯುವ ಸಂಭವ ಹೆಚ್ಚು ಅರ್ಕೇಶ್ವರಾಯ ನಮಃ ಶುಭವಾಗಲಿ
ಕನ್ಯಾ : ನೀವು ಎಷ್ಟೇ ಸೌಮ್ಯ ವಾಗಿ ಇದ್ದರೂ ಎಷ್ಟೇ ಉಪಕಾರ ತೋರಿಸಿದರೂ ಜನ ನಿಮ್ಮ ಹಿಂದೆ ಮಾತನಾಡಿಕೊಳ್ಳುತ್ತಾರೆ ಅದಕ್ಕೆ ತಲೆ ಕೆಡಸಿ ಕೊಳ್ಳ ಬೇಡಿ ಯಾವುದೊ ಒಂದು ಕೆಲಸ ಮಾಡಬೇಕಾದರು ತಾಯಿಯ ಆಶೀರ್ವಾದ ಪಡೆಯಿರಿ ತಾಯಿ ದುರ್ಗಾ ಪರಮೇಶ್ವರಿ ಆರಾಧನೆ ಮಾಡಿ ಶುಭಮಸ್ತು
ತುಲಾ:ಈ ರಾಶಿಯವರಿಗೆ ಆರೋಗ್ಯದಲ್ಲಿ ಸುದಾರಣೆ ಹೊಸ ಹೊಸ ಅವಕಾಶಗಳು ವಿವಿಧ ರೀತಿಯಲ್ಲಿ ಹುಡುಕಿ ಬರಬಹುದು ಆದರೆ ಹೂಡಿಕೆ ಖರೀದಿ ಮಾರಾಟ ಹಣದ ವಿಚಾರದಲ್ಲಿ ಕುಲಂಕುಶವಾಗಿ ಗಮನಿಸಿ ಹೂಡಿಕೆ ಮಾಡಬೇಕು ಇಲ್ಲ ವಾದರೆ ಅಪಾಯಕ್ಕೆ ಸಿಲುಕ ಬಹುದು ಓಂ ಶುಕ್ರಾಯ ನಮಃ ಶುಭಮಸ್ತು
ವೃಶ್ಚಿಕ :ಈ ರಾಶಿಯವರಿಗೆ ಈ ವಾರ ಹಲವು ರೀತಿಯಲ್ಲಿ ಪ್ರವಾಸ ಪ್ರಯಾಣ ಕೈಗೊಳ್ಳಲು ಕಾರಣವಾಗಬಹುದು ವಿವಿಧ ರೀತಿಯಲ್ಲಿ ಶುಭ ಸುದ್ದಿ ಕೆಲಸ ಉದ್ಯೋಗ ಕಾರ್ಯ ಗಳಲ್ಲಿ ಅಪೇಕ್ಷಿತ ಫಲಿತಾಂಶ ಕಾಣಬಹುದು ಹನುಮಂತನ ಆರಾಧನೆ ಮಾಡಿ ಶುಭಮಸ್ತು
ಧನಸ್ಸು :ಈ ವಾರ ಈ ರಾಶಿಯವರು ಹೆಚ್ಚು ಆಯಾಸ ಪಡುವ ಕೆಲಸ ಕಾರ್ಯಗಳನ್ನು ತಪ್ಪಿಸ ಬೇಕು ಮಾನಸಿಕ ಒತ್ತಡ ವನ್ನು ಎದುರಿಸಬೇಕಾಗುತ್ತದೆ ಗ್ರಹಗಳ ಅನುಕೂಲದಿಂದ ಸಕಾರಾತ್ಮಕ ಧನಾತ್ಮಕವಾಗಿ ಲಾಭ ಕಾಣಬಹುದು ಓಂ ರಾಹುವೇ ನಮಃ ಶುಭಮಸ್ತು
ಮಕರ :ಈ ವಾರ ಈ ರಾಶಿವರಿಗೆ ಬಹಳ ಪರೀಕ್ಷೆಯ ಸಮಯ ಎಂದೇಳಬಹದು ಅತ್ಯಂತ ಪ್ರೀತಿ ಪಾತ್ರರು ವಿಚಿತ್ರವಾಗಿ ವರ್ತಿಸಬಹುದು ಕೆಲಸ ಕಾರ್ಯ ಮನೆ ಇತ್ಯಾದಿ ಗಳಲ್ಲಿ ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ ಆಲಸ್ಯ ತೊರೆಯ ಬೇಕು ಶನೈಶ್ಚರ ಸ್ವಾಮಿ ಆರಾಧನೆ ಮಾಡಿ ಓಂ ಶನೈಶ್ಚರಾಯ ನಮಃ ಶುಭಮಸ್ತು
ಕುಂಭ :ಈ ವಾರದಲ್ಲಿ ಈ ರಾಶಿಯವರಿಗೆ ಆರೋಗ ವಿಚಾರದಲ್ಲಿ ಸ್ವಲ್ಪ ಸುದಾರಣೆ ಉತ್ತಮ ವ್ಯಾಯಾಮ ಯೋಗ ಕ್ರಿಯಾಶೀಲತೆ ಸಹಕಾರಿ , ಉತ್ತಮ ಹೂಡಿಕೆ ಮಾಡಬಹುದು ಕೆಲಸ ಕಾರ್ಯ ಆದ ನಂತರ ಪೂರ್ಣ ವಾಗಿದೆಯೆಂದು ಗಮನಿಸಿ ಓಂ ಭವಾನಿ ಶಂಕರಾಯ ನಮಃ ಶುಭಮಸ್ತು
ಮೀನ :ಈ ರಾಶಿಯವರು ದುಷ್ಚಟ ದುರ್ಮಾರ್ಗ ದುರಾಭ್ಯಾಸವನ್ನು ತಪ್ಪಿಸಬೇಕು ಹೆಚ್ಚಾಗಿ ಕುಡಿಯುವುದು ತಿನ್ನುವುದು , ನಿಯಮ ಉಲ್ಲಂಘನೆ ಇತ್ಯಾದಿ ಗಳಿಂದ ತೊಂದರೆ ಸ್ವಾರ್ಥತೆ ದುರ್ಮನಸ್ಥಿತಿ ಉಂಟಾಗಬಹುದು ಹಿರಿಯರಿಗೆ ಗೌರವ ಕೊಡಿ ಶಿವನ ಆರಾಧನೆ ಮಾಡಿ ಶುಭಮಸ್ತು
ಪ್ರತಿವಾರದ ರಾಶಿ ಫಲ ತಿಳಿಯಲು ವಿಜಯವಾರ್ತೆ.ಕಾಂ ಸಬ್ ಸ್ಕ್ರೈಬ್ ಮಾಡಿ.