ರಾಮಮಂದಿರ ನಿರ್ಮಾಣಕ್ಕೆ ಕೈಲಾದ ಸಹಾಯ ಮಾಡಿ:ಪೇಜಾವರ ಶ್ರೀ.

ಮಧುಗಿರಿ : ರಾಮ ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು  ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.     

ಪಟ್ಟಣದ ಮಲ್ಲೇಶ್ವರ ಸ್ವಾಮಿ ಹಾಗೂ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದರಂತೆ ರಾಮ ಮಂದಿರ ನಿರ್ಮಾಣದ ಕೆಲಸಗಳು ಭರದಿಂದ ನಡೆಯುತ್ತಿವೆ. ರಾಮನ ಮಂತ್ರಗಳನ್ನು ಪ್ರತಿಯೊಬ್ಬರ ಮನೆಯಲ್ಲಿ ಜಪಿಸಬೇಕೆಂದು ತಿಳಿಸಿದರು.

ಹಿಂದೂಗಳು ಮತಾಂತರ ಆಗುವುದನ್ನು ನಿಲ್ಲಿಸಬೇಕು. ಹಿಂದೂ ಸಂಸ್ಕೃತಿಗೆ ವಿಶೇಷವಾದ ಸ್ಥಾನಗಳಿದೆ ಎಂದರು. ರಾಮ ಮಂದಿರ ಉಳಿಸುವ ಕಾರ್ಯ ಪ್ರತಿಯೊಬ್ಬರ ಮೇಲಿದೆ ಎಂದರು.

ರಾಮ ಮಂದಿರ ನಿರ್ಮಾಣಕ್ಕೆ  ಭಕ್ತಾದಿಗಳು ತಮ್ಮ ಕೈಲಾದ ಧನಸಹಾಯ ಮಾಡಬೇಕು ಹಾಗೂ ಪ್ರತಿಯೊಬ್ಬರ ಹಣ ರಾಮ ಮಂದಿರಕ್ಕೆ ಸೇರಬೇಕೆಂದು ತಿಳಿಸಿದರು.

ಪುರಸಭೆ ಸದಸ್ಯರಾದ ಕೆ.ನಾರಾಯಣ್ಮುಖಂಡರಾದ ಎಂ.ಜಿ.ಶ್ರೀನಿವಾಸಮೂರ್ತಿ, ಕಿರಣ್ ,ಕಿಶೋರ್, ಕೆ.ಎಸ್.ರಾಮಚಂದ್ರ ರಾವ್, ಸೂರ್ಯನಾರಾಯಣ್, ಬಿ.ಪಿ.ನಾರಾಯಣ್, ಹೆಬ್ಬಾರ್, ಚಿ.ಸೂ.ಕೃ?ಮೂರ್ತಿ, ಗುಂಡೂರಾವ್ ,ಸತ್ಯಾನಂದಾ, ನಾಗರಾಜು ಇದ್ದರು.

Leave a Reply

Your email address will not be published. Required fields are marked *

error: Content is protected !!