ನಟ ಪುನೀತ್ ನಿಧನ: ಸ್ಥಳಕ್ಕೆ ಭಾರದ ಸಂಸದ ಪ್ರತಾಪ್ ಸಿಂಹ: ಕಾರಣ ಏನ್ ಗೊತ್ತಾ.

ಬೆಂಗಳೂರು: ನಟ ಪುನೀತ್​ ನಿಧನಕ್ಕೆ ಸಂಸದ ಪ್ರತಾಪ್​ ಸಿಂಹ ಸಂತಾಪ ಸೂಚಿಸಿದ್ದಾರೆ. ಪುನೀತ್ ರಾಜ್​ಕುಮಾರ್ ನಿಧನ, ಅಂತ್ಯಕ್ರಿಯೆ ಬಳಿಕ ಇಂದು (ಅಕ್ಟೋಬರ್ 31) ಅವರು ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್​ಕುಮಾರ್​ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ನಟ ಪುನೀತ್​ರನ್ನ ಶವವಾಗಿ ನೋಡುವುದಕ್ಕೆ ಮನಸ್ಸಾಗಿಲ್ಲ. ಹಾಗಾಗಿ ನಾನು ನಿನ್ನೆ ಬಂದಿರಲಿಲ್ಲ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.

ಸಹಜವಾಗಿ ನಮಗೆಲ್ಲರಿಗೂ ವೇದನೆ ಆಗಿದೆ. ಪುನೀತ್ ಅವರನ್ನು ಶವವಾಗಿ ನೋಡಲು ಮನಸ್ಸಾಗಿಲ್ಲ. ಹಾಗಾಗಿ ನಿನ್ನೆ ಬಂದಿರಲಿಲ್ಲ. ಕೊನೆಗೆ ಸಮಾಧಿಯನ್ನಾದ್ರೂ ನೋಡೋಣ ಅಂತ ಬಂದಿದ್ದೇನೆ. ರಾಘವೇಂದ್ರ ರಾಜ್​ಕುಮಾರ್ ಅವರನ್ನು ಸಹ ಭೇಟಿ ಮಾಡಿದ್ದೇನೆ. ಅವರು ಬಹಳ ವಿನಮ್ರ ಸ್ವಭಾವದ ವ್ಯಕ್ತಿ. ನನ್ನ ಹೆಂಡತಿಗೂ ಸಹ ಪುನೀತ್ ಅಂದ್ರೆ ತುಂಬಾ ಇಷ್ಟ. ಅವರು ನಮ್ಮ ಮನೆಗೂ ಅಹ ಬಂದಿದ್ರು. ಎಷ್ಟು ದೊಡ್ಡ ಸ್ಟಾರ್ ಆಗಿದ್ರೂ ಸರಳವಾಗಿ ಇದ್ದ ವ್ಯಕ್ತಿ ಅವರು. ನಟ ಪುನೀತ್​ ಅಪಾರ ನೆನಪುಗಳನ್ನ ಬಿಟ್ಟು ಹೋಗಿದ್ದಾರೆ. ನಟ ಪುನೀತ್​ ರಾಜ್​​ಕುಮಾರ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರತಾಪ್ ಸಿಂಹ ಹಾರೈಸಿದ್ದಾರೆ.

ಪಿಆರ್​ಕೆ ಪ್ರೊಡಕ್ಷನ್​ ಏನಾಗಲಿದೆ?

2017ರ ಜುಲೈ 20ರಂದು ಪಿಆರ್​ಕೆ ಪ್ರೊಡಕ್ಷನ್​ ಸ್ಥಾಪನೆ ಆಯಿತು. ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಈ ನಿರ್ಮಾಣ ಸಂಸ್ಥೆ ಆರಂಭಗೊಂಡಿದೆ. ‘ಕವಲುದಾರಿ’ ಈ ಪ್ರೊಡಕ್ಷನ್​ ಹೌಸ್​ನಿಂದ ಹೊರ ಬಂದ ಮೊದಲ ಸಿನಿಮಾ. 2019ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ನಂತರ ‘ಮಾಯಾಭಜಾರ್​ 2016’, ಲಾ, ಫ್ರೆಂಚ್​ ಬಿರಿಯಾನಿ ಸಿನಿಮಾಗಳು ಈ ಪ್ರೊಡಕ್ಷನ್​ ಹೌಸ್​ನಿಂದ ಮೂಡಿ ಬಂದಿವೆ. ಇದಲ್ಲದೆ, ಫ್ಯಾಮಿಲಿ ಪ್ಯಾಕ್​, ಮ್ಯಾನ್​ ಆಫ್​ ದಿ ಮ್ಯಾಚ್​, ಓ2 ಸಿನಿಮಾಗಳನ್ನು ಈ ಪ್ರೊಡಕ್ಷನ್​ ಹೌಸ್​ ನಿರ್ಮಾಣ ಮಾಡುತ್ತಿದೆ.

ಪಿಆರ್​ಕೆ ಪ್ರೊಡಕ್ಷನ್​ ಆರಂಭಿಸಿದ್ದು ಪುನೀತ್​ ರಾಜ್​ಕುಮಾರ್​ ಅವರೇ ಆದರೂ ಇದನ್ನು ನೋಡಿಕೊಳ್ಳುವ ಜವಾಬ್ದಾರಿ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ವಹಿಸಿಕೊಂಡಿದ್ದರು. ಹೀಗಾಗಿ, ಅಶ್ವನಿ ಅವರೇ ಪಿಆರ್​ಕೆ ಪ್ರೊಡಕ್ಷನ್​ ಹೌಸ್​ಅನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ. ಪಿಆರ್​ಕೆ ಪ್ರೊಡಕ್ಷನ್​ ಹೌಸ್​ ಜತೆ ಪಿಆರ್​ಕೆ ಆಡಿಯೋ ಕೂಡ ಇದೆ. ಇವೆರಡರ ಸಂಪೂರ್ಣ ಜವಾಬ್ದಾರಿ ಅಶ್ವಿನಿ ಅವರ ಹೆಗಲು ಏರಿದೆ.

Leave a Reply

Your email address will not be published. Required fields are marked *

error: Content is protected !!