ಲಂಡನ್ ರಾಣಿಯ ಹತ್ಯೆಗೆ ಸಂಚು: ಆರೋಪಿ ಬಂಧನ

ಲಂಡನ್, ಡಿಸೆಂಬರ್ 28: ಬ್ರಿಟನ್ ರಾಣಿ ಕ್ವೀನ್ ಎಲಿಜಬೇತ್ ಹತ್ಯೆಗೆ ಯತ್ನಿಸಿದ 19 ವರ್ಷದ ಯುವಕನನ್ನ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತನ ವಿಚಾರಣೆ ನಡೆಸಿದ ಪೊಲೀಸರು ಮಹತ್ವದ ಮಾಹಿತಿಯನ್ನ ಕಲೆಹಾಕಿದ್ದಾರೆ. ಆರೋಪಿಯೂ ಭಾರತ ಮೂಲದವನಾಗಿದ್ದು, ಜಶ್ವಂತ್ ಸಿಂಗ್ ಛಾಯಲ್ ಎಂದು ತಿಳಿದುಬಂದಿದೆ.

ವಿಂಡ್ಸರ್ ಕ್ಯಾಸಲ್ ನಲ್ಲಿ ಕ್ರಿಸ್ಮಸ್ ಆಚರಣೆ ಹಿನ್ನೆಲೆ ರಾಣಿ ಎಲಿಜಬೇತ್ ಆಗಮಿಸಿದ್ದರು. ಜ್ಸಸ್ವಂತ್ ಸಿಂಗ್ ಕೈಯಲ್ಲಿ ಬಾಣ ಬಿಲ್ಲುಬಿನಂಥ ಆಯುಧದೊಂದಿಗೆ ರಾಣಿ ನಿವಾಸಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.

ಎಲಿಜಬೆತ್ ರಾಣಿಯನ್ನ ಕೊಲ್ಲಲು ಕಾರಣ ತಿಳಿಸಿದ ಆರೋಪಿ:

1919 ರಲ್ಲಿ ಭಾರತದ ಜಲಿಯನ್ ವಾಲಾಭಾಗ್ ನಲ್ಲಿ ನಡೆದ ಹತ್ಯಾಕಾಂಡದ ಪ್ರತಿಕಾರವಾಗಿ ಎಲಿಜಬೆತ್ ರಾಣಿಯನ್ನ ಕೊಲ್ಲಲು ಮುಂದಾಗಿದ್ದಾನೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖಕ್ಕೆ ಮುಸುಕು ಧರಿಸಿ ವೀಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಎನ್ನಲಾಗಿದೆ. ಈತನ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಮಾನಸಿಕ ಆಸ್ಪತ್ರೆಯಲ್ಲಿ ಇರಿಸಿದ್ದಾರೆ.

error: Content is protected !!