ಕೊಡಗು : ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾಮದ ಮನೆಯೊಂದರ ಬಳಿ ಎಮ್ಮೆಮಾಡು ಗ್ರಾಮದ ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನ ಬೆಳೆದಿದ್ದ ಮಹಮ್ಮದ್ ಕೆ.ಎಂ.(43) ಎಂಬಾತನನ್ನ ಕೊಡಗು ಪೊಲೀಸರು ಬಂದಿಸಿದ್ದಾರೆ. ಬಂಧಿತ ಆರೋಪಿಯಿಂದ ತೋಟದಲ್ಲಿ ಬೆಳೆಯಲಾಗಿದ್ದ 35 ಕೆ.ಜಿ. 675 ಗ್ರಾಂ ಹಸಿ ಗಾಂಜಾ ಮತ್ತು 275 ಗ್ರಾಂ ಒಣ ಗಾಂಜಾವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ನಿರ್ದೇಶನದಂತೆ ಡಿವೈಎಸ್‌ಪಿ ರವಿ, ವೃತ್ತ ನಿರೀಕ್ಷಕ ಐ.ಪಿ.ಮೇದಪ್ಪ ಅವರ ನೇತೃತ್ವದ ವಿಶೇಷ ತಂಡ ದಾಳಿ ನಡೆಸಿ ಮಾಲು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.