ದರ್ಶನ್ ಕಟೌಟ್ ಗೆ ಮದ್ಯಾಭಿಷೇಕ: ಹಾಲು ಓಲ್ಡ್, ಹಾಲ್ಕೊಹಾಲು ಲೇಟೆಸ್ಟ್.

ತಿಪಟೂರು: ಹಾಲು ಓಲ್ಡ್… ಹಾಲ್ಕೋಹಾಲ್ ಲೇಟೆಸ್ಟ್ , ಥಿಯೆಟರ್ ನಲ್ಲಿ ಮದ್ಯದೋಕುಳಿಯಾಡಿದ ದರ್ಶನ್ ಅಭಿಮಾನಿಗಳು, ದರ್ಶನ್ ಕಟೌಟ್, ಫ್ಲೆಕ್ಸ್ ಗೆ ಬಿಯರ್ ಅಭಿಷೇಕ ಮಾಡಿ ಸಂಭ್ರಮ.

ಬಹುನಿರೀಕ್ಷಿತ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇಂದು ಅದ್ದೂರಿಯಾಗಿ ತೆರೆಕಂಡಿದೆ. ಬೆಳಗ್ಗೆಯಿಂದಲೂ ಚಿತ್ರಮಂದಿರಗಳಲ್ಲಿ ಹಬ್ಬದ ವಾತವಾರಣ ನಿರ್ಮಾಣವಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ವಿವಿಧ ರೀತಿಯಲ್ಲಿ ಅಭಿಮಾನ ವ್ಯಕ್ತ ಪಡಿಸುತ್ತಿದ್ದಾರೆ.

ಹಲವಡೆ ಚಿತ್ರಮಂದಿರಗಳಲ್ಲಿ ದರ್ಶನ್ ಅಭಿಮಾನಿಗಳು ದರ್ಶನ್ ಕಟೌಟ್ ಗೆ ಹಾರ ತುರಾಯಿ ಹಾಕಿ ಹಾಲಿನ ಅಭಿಷೇಕ ಮಾಡಿದ್ರೆ  ತಿಪಟೂರಿನಲ್ಲಿ ಹಾಲ್ಕೋಹಾಲ್ ನಲ್ಲಿ ಅಭಿಷೇಕ ಮಾಡಿದ್ದಾರೆ. ತಿಪಟೂರಿನ ತ್ರಿಮೂರ್ತಿ ಚಿತ್ರಮಂದಿರದಲ್ಲಿ ಈ ಇಂತಹ ಘಟನೆ ನಡೆದಿದೆ.

ದರ್ಶನ್ ಫ್ಲೆಕ್ಸ್ ಗೆ ಬಿಯರ್ ನಿಂದ ಅಭಿಷೇಕ ಮಾಡುತ್ತಿರುವ ಅಭಿಮಾನಿಗಳು

ನಾಲ್ಕೈದು ಜನ ಯುವಕರು ಥಿಯೆಟರ್ ಆವರಣದಲ್ಲೆ ಮದ್ಯ ಸೇವಿಸಿ ಫುಲ್ ಟೈಟಾಗಿ  ದರ್ಶನ್ ಫ್ಲೆಕ್ಸ್ ಗೆ ಬಿಯರ್ ನಿಂದ ಅಭಿಷೇಕ ಮಾಡಿ ಸಂಭ್ರಮಸಿದ್ದಾರೆ. ಥಿಯೇಟರ್ ಆವರಣದಲ್ಲೆ ಮಧ್ಯ ಸೇವನೆಮಾಡಿ ಪುಂಡಾಟಿಕೆ ಮೆರೆದಿದ್ದಾರೆ.

ಯುವಕರ ವರ್ತನೆಗೆ ಇತರ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದು ಮದ್ಯದ ಅಭಿಷೇಕ ಮಾಡಿ ದರ್ಶನ್ ಗೆ ಅಪಮಾನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದು ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಸಿದ್ದಾರೆ ಇಂತಹವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !!