ಗುಬ್ಬಿ. ಪೋನ್ ಪೇ ಮೂಲಕ ಲಂಚಪಡೆದ ಆರೋಪ.ಪಿಎಸ್ಐ ಜ್ಞಾನ ಮೂರ್ತಿ ಅಮಾನತು. ಎಸ್.ಪಿ.ಆದೇಶ

ಗುಬ್ಬಿ: ಪಟ್ಟಣ ಪೋಲಿಸ್ ಠಾಣೆ ಪೊಲೀಸ್ ಉಪ ನಿರೀಕ್ಷಕ ಜ್ಞಾನ ಮೂರ್ತಿಯನ್ನು ಲಂಚ ಸ್ವೀಕಾರ ಆರೋಪದಡಿ ಎಸ್.ಪಿ ರಾಹುಲ ಕುಮಾರ್ ಶಹಾಪುರ ವಾಡ್ ಅಮಾನತು ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ : ಈ ಹಿಂದೆ ಮ್ಯಾಕ್ಸಿ ಕ್ಯಾಬ್ ಚಾಲಕನೊಬ್ಬ ನನ್ನು ವಿನಾಕಾರಣ ತಡೆದು ಶುಲ್ಕ ರೀತಿಯಲ್ಲಿ 7 ಸಾವಿರ ಹಣವನ್ನು ಸಬ್ ಇನ್ಸ್ಪೆಕ್ಟರ್ ಜ್ಞಾನ ಮೂರ್ತಿ ಫೋನ್ ಪೆ ಮೂಲಕ ಹಣ ಪಡೆದಿದ್ದರು. ಈ ಹಿನ್ನೆಲೆ ಮ್ಯಾಕ್ಸಿ ಕ್ಯಾಬ್ ಚಾಲಕ ಸೇರಿದಂತೆ, ತಾಲೂಕು ಸಂಘಟನೆಗಳು ಸಬ್ ಇನ್ಸ್ಪೆಕ್ಟರ್ ನಡೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪ್ರಕರಣ ಕುರಿತು ತನಿಖೆ ನಡೆಸಾಲಾಗಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಜ್ಞಾನ ಮೂರ್ತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

error: Content is protected !!