ಅಮೆರಿಕ;ಗುಂಡಿನ ದಾಳಿ….ಮೂವರು ಸ್ಥಳದಲ್ಲೇ ಸಾವು ಮತ್ತೊಬ್ಬನಿಗೆ ಗಾಯ

ಟೆಕ್ಸಾಸ್​, ಡಿ 28: ವ್ಯಕ್ತಿಯೊಬ್ಬ ಮಳಿಗೆಯೊಂದಕ್ಕೆ ನುಗ್ಗಿ ಮನಸೊ ಇಚ್ಚೆ ಗುಂಡುಹಾರಿಸಿದ ಪರಿಣಾಮ ಮೂವರು ಮೃತಪಟ್ಟು, ಮತ್ತೊಬ್ಬ ವ್ಯಕ್ತ ಗಾಯಗೊಂಡಿರುವ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಲ್ಲಿ ನಡೆದಿದೆ ವರದಿಯಾಗಿದೆ.

ಡಲ್ಲಾಸ್​ನಲ್ಲಿ ಭಾನುವಾರ ರಾತ್ರಿ ನಡೆದ ಗುಂಡಿನ ದಾಳಿ ಘಟನೆ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ವ್ಯಕ್ತಿಯೊಬ್ಬ ಬಿಳಿ ಬಣ್ಣದ ಪಿಕಪ್ ಟ್ರಕ್‌ನಿಂದ ಹೊರಬಂದು, ಮಳೆಗೆ ನುಗ್ಗಿ ಅಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾನೆ.

ನಾಲ್ವರ ಮೇಲೆ ಆತ ಗುಂಡು ಹಾರಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ದಾಳಿಯಲ್ಲಿ ಮೃತಪಟ್ಟವರು ಹಾಗೂ ಗಾಯಾಳುಗಳ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ
ಗುಂಡು ಹಾರಿಸಿದ ನಂತರ ದುಷ್ಕರ್ಮಿ ಬಂದಿದ್ದ ಟ್ರಕ್​ ಅನ್ನೇ ಹತ್ತಿಗೆ ಪರಾರಿಯಾಗಿದ್ದಾನೆ. ಆ ವ್ಯಕ್ತಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

error: Content is protected !!