ಆದಿಜಾಂಬವ ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.

ತಿಪಟೂರು: ಶ್ರೀ ಆದಿಜಾಂಬವ ಪರಿಶಿಷ್ಠ ಜಾತಿ ವಿವಿದೋದ್ದೇಶ ಸಹಕಾರ ಸಂಘ ತಿಪಟೂರು ವತಿಯಿಂದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನರಸಿಂಹಯ್ಯ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ತಿಪಟೂರು ಮತ್ತು ತುರುವೇಕೆರೆ ತಾಲ್ಲೂಕಿನ ನಿವಾಸಿಯಾಗಿದ್ದು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಶೇ85% ಕ್ಕಿಂತ ಹೆಚ್ಚಿನ ಅಂಕಗಳಿಸಿರುವ ಆದಿಜಾಂಬವ ( ಮಾದಿಗ) ಸಮುದಾಯದ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿಗಳು ಅಂಕಪಟ್ಟಿಯ ಜೆರಾಕ್ಸ್ , ಜಾತಿಪ್ರಮಾಣ ಪತ್ರ ಹಾಗೂ ಇತ್ತೀಚಿನ 2 ಭಾವಚಿತ್ರ ಗಳೊಂದಿಗೆ ದಿನಾಂಕ 21-12-2021 ರೊ ಗಳಗಾಗಿ ಶ್ರೀ ಆದಿಜಾಂಬವ ಪರಿಶಿಷ್ಠ ಜಾತಿ ವಿವಿದೋದ್ದೇಶ ಸಹಕಾರ ಸಂಘ (ನಿ) ಶ್ರೀ ಕಾಲಬೈರೇಶ್ವರ ನಿಲಯ ಎರಡನೇ ಮಹಡಿ 5ನೇ ಮುಖ್ಯರಸ್ತೆ ಅಮರಾವತಿ ರೆಸಿಡೆನ್ಸಿ ಹಿಂಬಾಗ ವಿನಾಯಕನಗರ ತಿಪಟೂರು ಇಲ್ಲಿಗೆ ನೇರವಾಗಿ ಬಂದು ಸಲ್ಲಿಸುವಂತೆ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ ಸಂಖ್ಯೆ:9538703959, 8050963585, 8217440040 ಸಂಪರ್ಕಿಸಲು ಕೋರಿದೆ.

error: Content is protected !!