ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕಿ ಎಂ. ಶಾಂತಮ್ಮ; ಏಷಿಯಾ,ಇಂಡಿಯಾ ರೆಕಾರ್ಡ್ ಸಾಧನೆ


ತುಮಕೂರು : ಮಹಿಳಾ ಅಧಿಕಾರಿಯಾಗಿ ಅನೇಕ ಕೆಲಸದ ಒತ್ತಡಗಳ ನಡುವೆಯೂ ತುಮಕೂರು ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕಿ ಎಂ. ಶಾಂತಮ್ಮ ಏಷಿಯಾ ಹಾಗೂ ಇಂಡಿಯಾ ರೆಕಾರ್ಡ್ ಸಾಧನೆ ಮಾಡಿದ್ದಾರೆ. ಅಂತೆಯೇ, ಜಿಲ್ಲಾ ಕಾರಾಗೃಹದ ವಾರ್ಡರ್ ಶಾಂತಿನಾಥ ಭರತೇಶ ಖುರ್ದ ಅವರೂ ಏಷಿಯಾ ಹಾಗೂ ಇಂಡಿಯಾ ರೆಕಾರ್ಡ್ ಸಾಧನೆ ಮಾಡಿದ್ದಾರೆ.

ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕಿಯಾದ ಎಂ.ಶಾಂತಮ್ಮ ಹಾಗೂ ಜಿಲ್ಲಾ ಕಾರಾಗೃಹದ ವಾರ್ಡರ್ ಶಾಂತಿನಾಥ ಭರತೇಶ ಖುರ್ದ ಅವರು 2021 ರ ಜನವರಿ 16 ರಂದು ನಡೆದ Maximum People solving 3X3X3 Rubix’s Cube on a Digital platform ನಲ್ಲಿ ASIA BOOK OF RECORDS AND INDIA BOOK OF RECORDS ನಲ್ಲಿ ನಮೂದಿಸುವಂತಹ ಸಾಧನೆ ಮಾಡಿದ್ದಾರೆ.
ಈ ಇಬ್ಬರ ಸಾಧನೆಯನ್ನು ಗೌರವಿಸಿ, ಪ್ರಶಂಶಿಸಿ ಪ್ರಮಾಣ ಪತ್ರ ಮತ್ತು ಮೆಡಲ್ಸ್‌ಗಳನ್ನು ನೀಡಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗಿದೆ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!